೯೩.೭೬ಲಕ್ಷಹಣದ ಕಾಮಗಾರಿ ಕಾರ್ಯಕ್ರಮ,ಮಾಹಿತಿ ನೀಡದ ಅಧಿಕಾರಿಗಾಳು,ಖುರ್ಚಿಗಳು ಖಾಲಿಖಾಲಿ,!!?
ಲಿಂಗಸೂಗೂರು ನಗರಕ್ಕೆ ಕುಡಿಯುವ ನೀರಿನ ಅಮೃತ ೨.೦ ಯೋಜನೆಗೆ ಚಾಲನ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸೂಗೂರು ; ಪಟ್ಟಣವು ತಾಲ್ಲೂಕ ಕೇಂದ್ರವಾಗಿದ್ದು ಜನಸಂಖ್ಯೆಯು ೨೦೧೧ ರ ಜನಗಣತಿ ಪ್ರಕಾರ ೨೫,೪೧೧ ಇದ್ದು. ಪ್ರಸ್ತುತ ಜನಸಂಖ್ಯೆಯು-೪೬,೬೯೯ ಇರುತ್ತದೆ ಸದರಿ ಪಟ್ಟಣಕ್ಕೆ ನಾರಾಯಣಪುರ ಬಲದಂಡೆ ಕಾಲುವೆಯ ಮೂಲದಿಂದ ೪.೫೪ ಎಮ್.ಎಲ್.ಡಿ ಸಾಮರ್ಥ್ಯದ ಜಲಶುದ್ದೀಕರಣ ಘಟಕದಿಂದ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ ಜನಸಂಖ್ಯೆಯು ಬೆಳೆಯುತ್ತಿರುವುದರಿಂದ ಹಾಗೂ ವ್ಯವಸ್ಥಿತವಾದ ವಿತರಣಾ ಕೊಳವೆ ಮಾರ್ಗದ ಜಾಲ ಇಲ್ಲದ ಕಾರಣ ಪಟ್ಟಣದ ಸಾರ್ವಜನಿಕರಿಗೆ ೨-೩ ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿದೆ. ಆದ್ದರಿಂದ ವಿತರಣಾ ವ್ಯವಸ್ಥೆಯ ಸುಧಾರಣೆಯು ಅತೀ ಅವಶ್ಯಕವಾಗಿರುತ್ತದೆ ಎಂದು ಶಾಸಕ ಮಾನಪ್ಪ ವಜ್ಜಲ್ ಹೇಳಿದರು.
ಪಟ್ಟಣದಲ್ಲಿ ಕುಡಿಯುವ ನೀರಿನ ವಿತರಣಾ ಕೊಳವೆ ಮಾರ್ಗ ಅಮೃತ ೨.೦ ಯೋಜನೆಗೆ ೯೩.೭೬.ಕೋಟಿ ರೊ ಅನುದಾನದ ವೆಚ್ಚದಲ್ಲಿ ಶಾಸಕರು ವಿಧಾನ ಪರಿಷತ್ ಸದಸ್ಯೆರು ಪುರಸಭೆ ಅಧ್ಯಕ್ಷರು ಭೂಮಿ ಪೂಜೆ ಮಾಡಿ ಮಾತನಾಡಿದ ಅವರು ಪಟ್ಟಣಕ್ಕೆ ಕುಡಿಯುವ ನೀರಿನ ವಿತರಣಾ ಕೊಳವೆ ಮಾರ್ಗ ಅಳವಡಿಸಿ ಗೃಹ ಸಂಪರ್ಕ ಕಲ್ಪಿಸುವ ಕಾಮಗಾರಿಗೆ ರೂ.೯೩.೭೬ ಕೋಟಿಗಳ ಅಂದಾಜಿಗೆ ಕೇಂದ್ರ ಪುರಸ್ಕೃತ ಅಮೃತ್ ೨.೦ ಯೋಜನೆಯಡಿ ದಿನಾಂಕ: ೦೪-೦೨-೨೦೨೩ ರಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಿರುತ್ತದೆ.
