ಪುರಸಭೆ ಅಧ್ಯಕ್ಷ,ಉಪಾಧ್ಯಕ್ಷರ ಪದಗ್ರಹಣ:: ಜನರ ಮನದಲ್ಲಿ ಹೆಸರು ಉಳಿಯುವ ಹಾಗೆ ಕೆಲಸ ಮಾಡಿ – ಎ, ಪಾಪರೆಡ್ಡಿ

Laxman Bariker
ಪುರಸಭೆ ಅಧ್ಯಕ್ಷ,ಉಪಾಧ್ಯಕ್ಷರ ಪದಗ್ರಹಣ::  ಜನರ ಮನದಲ್ಲಿ ಹೆಸರು ಉಳಿಯುವ ಹಾಗೆ ಕೆಲಸ ಮಾಡಿ – ಎ, ಪಾಪರೆಡ್ಡಿ
WhatsApp Group Join Now
Telegram Group Join Now

ಪುರಸಭೆ ಅಧ್ಯಕ್ಷ,ಉಪಾಧ್ಯಕ್ಷರ ಪದಗ್ರಹಣ::

ಜನರ ಮನದಲ್ಲಿ ಹೆಸರು ಉಳಿಯುವ ಹಾಗೆ ಕೆಲಸ ಮಾಡಿ – ಎ ಪಾಪರೆಡ್ಡಿ

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು.ನ.7.- ಅಧಿಕಾರ ಸಿಕ್ಕಾಗ ಜನಮಾನಸದಲ್ಲಿ ಹಚ್ಚಹಸಿರಾಗಿ ಹೆಸರು ಉಳಿಯುವ ಹಾಗೆ ಅಭಿವೃದ್ಧಿ ಕಾರ್ಯಗಳನ್ನು ಮಾಡಿದಾಗ ಮಾತ್ರ ನಮ್ಮ ಹೆಸರು ಉಳಿಯುತ್ತದೆ ಎಂದು ರಾಯಚೂರು ಕ್ಷೇತ್ರದ ಮಾಜಿ ಶಾಸಕರಾದ ಎ ಪಾಪರೆಡ್ಡಿ ಹೇಳಿದರು.

ಲಿಂಗಸುಗೂರಿನ ದೊಡ್ಡ ಹನುಮಂತ ದೇವಸ್ಥಾನದ ಮುಂದುಗಡೆ ಹಮ್ಮಿಕೊಳ್ಳಲಾಗಿದ್ದ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಪ್ರತಿಯೊಬ್ಬ ಮನುಷ್ಯ ಅಧಿಕಾರ ಸಿಕ್ಕಾಗ ಅಭಿವೃದ್ಧಿಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪುರಸಭೆ ವ್ಯಾಪ್ತಿಯ ಮೂಲಭೂತ ಸಮಸ್ಯೆಗಳಿಗೆಹೆಚ್ಚು ಒತ್ತು ನೀಡಿ ನಿಸ್ವಾರ್ಥ್ ಮನೋಭಾವದಿಂದ ಕಾರ್ಯ ನಿರ್ವಹಿಸಿದರೆ ಅದೇ ನಾವು ನಮ್ಮ ಮೇಲೆ ವಿಶ್ವಾಸವಿಟ್ಟು ಅಧಿಕಾರದಲ್ಲಿ ಕೂಡಿಸಿದ ಸದಸ್ಯೆರಿಗೂ ಹಾಗು ರಾಜಕೀಯ ನಾಯಕರಿಗೂ ನಾವು ಕೊಡುವ ದೊಡ್ಡ ಗೌರವ.
ಇ ದಿಸೆಯಲ್ಲಿನೂತನವಾಗಿ ಆಯ್ಕೆಯಾದ ಅಧ್ಯಕ್ಷರು ಮತ್ತು ಉಪಾಧ್ಯಕ್ಷೆರು ಕ್ಷೆತ್ರದ ಹಾಗೂ ಪುರಸಭೆ ವ್ಯಾಪ್ತಿಯ ವಾರ್ಡಗಳ ಸಮಸ್ಸೆಗಳಿಗೆ ಸದಾ ಸ್ಪಂದಿಸುವ ಕೆಲಸ ಮಾಡಬೇಕಾಗಿದೆ.

