ಛಾವಣಿ ದಸರಾ ಜನಮನ ರಂಜಿಸಿದ ಹಾಸ್ಯಸಂಜೆ,ರಸಮಂಜರಿ ಕಾರ್ಯಕ್ರಮ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು: ಹುಬ್ಬಳ್ಳಿಯ,, ಶಹರದಾಗ,, ಎಂದು ಹಾಡುಬರುತ್ತಲೆ ಹುಡುಗರು ಯುವಕರು ಶಿಳ್ಳೆ ಕೇಕೆ ಹಾಕುತ್ತಾ ಕುಣಿದು ಕುಪ್ಪಳಿಸಿದ ದೃಶ್ಯ ಪಟ್ಟಣದಲ್ಲಿ ಕಂಡು ಬಂತು
೧೫ನೇ ವರ್ಷದ ಛಾವಣಿ ದಸರಾ ನಿಮಿತ್ಯ ಪಟ್ಟಣದ ದೊಡ್ಡಹನುಮ ದೇವಸ್ಥಾನದ ಮುಂದೆ ಹಾಕಿರುವ ವೇದಿಕೆಯಲ್ಲಿ ಸೋಮವಾರ ನಡೆದ ಗಿಚ್ಚಿಗಿಲಿಗಿಲಿ ಖ್ಯಾತಿಯ ಮಂಜು ಚಿಲ್ಲರ್ ರಾಘವೇಂದ್ರ(ರಾಗಿಣಿ) ಹಾಗೂ ಶಿವು ತಂಡ ಹಾಗೂ ಭಜರಂಗಿ ಮೆಲೋಡಿಸ್ ಗಂಗಾವತಿಯ ನರಸ್ ಹೂಗಾರ ಹಾಗೂ ಲತಾ ಹೂಗಾರವರ ರಸಮಂಜರಿ ಕಾರ್ಯಕ್ರಮ ನೋಡುಗರನ್ನು ರಂಜಿಸಿತು
ಛಾವಣಿ ದಸರಾದ ಆಯೋಜಕರು ನಿತ್ಯ ಒಂದೊAದು ಸಾಂಸ್ಕೃತಿಕ ಕಾರ್ಯಕ್ರಮ ನೀಡುತ್ತಿದ್ದು ಅದರಂತೆ ಸೋಮವಾರ ಹಾಸ್ಯ ಸಂಜೆ ಹಾಗೂ ರಸಮಂಜರಿ ನಡೆಯಿತು
ಮಂಜು ಚಿಲ್ಲರ್ ಹಾಗೂ ರಾಘವೇಂದ್ರ(ರಾಗಿಣೀ) ಜೋಡಿಯು ಸಂಸಾರದಲ್ಲಿಯು ನಡೆಯುವ ಘಟನೆಯನ್ನು ಪ್ರಸ್ತುತಪಡಿಸಿ ಚಟಾಕಿಗಳನ್ನು ಹಾರಿಸುತ್ತಾ ನಡುನಡುವೆ ಹಾಡುಗಳಿಗೆ ಹೆಜ್ಜೆಹಾಕುವುದು ನಡೆಯಿತು
ಇತ್ತ ಭಜರಂಗಿ ಮೆಲೋಡಿಸ್ ಗಂಗಾವತಿ ನರಸ್ ಹೂಗಾರ ಹಾಗೂ ಲತಾ ಹೂಗಾರ ಜೋಡಿಯು ಹಲವಾರು ಚಿತ್ರಗೀತೆಗಳನ್ನು ಹಾಡುತ್ತಾ ಅವರು ಹಾಸ್ಯ ಚಟಾಕಿ ಹಾರಿಸುತ್ತಾ ನಗಿಸುತ್ತಾ ಮನರಂಜಿಸಿದರು
ಈ ಜೋಡಿತಂಡಗಳು ಚುಟು ಚುಟು,,ಹುಬ್ಬಳ್ಳಯ,, ಶಹರದಾಗ,, ನಾ ಡ್ರೈವರಾ,,, ಮುಂತಾದ ಹಾಡುಗಳನ್ನು ಹಾಡುತ್ತಿದ್ದರೆ ಮಕ್ಕಳು ಯುವಕರು ಅವರೊಡನೆ ತಾವು ಹಾಡುತ್ತಾ ಕುಣಿಯುತ್ತಾ ಕಾರ್ಯಕ್ರಮವನ್ನು ಆನಂದಿಸುವುದು ಕಂಡುಬಂತು
ಗಿಚ್ಚಿಗಿಲಿಗಿಲಿ ಖ್ಯಾತಿಯ ಮಂಜು ಚಿಲ್ಲರ್ ಹಾಗೂ ರಾಘವೇಂದ್ರ(ರಾಗಿಣಿ) ಬರುತ್ತಾರೆ ಎನ್ನುತ್ತಲೆ ಸಾಕಷ್ಟು ಜನ ಪ್ರೇಕ್ಷಕರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು ಜನಕಿಕ್ಕಿರಿದು ಸೇರಿ ಕಾರ್ಯಕ್ರಮವನ್ನು ಆಶ್ವಾದಿಸಿದ ದೃಶ್ಯಕಂಡುಬಂತು