ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಇಳಿದ ಸಾರಿಗೆ ಬಸ್
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ರಸ್ತೆ ಸಾರಿಗೆ ಬಸ್ ರಸ್ತೆ ಬಿಟ್ಟು ಹಳ್ಳಕ್ಕೆ ಇಳಿದಿದ್ದು ಅದೃಷ್ಟ ವಶಾತ್ ಯಾವ ಪ್ರಯಾಣಿಕರಿಗೂ ಏನು ಆಗಿಲ್ಲ ಎನ್ನುವುದೆ ಸಮಾಧಾನ ಎನ್ನುವಂತಾಗಿದೆ
ಲಿಂಗಸಗೂರು ಘಟಕಕ್ಕೆ ಸೇರಿದ ಬಸ್ ಲಿಂಗಸಗೂರು ದಿಂದ ಆನೆಹೊಸೂರು ಮಾರ್ಗವಾಗಿ ನಾಗರಾಳಗೆ ಹೊರಟಿತ್ತು ಆನೆಹೊಸೂರು ಹತ್ತಿರದ ಬೆಂಡೋಣಿ ಹಳ್ಳದ ಹತ್ತಿರ ಹೋಗುತ್ತಿರುವಾಗ ತಾಂತ್ರಿಕತೊಂದರೆ ಉಂಟಾಗಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬಿಟ್ಟು ಹರಿಯುತ್ತಿರುವ ಹಳ್ಳಕ್ಕೆ ಇಳಿದಿದೆ ಸದರಿ ಬಸ್ ನಲಿ ಸುಮಾರು 15ಜನ ಪ್ರಯಾಣಿಕರು ಇದ್ದರೆಂದು ಹೇಳಲಾಗುತಿದ್ದು ಸಣ್ಣಪುಟ್ಟ ಗಾಯಹೊರತು ಪಡಿಸಿ ಯಾರಿಗೂ ಏನು ಆಗಿಲ್ಲವೆನ್ನಲಾಗುತ್ತಿದೆ