ಸರ್ಜಾಪೂರ:ಕಾನೂನುಬಾಹಿರ ಕೃಷಿಹೊಂಡ ನಿರ್ಮಾಣ,ಕ್ರಮ ಯಾವಾಗ?- ಗುಂಡಪ್ಪ ಯರಡೋಣ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ತಾಲೂಕಿನ ಸರ್ಜಾಪೂರ ಗ್ರಾಮದಲ್ಲಿ ಪಿಡಿಓ ಶೋಭಾರಾಣಿಯವರ ಗಂಡನ ಹೆಸರಿನಲ್ಲಿ ಕಾನೂನುಬಾಹಿರವಾಗಿ ಕೃಷಿಹೊಂಡ ನಿರ್ಮಾಣ ಮಾಡಿದ್ದು ಹಾಗೆ ನಿರ್ಮಾನ ಮಾಡಲು ಅನುಕೂಲ ಮಾಡಿದವರಿಗೂ ಹಾಗೂ ಸರಕಾರಿ ನೌಕರನಾಗಿ ಫಲಾನುಭವಿಯಾಗಿರುವ ಮಹಾಬಲೇಶ್ವರನ ಮೇಲೆ ಕ್ರಮ ಯಾವಾಗ ಎಂದು ಗ್ರಾಕೂಸನ ಗುಂಡಪ್ಪ ಯರಡೋಣ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ
ಸರ್ಜಾಪೂರ ಗ್ರಾಮಪಂಚಾಯ್ತಿ ಪಿಡಿಓ ಶೋಭಾರಾಣಿ ತಾ,ಪಂ ಗೆ ಪತ್ರ ಬರೆದು ಅಭಿವೃದ್ದಿ ಅಧಿಕಾರಿಯ ಗಂಡನಾದ ಮಹಾಬಲೇಶ್ವರ ತಂ ಸಿದ್ದಪ್ಪರವರು ತಮ್ಮ ಹೆಸರಿನಲ್ಲಿ ಕಾನೂನುಬಾಹಿರವಾಗಿ ಕೃಷಿಹೊಂಡ ನಿರ್ಮಾಣ ಮಾಡಿದ್ದಾರೆಂದು ಅವರೆ ಪತ್ರ ಬರೆಯುತ್ತಾರೆ ಅಲ್ಲದೆ ಅವರನ್ನು ಫಲಾನುಭವಿ ಮಾಡುವಲ್ಲಿ ನನ್ನ ಕೈವಾಡ ಇಲ್ಲವೆಂದು ಹೇಳುತ್ತಾರೆ ಹಾಗಾದರೆ ಅವರ ಹೆಸರನ್ನು ಶಿಪಾರಸ್ಸು ಮಾಡಿದವರು ಯಾರು ಒಬ್ಬ ಸರಕಾರಿ ನೌಕರನಾದ ಮಹಾಬಲೇಶ್ವರ ಉದ್ಯೋಗಖಾತ್ರಿಯ ಫಲಾನುಭವಿಯಾಗಿ ಸವಲತ್ತು ಪಡೆಯಲು ಅವಕಾಶವಿದೆಯಾ ಹಾಗಾದರೆ ಯಾವ ರೀತಿಯಾಗಿ ಒಬ್ಬ ಸರಕಾರಿ ನೌಕರನ ದಾಖಲಾತಿ ಪಡೆದು ಕೃಷಿಹೊಂಡ ನಿರ್ಮಾಣ ಮಾಡಿದ್ದಾರೆ ಮತ್ತು ಯಾರು ಮಾಡಿದ್ದಾರೆ ಮಾಡಿದವರ ಮೇಲೆಯೂ ಹಾಗೂ ಪಡೆದವರ ಮೇಲೆಯೂ ಸರಕಾರ ಕ್ರಮಕೈಗೊಳ್ಳುವುದು ಅಗತ್ಯವಾಗಿದೆ ಎಂದು ಅವರು ಒತ್ತಾಯಿಸಿದ್ದಾರೆ
ಕೂಲಿಕಾರರಿಂದ ಹಣವಾಪಸ್ ಪಡೆದು ಹಿಂದಿರುಗಿಸಲಾಗಿದೆ ಎನ್ನುವ ಪಿಡಿಓ: ಉದ್ಯೋಗಖಾತ್ರಿಯಲ್ಲಿ ಕೂಲಿಕಾರ್ಮಿಕರು ದುಡಿಯಲು ಬಂದಿರುತ್ತಾರೆ ಅವರಿಗೆ ಪಂಚಾಯ್ತಿಯವರು ತೋರಿಸಿದ ಜಾಗೆಯಲ್ಲಿ ಕೂಲಿಕೆಲಸ ಮಾಡುವುದು ಅವರ ಜವಾಬ್ದಾರಿಯಾಗಿರುತ್ತದೆ ಅಂತಹ ಕೂಲಿಕಾರರಿಗೆ ಮಹಾತ್ಮಗಾಂಧಿ ಉ,ಖಾ ಯೋಜನೆಯಲ್ಲಿ ಕೂಲಿಹಣ ಪಾವತಿ ಮಾಡಲಾಗಿದ್ದು ಅದನ್ನು ಹಿಂದಿರುಗಿಸುವ ಪ್ರಮೆಯೆ ಬರುವುದಿಲ್ಲ ಅವರು ಯಾವುದೆ ರೀತಿಯ ತಪ್ಪನ್ನು ಮಾಡಿರುವುದಿಲ್ಲ ಆದರೆ ಪಿಡಿಓ ಶೋಭಾರಾಣಿ ತಾ,ಪಂ ಗೆ ಪತ್ರ ಬರೆದಿದ್ದು ಅದರಲ್ಲಿ ಕೃಷಿಹೊಂಡ ಕಾನೂನುಬಾಹಿರವಾಗಿದೆ ಕೂಲಿಕಾರರಿಗೆ ಕೂಲಿಕೊಡುವ ಅವಸರವಿತ್ತು ನಾನು ಅಳತೆ ಪುಸ್ತಕದಲ್ಲಿ ನಮೂದಿಸಿದೆ ನಂತರದಲ್ಲಿ ಕೂಲಿಕಾರ್ಮಿಕರ ಸಂಘಟನೆಯವರು ಅದು ಕಾನೂನುಬಾಹಿರ ಕಾಮಗಾರಿ ಎಂದರು ಅಲ್ಲದೆ ಅಧಿಕಾರ ದುರುಪಯೋಗ ಹಾಗೂ ಹಣದುರ್ಬಳಕೆ ಎಂದರು ಅದಕ್ಕಾಗಿ ನಾನು ಸದರಿ ಕಾಮಗಾರಿಯ ಹಣವನ್ನು ಸಂಪೂರ್ಣ ಹಿಂದಿರುಗಿಸುವAತೆ ಮೆಟ್ ಹಾಗೂ ಕೂಲಿಕಾರರಿಗೆ ತಿಳಿಸಿರುವೆ ಅದರಂತೆ ಮೆಟ್ ಹಾಗೂ ಕೂಲಿಕಾರರು ಸಂಪೂರ್ಣವಾಗಿ ಹಣವನ್ನು ಸರಕಾರಕ್ಕೆ ಮರುಪಾವತಿ ಮಾಡಿರುವುದಾಗಿ ಲಿಖಿತ ಅರ್ಜಿಯಮೂಲಕ ಒಪ್ಪಿಕೊಂಡಿರುತ್ತಾರೆAದು ಬರೆದಿದ್ದು ಇಲ್ಲಿಯು ಕೂಲಿಕಾರರ ಮೇಲೆ ದಬ್ಬಾಳಿಕೆ ನಡೆಯಿತೆ ಎನ್ನಲಾಗುತ್ತಿದೆ ಅಲ್ಲದೆ ಕೂಲಿಕಾರರಿಗೆ ನೀಡಿದ ಹಣ ಹಿಂಪಡೆದ ಬಗೆಗೆ ಕ್ರಮ ಏನು ಎನ್ನುವ ಪ್ರಶ್ನೆಗಳು ಉದ್ಭವವಾಗುತ್ತದೆ
ಸರಕಾರದ ಹಣ ದುರುಪಯೋಗ ಹಾಗೂ ಸರಕಾರಿ ನೌಕರ ಉಖಾ ಯೋಜನೆಯ ಫಲಾನುಭವಿಯಾಗಿದ್ದರು ತಾ,ಪಂ ಅಧಿಕಾರಿ ಜಾಣಪತ್ರವನ್ನು ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗೆ ಬರೆದಿದ್ದು ಅದರಲ್ಲಿ ಪಿಡಿಓ ರವರು ಹೀಗೆ ಮಾಡಿದ್ದಾರೆಂದು ಗುಂಡಪ್ಪ ಯರಡೋಣ ಆರೋಪಿಸಿದ್ದಾರೆ ತಮ್ಮ ಗಮನಕ್ಕೆ ಮತ್ತು ಸೂಕ್ತ ಮಾರ್ಗದರ್ಶನಕ್ಕೆ ಪತ್ರ ಬರೆಯುತ್ತಾರೆ ಆದರೆ ಇಲ್ಲಿ ಕಾನೂನುಬಾಹಿರ ಚಟುವಟಿಕೆ ಮಾಡಿದವರ ಮೇಲೆ ಕೈಗೊಮಡ ಕ್ರಮವೇನು ಎನ್ನವ ಪ್ರಶ್ನೆಗಳು ಉದ್ಭವವಾಗುತ್ತಿದ್ದು ಕೂಡಲೇ ಇವರ ಮೇಲೆ ಸೂಕ್ತಕ್ರಮ ಜರುಗಿಸಬೇಕೆಂದು ಅವರು ಒತ್ತಾಯಿಸಿದ್ದಾರೆ