ನೂತನ ಮೂರ್ತಿ ನಿರ್ಮಾಣ,ಬಾಜಾ ಭಜಂತ್ರಿಯೊಂದಿಗೆ ದೇವತೆಗಳ ಮೆರವಣಿಗೆ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ಕಸಬಾಲಿಂಗಸಗೂರಿನ ಶಿಲಿಗಳಾದ ಕಾಳಪ್ಪ ಬಡಿಗೇರ ಹಾಗೂ ಆತನ ಮಗನಾದ ಯಮನಪ್ಪ ಬಡಿಗೇರ ನಿರ್ಮಾಣ ಮಾಡಿದ ನೂತನ
ದ್ಯಾಮಮ್ಮ,ದುರ್ಗಾದೇವತೆಗಳನ್ನು ಬಾಜಾಭಜಂತ್ರಿಯ ಮೂಲಕ ವಟಗಲ್ ಗ್ರಾಮಸ್ಥರು ಮೆರವಣಿಗೆ ಮಾಡಿದರು
ಪಟ್ಟಣದ ರಾಯಚೂರು ರಸ್ತೆಯ ಲಕ್ಷ್ಮೀ ಗುಡಿ ಹತ್ತಿರವಿರುವ ಶಿಲ್ಪಗಳ ನಿರ್ಮಾಣ ಮಾಡುವ ಸ್ಥಳದಲ್ಲಿ ಮಸ್ಕಿ ತಾಲೂಕಿನ ವಟಗಲ್ ಗ್ರಾಮದವರು ನೂತನ ದ್ಯಾಮಮ್ಮ ಹಾಗೂ ದುರ್ಗಾದೇವಿ ಶಿಲ್ಪಗಳನ್ನು ಮಾಡಲು ಹೇಳಿದ್ದರು ಅದರಂತೆ ನೂತನ ದೇವತೆಗಳನ್ನು ನಿರ್ಮಾನ ಮಾಡಿದ್ದು ಅವುಗಳನ್ನು ಬಾಜಾ ಭಜಂತ್ರಿಗಳೊAದಿಗೆ ಮೆರವಣಿಗೆಯ ಮೂಲಕ ತಮ್ಮ ಗ್ರಾಮಕ್ಕೆ ಕರೆದುಕೊಂಡು ಹೋಗಲಾಯಿತು
ಕಾಳಪ್ಪ ಬಡಿಗೇರ ಹಾಗೂ ಯಮನಪ್ಪ ಬಡಿಗೇರ ಕಾಷ್ಟ ಶಿಲ್ಪಿಗಳಾಗಿದ್ದು ಅವರು ಹಲವಾರು ದೇವತೆಗಳು ರಥ ಇತ್ಯಾದಿ ನಿರ್ಮಾಣ ಮಾಡಿದ್ದಾರೆ ಅದರಮತೆ ವಟಗಲ್ ಗ್ರಾಮದ ದ್ಯಾಮಮ್ಮ ಹಾಗೂ ದುರ್ಗಮ್ಮ ದೇವತೆಗಳನ್ನು ನಿರ್ಮಾಣ ಮಾಡಿದ್ದರಿಂದ ಮೂರ್ತಿಗಳಿಗೆ ಪೂಜೆ ಸಲ್ಲಿಸಿ ನಂತರ ಪ್ರಸಾದ ವ್ಯವಸ್ಥೆ ಮಾಡಲಾಯಿತು ನಂತರ ಬಾಜಾ-ಭಜಂತ್ರಿಯೊಂದಿಗೆ ಗ್ರಾಮಕ್ಕೆ ಕರೆದುಕೊಂಡು ಹೋಗಲಾಯಿತು
ಈ ಸಂದರ್ಭದಲ್ಲಿ ತೋಟೇಂದ್ರ ಸ್ವಾಮಿಗಳು ವಿಶ್ವಕರ್ಮ ಏಕದಂಡಿಗಿ ಮಠ ಸುಲೇಪೇಟ ಕಲಬುರ್ಗಿ ಹಾಗೂ ಕಾಳಪ್ಪ ಬಡಿಗೇರ, ಯಮನಪ್ಪ ಬಡಿಗೇರ್, ವಟಗಲ್ ಗ್ರಾಮದ ಶಿವರಾಜ ಪಾಟೀಲ್ ಪಂಪಾಪತಿ ಪಾಟೀಲ್ ವಿಶ್ವನಾಥರಡ್ಡಿ, ಸೂಗಪ್ಪ ಚಿಲ್ಕರಾಗಿ, ಶಿವಕುಮಾರ ಬಸವರಾಜ ಹೊನ್ನಳ್ಳಿ, ಸಿದ್ದನಗೌಡ ಯಂಕೋಬನಾಯಕ,ಮೌನೇಶ ಬಡಿಗೇರ ಹಾಗೂ ಗ್ರಾಮದ ಮಹಿಳೆಯರು ಸೇರಿದಂತೆ ಹಿರಿಕಿರಿಯರು ಸೇರಿದಂತೆ ಇದ್ದರು