ಅಲ್ಫಾಸಂಖ್ಯಾತಾರಾದ ನಮ್ಮ ಸಮುದಾಯಕ್ಕೆ ಲಿಂಗಸಗೂರ ಪುರಸಭೆ ಆದ್ಯಕ್ಷ ಸ್ಥಾನ ಒದಗಿಸಿಕೊಟ್ಟ ಮಾಜಿ ಶಾಸಕರಾದ ಡಿ ಎಸ್ ಹೂಲಗೇರಿ ಅವರಿಗೆ ಅಭಿನಂದನೆಗಳು ಸಲ್ಲಿಸುವೆ ಎಂದು ಅವರು ಹೇಳಿದರು.

ಪ್ರಾಸ್ತಾವಿಕವಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಗೋವಿಂದ ನಾಯಕ ಅವರು ಮಾತನಾಡಿ ಎರಡು ಬಾರಿ ಪುರಸಭೆ ಸದಸ್ಯರಾಗಿ ಆಯ್ಕೆಯಾದ ಬಾಬುರೆಡ್ಡಿ ಮುನ್ನೂರ ಅವರು ಸರಳ ಸ್ವಭಾವದ ವ್ಯಕ್ತಿಯಾಗಿದ್ದು 29 ವರ್ಷಗಳ ನಂತರ ಮುನ್ನೂರು ಕಾಪು ಸಮಾಜಕ್ಕೆ ಮತ್ತೆ ಅಧ್ಯಕ್ಷ ಸ್ಥಾನ ಸಿಕ್ಕಿದ್ದು ಬಾಬು ರೆಡ್ಡಿ ನಿಸ್ವಾರ್ಥ ಸೇವೆಯಿಂದ.
ಡಿ ಎಸ್ ಹೂಲಗೇರಿಯವರ ಮಾರ್ಗದರ್ಶನದಲ್ಲಿ ಎಲ್ಲ ಪುರಸಭೆ ಸದಸ್ಯರ ವಿಶ್ವಾಸದೊಂದಿಗೆ ಪುರಸಭೆ ವ್ಯಾಪ್ತಿಯ ಎಲ್ಲಾ ವಾರ್ಡ್ ಗಳ ಸಮಸ್ಯೆಗಳಿಗೆ ಅವರು ಸದಾ ಕಾಲ ಸ್ಪಂದಿಸುತ್ತಾರೆ ಎಂಬ ಮನೋಭಾವ ನಮ್ಮಲ್ಲಿದ್ದು ಬಾಬು ರೆಡ್ಡಿ ಅವರನ್ನು ಬೆಂಬಲಿಸಿದ ಪುರಸಭೆಯ 14 ಜನ ಸದಸ್ಯರಿಗೆ ಅಭಿನಂದನೆಗಳನ್ನು ಸಲ್ಲಿಸುವೆ. ನೂತನವಾಗಿ ಆಯ್ಕೆಯಾದ ಅಧ್ಯಕ್ಷೆ ಮತ್ತು ಉಪಾಧ್ಯಕ್ಷರ ಹೆಚ್ಚಿನ ಜವಾಬ್ದಾರಿ ಇದು ಅವರು ಸದಾಕಾಲ ಜನರ ಕಷ್ಟ ಸುಖಗಳಿಗೆ ಸ್ಪಂದಿಸುತ್ತಾ ಕುಡಿಯುವ ನೀರು ರಸ್ತೆ ಚರಂಡಿ ಸೇರಂತೆ ಯಾವುದೇ ಸಮಸ್ಯೆಗಳು ಉದ್ಭವಿಸದಂತೆ ಕಾರ್ಯನಿರ್ವಹಿಸಲಿ ಎಂದು ಅವರು ಹೇಳಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಎಪಿಎಂಸಿ ಮಾಜಿ ಅಧ್ಯಕ್ಷರಾದ ಸಿದ್ದನಗೌಡ ಪೊಲೀಸ್ ಪಾಟೀಲ್ ಮಾತನಾಡಿದರು. ಪುರಸಭೆ ಅಧ್ಯಕ್ಷರಾದ ಬಾಬುರೆಡ್ಡಿ ಮುನ್ನೂರು ಅವರು ಮಾತನಾಡಿ ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿ ನನ್ನನ್ನು ಈ ಸ್ಥಾನಕ್ಕೆ ಕೂಡಿಸಲು ಕಾರಣಿ ಕರ್ತರಾದ ಮಾಜಿ ಶಾಸಕರು ಕೆಪಿಸಿಸಿ ರಾಜ್ಯ ಉಪಾಧ್ಯಕ್ಷರಾದ ಡಿಎಸ್ ಹುಲಗೇರಿ ಅವರಿಗೆ ಹಾಗೂ ಪಟ್ಟಣದ ಪುರಸಭೆ ವ್ಯಾಪ್ತಿಯ ಎಲ್ಲಾ ಸದಸ್ಯರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತಾ ಪುರಸಭೆ ವ್ಯಾಪ್ತಿಯ 23 ವಾರ್ಡುಗಳಿಗೂ ಯಾವುದೇ ರೀತಿಯ ತೊಂದರೆಯಾಗದಂತೆ ನಿಗ ವಹಿಸುವುದಾಗಿ ಅವರು ಹೇಳಿದ ಅವರು ಯಾವತ್ತೂ ನಿಮ್ಮ ಪ್ರೀತಿ ವಿಶ್ವಾಸಕ್ಕೆ ಚಿರಋಣಿಯಾಗಿರುವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಶಿವಾನಂದ ಐದ ನಾಳ,ಪುರಸಭೆ ಉಪಾಧ್ಯಕ್ಷ ಶ್ರೀಮತಿ ಶರಣಮ್ಮ ಅಮರಪ್ಪ ಕೊಡ್ಲಿ, ಡಾ. ಶಿವಬಸಪ್ಪ ಹೆಸರೂರ, ಪುರಸಭೆ ಸದಸ್ಯರಾದ ದೊಡ್ಡನಗೌಡ ಹೊಸಮನಿ,ಯಮನಪ್ಪ ದೇಗುಲಮಡಿ,ರಾಜಪ್ಪ ರೆಡ್ಡಿ ಮುನ್ನೂರ, ಪ್ರಭು ಸ್ವಾಮಿ ಅತ್ತನೂರ, ರುದ್ರಪ್ಪ ಬ್ಯಾಗಿ, ಮಹಿಳಾ ಕಾಂಗ್ರೆಸ್ಅಧ್ಯಕ್ಸರಾದ ವಿಜಯಲಕ್ಸ್ಮಿ, . ಡಿ ಎಚ್ ಕಡದಳ್ಳಿ, ಹನುಮಂತ ಇಂಜಿನಿಯರ್ ರಾಯಚೂರು, ಮೈಬೂಬ್ ಸಾಬ್,ವಾಹಿದ ಖಾದ್ರಿ,ಗ್ಯಾನಪ್ಪ ಕಟ್ಟಿಮನಿ, ಕಾಳಪ್ಪ ಬಡಿಗೇರ್, ಅಮರೇಶ್ ಹೆಸರೂರ, ಸೇರಿದಂತೆ ಇತರರು ಉಪಸ್ಥಿತರಿದ್ದರು. ಶಶಿಕುಮಾರ್ ಲಕ್ಷ್ಮಿ ಕಾರ್ಯಕ್ರಮ ನಿರ್ವಹಿಸಿದರೆ ರೇಷ್ಮಾ ಪ್ರಾರ್ಥನ ಗೀತೆಯನ್ನು ಹಾಡಿದರು.

WhatsApp Group Join Now
Telegram Group Join Now
Share This Article