ಕೆಟ್ಟಭಾವನೆಗಳ ಕಳೆದು ಒಳ್ಳೆಯ ಭಾವನೆ ಬೆಳೆಸುವುದೆ ದಸರಾ ವಿಶೇಷವಾಗಿದೆ-ದೋಟಿಹಾಳ

Laxman Bariker
ಕೆಟ್ಟಭಾವನೆಗಳ ಕಳೆದು ಒಳ್ಳೆಯ ಭಾವನೆ ಬೆಳೆಸುವುದೆ ದಸರಾ ವಿಶೇಷವಾಗಿದೆ-ದೋಟಿಹಾಳ
WhatsApp Group Join Now
Telegram Group Join Now

೧೫ನೇ ವರ್ಷದ ಛಾವಣಿ ದಸರಾ ಉದ್ಘಾಟನೆ
ಕೆಟ್ಟಭಾವನೆಗಳ ಕಳೆದು ಒಳ್ಳೆಯ ಭಾವನೆ ಬೆಳೆಸುವುದೆ ದಸರಾ ವಿಶೇಷವಾಗಿದೆ-ದೋಟಿಹಾಳ

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು:ಭಾರತೀಯರಿಗೆ ದಸರಾ ಹಬ್ಬವು ಬಹಳ ಮಹತ್ವದ ಹಬ್ಬವಾಗಿದ್ದು ಮನುಷ್ಯನ ಕೆಟ್ಟ ಭಾವನೆಗಳನ್ನು ಕಳೆದು ಉತ್ತಮ ಭಾವನೆಗಳ ಬೆಳೆಸುವುದೆ ದಸರಾ ಹಬ್ಬದ ವಿಶೇಷವಾಗಿದೆ ಎಂದು ಡಾ ಸಚಿನ್ ದೋಟಿಹಾಳ ಹೇಳಿದರು

ಅವರು ಪಟ್ಟಣದ ದೊಡ್ಡ ಹನಮಾನ ದೇವಸ್ಥಾನದ ಮುಂದೆ ಏರ್ಪಡಿಸಿದ ೧೫ನೇ ವರ್ಷದ ಛಾವಣಿ ದಸರಾ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಬಂದು ಹಬ್ಬದ ವಿವರಿಸುತ್ತಾ ದಸರಾ ಹಬ್ಬವು ರಾಮಾಯಣದಲ್ಲಿ ರಾವಣನ ಸಂಹಾರ, ಮಹಾಭಾರತದಲ್ಲಿ ಪಾಂಡವರು ವನವಾಸ ಒಂದು ವರ್ಷದ ಅಜ್ಞಾನತವಾಸ ಕಳೆದು ಯುದ್ದಕ್ಕೆ ಸನ್ನದ್ದರಾಗಿ ಗೆದ್ದುಬಂದ ದಿನ ವಿಜಯದಶಮಿ ಶರದೃತುವಿನಲಿ ಬರುವ ಹಬ್ಬ ಶರನ್ನವರಾತ್ರಿಯಾಗಿದೆ ನಮ್ಮ ಹಬ್ಬಗಳಿಗೆ ಒಂದು ವಿಶೇಷ ಗುಣಧರ್ಮಗಳ ಮೇಲೆ ನೆಲೆ ನಿಂತಿವೆ ದೇವಿಯು ಮಹಿಷಾಶೂರನ್ನನು ವಧಾ ಮಾಡಿದ ಹಬ್ಬ ಇದಾಗಿದ್ದು ನಮ್ಮಲ್ಲಿರುವ ಕೆಟ್ಟತನವನ್ನು ದೂರ ಮಾಡಿ ಒಳ್ಳೆಯತನವನ್ನು ಬೆಳೆಸಿಕೊಂಡು ಸಮಾಜದಲ್ಲಿ ಗೌರವಯುತವಾಗಿ ಬದುಕನ್ನು ಸಾಗಿಸುವುದೆ ದಸರಾ ವಿಶೇಷವಾಗಿದೆ ಎಂದು ಅವರು ಹೇಳಿದರು
ನಂತರ ವಿಧಾನಪರಿಷತ್ ಸದಸ್ಯರಾದ ಶರಣಗೌಡ ಪಾಟೀಲ್ ಬ್ಯಯಾಪುರ ಮಾತನಾಡುತ್ತಾ ಎಲ್ಲಾ ಜಾತಿ ಧರ್ಮಗಳ ನಡುವೆ ಪ್ರೀತಿ ವಿಶ್ವಾಸ ಬೆಳೆಸಿ ಸಂಬAಧಗಳಿಗೆ ಗಟ್ಟಿತನವನ್ನು ತಂದು ಭಾವೈಕ್ಯತೆ ಬೆಳೆಸುವುದೆ ದಸರಾ ಹಬ್ಬವಾಗಿದೆ ಈ ಸಲ ನಾಡಿನಲ್ಲಿ ಉತ್ತಮ ಮಳೆಯಾಗಿದ್ದು ರೈತರು ಸಂತಸದಲ್ಲಿದ್ದಾರೆ ಅವರು ಸಂತಸವಾಗಿದ್ದರೆ ನಾಡು ಸುಭಿಕ್ಷವಾಗಿರುತ್ತದೆ ಎಂದರು
ನAತರ ಅಮರೇಶ್ವರದ ಗಜದಂಡ ಶ್ರೀಗಳು ಆಶಿರ್ವಚನ ನೀಡುತ್ತಾ ದಸರಾ ನಮಗೆ ವಿಶಿಷ್ಟ ಭಾವನೆಗಳನ್ನು ಕಲಿಸುವ ಬಹಳ ಮಹತ್ವವಾದ ಹಬ್ಬವಾಗಿದೆ ಹಬ್ಬಗಳ ಆಚರಣೆ ನಮ್ಮ ಪರಂಪರೆಯಾಗಿದೆ ಅವುಗಳನ್ನು ಆಚರಣೆ ಮಾಡುವುದರಿಂದ ಮನುಷ್ಯನ ಭಾವನೆಗಳು ಳ್ಳೆಯ ವಿಚಾರದತ್ತ ಹೊರಳುತ್ತದೆ ಅಂತಹ ಭಾವನೆಗಳನ್ನು ನಮಗೆ ನೀಡುವ ಹಬ್ಬ ದಸರ ಆಗಿದೆ ಎಂದರು
ನAತರದಲ್ಲಿ ಅನಂತರಾಜ್ ಮಿಸ್ತಿç ಅವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಿತು
ಈ ಸಂದರ್ಭದಲ್ಲಿ ಕಾರ್ಯಕ್ರಮದ ಗೌರವಾಧ್ಯಕ್ಷರಾದ ಮಲ್ಲಣ್ಣ ವಾರದ, ಸಂಚಾಲಕರದ ಮಂಜುನಾಥ ಕಾಮಿನ್, ಅರುಣಕುಮಾರ ಸುಧೀರಕುಮಾರ,ಶ್ರೀವಾಸ್ತವ, ವೆಂಕಟೇಶ ಮೆಹ್ತಾ, ಶರಣಬಸವ ವಾರದ, ಅಶೋಕ ದಿಗ್ಗಾಂವಿ ಸೇಇರದಂತೆ ಇದ್ದರು

WhatsApp Group Join Now
Telegram Group Join Now
Share This Article