ವಿಧಾನ ಪರಿಷತ್ ಸದಸ್ಯೆರಾದ ಶರಣಗೌಡ ಬಯ್ಯಾಪೂರ ಮಾತನಾಡಿ ಲಿಂಗಸೂಗೂರು ಪಟ್ಟಣದ ಮಧ್ಯಂತರ ಜನಸಂಖ್ಯೆ ಇಸವಿ ೨೦೪೦ ರಲ್ಲಿ ೬೨೨೫೮ ಹಾಗೂ ಅಂತಿಮ ಜನಸಂಖ್ಯೆ ಇಸವಿ ೨೦೫೫ ರಲ್ಲಿ ೮೨೬೬೯ ಆಗಬಹುದೆಂದು ಪರಿಗಣಿಸಿ ತಲಾ ೧೩೫ ಲೀಟರ ನಂತೆ ಮಧ್ಯಂತರ ಬೇಡಿಕೆ ೧೨.೦೦ ಎಮ್.ಎಲ್.ಡಿ ಹಾಗೂ ಅಂತಿಮ ಬೇಡಿಕೆ ೧೫.೫೦ ಎಮ್.ಎಲ್.ಡಿ ಯಂತೆ ಯೋಜನೆಯನ್ನು ವಿನ್ಯಾಸಿಸಲಾಗಿದೆ ಸದರಿ ಯೋಜನೆಯನ್ನು ಅನುಷ್ಠಾನಗೊಳಿಸಲು , ಟೆಂಡರ್ ಆಧಾರದ ಮೇಲೆ ೯೧.೫೮ ಕೋಟಿಗಳಿಗೆ ವಹಿಸಲಾಗಿದ್ದು, ದಿನಾಂಕ: ೧೮-೦೫-೨೦೨೪ ರಂದು ಗುತ್ತಿಗೆ ಕರಾರು ಒಪ್ಪಂದವನ್ನು ಮಾಡಿಕೊಳ್ಳಲಾಗಿದ್ದು. ಕಾಮಗಾರಿಯನ್ನು ಪ್ರಾರಂಭಿಸಲು ಕಾರ್ಯಾದೇಶವನ್ನು ನೀಡಲಾಗಿರುತ್ತದೆ. ಕಾಮಗಾರಿಯ ಅವಧಿಯು ೨೪ ತಿಂಗಳು ಇರುತ್ತದೆ ಎಂದು ಹೇಳಿದರು.
ಯೋಜನೆಯ ವಿವರಗಳು
ಕಾಳಾಪುರ ಹತ್ತಿರದ ಹಾಲಿ ನಾರಾಯಣಪುರ ಬಲದಂಡೆ ಕಾಲುವೆಯಲ್ಲಿ ಇರುವ ಜಾಕ್ ವೆಲ್ ನಲ್ಲಿ ಹಾಲಿ ಇರುವ ಪಂಪಿAಗ್ ಮಷಿನರಿಗಳನ್ನು ಬದಲಿಸಿ ೮೦ ಹೆಚ್.ಪಿಸಾಮರ್ಥ್ಯದ ಹೊಸ ಪಂಪಿಂಗ್ ಮಷಿನರಿಗಳನ್ನು ಅಳವಡಿಸುವುದು.
ಕಾಳಾಪುರ ಹತ್ತಿರದ ಹಾಲಿ ಕುಡಿಯುವ ನೀರಿನ ಕೆರೆಯ ಜಾಕ್ ವೆಲ್ ನಲ್ಲಿ ಇರುವ ಹಾಲಿ ಇರುವ ಪಂಪಿಂಗ್ ಮಷಿನರಿಗಳನ್ನು ಬದಲಿಸಿ ೧೩೦ ಹೆಚ್.ಪಿ ಸಾಮರ್ಥ್ಯದ ಹೊಸ ಪಂಪಿಂಗ್ ಮಷಿನರಿಗಳನ್ನು ಅಳವಡಿಸುವುದು.
