ಬೆಳಗಾವಿ:ಎಸ್ ಡಿ ಎ ನೌಕರ ಆತ್ಮಹತ್ಯೆ,ಕಂದಾಯ ನೌಕರರ ಸಂಘ ಕ್ರಮಕ್ಕೆ ಒತ್ತಾಯ

Laxman Bariker
ಬೆಳಗಾವಿ:ಎಸ್ ಡಿ ಎ ನೌಕರ ಆತ್ಮಹತ್ಯೆ,ಕಂದಾಯ ನೌಕರರ ಸಂಘ ಕ್ರಮಕ್ಕೆ ಒತ್ತಾಯ
WhatsApp Group Join Now
Telegram Group Join Now

ಬೆಳಗಾವಿ:ಎಸ್ ಡಿ ಎ ನೌಕರ ಆತ್ಮಹತ್ಯೆ,ಕಂದಾಯ ನೌಕರರ ಸಂಘ ಕ್ರಮಕ್ಕೆ ಒತ್ತಾಯ

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು:ಬೆಳಗಾವಿ ಜಿಲ್ಲೆಯ ಕಂದಾಯ ನೌಕರ ಎಸ್,ಡಿ,ಎ ರುದ್ರಣ್ಣ ಯಡವಣ್ಣನವರ್ ಆತ್ಮಹತ್ಯೆ ಮಾಡಿಕೊಂಡಿದ್ದು ಅದರ ಹಿಂದೆ ಇರುವ ತಪ್ಪಿತಸ್ಥರ ವಿದುದ್ದ ಸೂಕ್ತಕ್ರಮ ಕೈಗೊಂಡು ನ್ಯಾಯದೊರಕಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಕಂದಾಯ ಇಲಾಖೆ ತಾಲೂಕಾ ನೌಕರರ ಸಂಘ ಜಿಲ್ಲಾಧಿಕಾರಿಗಳಿಗೆ ಬರೆದ ಮನವಿಯನ್ನು ತಹಸೀಲ್ದಾರರ ಮೂಲಕ ಸಲ್ಲಿಸಿ ಕ್ರಮಕ್ಕೆ ಒತ್ತಾಯಿಸಿದರು
ಬೆಳಗಾವಿ ಜಿಲ್ಲೆಯ ಬೆಳಗಾವಿ ತಾಲೂಕಾ ಕಛೇರಿಯಲ್ಲಿ ದ್ವಿತಿಯದರ್ಜೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದ ರುದ್ರಣ್ಣ ಯಡವಣ್ಣನವರ್ ದಿನಾಂಕ ನವಂಬರ ೫ರಂದು ಬೆಳಗಾವಿ ತಾಲೂಕಾ ಕಛೇರಿಯ ತಹಸೀಲ್ದಾರ ಛೇಂಬರಿನಲ್ಲಿಯೆ ಫ್ಯಾನ್ ಗೆ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ತನ್ನ ಸಾವಿಗೆ ಮುನ್ನ ವಾಟ್ಸಪ್ ಗ್ರೂಪ್ನಲ್ಲಿ ತನ್ನ ಸಾವಿಗೆ ತಹಸೀಲ್ದಾರರಾದ ಬಸವರಾಜ ನಾಗರಾಳ ಹಾಗೂ ಸಿಬ್ಬಂದಿ ಅಶೋಕ ಕಬ್ಬಲಗೇರಿ, ಮತ್ತು ಸೋಮು ಎಂಬುವವರು ಕಾರಣವೆಂದು ಮೆಸೇಜು ಮಾಡಿದ್ದು ಸದರಿ ತಹಸೀಲ್ದಾರ ಕಳೆದ ಒಂದು ವರ್ಷದಿಂದ ಕಿರುಕುಳ ನೀಡುತ್ತಿದ್ದರೆಂದು ಹೇಳಿಕೊಂಡಿದ್ದಾನೆ ಕಾರಣ ರುದ್ರಣನ ಸಾವಿನ ಕುರಿತು ನ್ಯಾಯಯುತ ತನಿಖೆಯಾಗಬೇಕು ತಪ್ಪಿತಸ್ಥರ ವಿರುದ್ದ ಕ್ರಮ ಜರುಗಿಸಬೇಕು
ಅಲ್ಲದೆ ಕಂದಾಯ ಇಲಾಖೆಯಲ್ಲಿ ನೌಕರರ ಸಂಖ್ಯೆ ಕಡಿಮೆ ಇದ್ದು ಹೆಚ್ಚಿನ ಕಾರ್ಯದೊತ್ತಡವಿದೆ ಕೆಲಮೇಲಾಧಿಕಾರಿಗಳು ಸಾರ್ವಜನಿಕರ ಎದುರೆ ನಿಂದಿಸುವುದು ಖಾಲಿಹುದ್ದೆ ತುಂಬದಿರುವುದು ಸೇರಿದಂತೆ ಹಲವಾರು ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಬರೆದ ಮನವಿಯನ್ನು ತಹಸೀಲ್ದಾರ ಶಂಶಾಲA ರವರಿಗೆ ಸಲ್ಲಿಸಿದರು
ಈ ಸಂದರ್ಭದಲ್ಲಿ ಕಂದಾಯ ಇಲಾಖೆಯ ತುಳಜಾರಾಂ ಸಿಂಗ್, ಎಸ್ ಮುಗದುಂ, ಅಮರೇಶ ಶೇಕಣ್ಣನವರ್, ಅಮರೇಶ ವಿಎಒ, ಮಲ್ಲಿಕಾರ್ಜುನ ಕಿರಣ, ಸೌಮ್ಯ, ಶಿವಕುಮಾರ ದೇಸಾಯಿ, ಪೂರ್ಣಿಮಾ, ವಿನಯಕುಮಾರ, ಮಹೇಶ, ಟಿ ಎಲ್ ತಿಮ್ಮಪ್ಪ, ಮಂಜುನಾಥ, ಸಂಗನಬಸವ, ಮುಕುಂದರಾವ್, ಜಾವಿದ್, ಇರ್ಪಾನ್, ಸೇರಿದಂತೆ ಇದ್ದರು

WhatsApp Group Join Now
Telegram Group Join Now
Share This Article