ಪಟ್ಟಣದಲ್ಲಿ ೬೪೮೫ ಸಂಖ್ಯೆ ಕುಡಿಯುವ ನೀರಿನ ಗೃಹ ಸಂಪರ್ಕ ಒದಗಿಸುವುದು. ಲಿಂಗಸೂಗೂರು ಪಟ್ಟಣದ ಸುಧಾರಿತ ಕುಡಿಯುವ ನೀರು ಸರಬರಾಜು ಮತ್ತು ವಿತರಣಾ ವ್ಯವಸ್ಥೆಗಳನ್ನು ೫ ವರ್ಷಗಳ ಅವಧಿಗೆ ೧ ವರ್ಷದ ನ್ಯೂನ್ಯತೆ ಹೊಣೆಗಾರಿಕೆ ಅವಧಿ ಒಳಗೊಂಡAತೆ) ಕಾರ್ಯಾಚರಣೆ ಮತ್ತು ನಿರ್ವಹಣೆ
ಈ ಯೋಜನೆಯು ಕಾರ್ಯಗತವಾದ ನಂತರ ಲಿಂಗಸೂಗೂರು ಪಟ್ಟಣದ ಪ್ರತಿಯೊಬ್ಬ ನಾಗರೀಕರಿಗೆ ದಿನಂ ಪ್ರತಿ ಸಲಾ ೧೩೫ ಲೀಟರ್ ನೀರನ್ನು ನಿರಂತರವಾಗಿ ಸರಬರಾಜು ಮಾಡಬಹುದಾಗಿದೆ.
ಈ ಸಂದರ್ಭದಲಿ ಪುರಸಭೆ ನೂತನ ಅಧ್ಯಕ್ಷರಾದ ಬಾಬುರೆಡ್ಡಿ ಮುನ್ನೂರು ಉಪಾಧ್ಯಕ್ಷರಾದ ಶರಣಮ್ಮ ಯೋಜನಾ ಅಧಿಕಾರಿ ಚಂದ್ರಕಾAತ ಚವ್ಹಾಣ ಹಾಗೂ ಪುರಸಭೆ ಮುಖ್ಯಧಿಕಾರಿ ರೆಡ್ಡಿರಾಯಣಗೌಡ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಬಾಕ್ಸ್: ೯೩.೭೬ ಲಕ್ಷ ಹಣದ ಕಾಮಗಾರಿ ಕಾರ್ಯಕ್ರಮಕ್ಕೆ ಸಂಬAಧಿಸಿದ ಅಧಿಕಾರಿಗಳು ಸರಿಯಾದ ಮಾಹಿತಿಯನ್ನು ಪಟ್ಟಣದ ನಾಗರೀಕರಿಗೆ ಮಾಧ್ಯಮದವರಿಗೆ ಮಾಹಿತಿ ನೀಡಿರಲಿಲ್ಲ ಇದರಿಂದಾಗಿ ಸದರಿ ಕಾರ್ಯಕ್ರಮಕ್ಕೆ ಸಾಕಷ್ಟು ಪ್ರಮಾಣದಲ್ಲಿ ಜನರು ಪುರಸಭೆಯ ಕೆಲಸ ಸದಸ್ಯರು ಸೇರಿದಂತೆ ಹಲವರು ಬಂದಿರಲಿಲ್ಲ ಪ್ರಧಾನಮಂತ್ರಿಯವರು ದೇಶದ ೭೦ ಕಡೆಯಲ್ಲಿ ಅಮೃತಯೋಜನೆ ರಾಷ್ಟçಕ್ಕೆ ಸಮರ್ಪಿಸಲಿದ್ದು ಇಂತಹ ಕಾರ್ಯಕ್ರಮವನ್ನು ಕಾಟಾಚಾರಕ್ಕೆ ಮಾಡಿದಂತಿತ್ತು ಅಲ್ಲದೆ ಜನರು ಇಲ್ಲದೆ ಸದರಿ ಕಾರ್ಯಕ್ರಮಕ್ಕೆ ವಸತಿ ನಿಲಯದ ವಿದ್ಯಾರ್ಥಿಗಳನ್ನು ಕರೆತರುವ ಯತ್ನ ನಡೆಸಿದರು ಮಾಧ್ಯಮದವರು ಕಾರ್ಯಕ್ರಮದ ಲೋಪದ ಬಗೆಗೆ ಆಕ್ರೋಶ ವ್ಯಕ್ತಪಡಿಸಿದಾಗ ಆಯೋಜಕರನ್ನು ಶಾಸಕರು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು