ಖಾಸಗಿ ಶಾಲೆ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಯತ್ನ:ಎನ್.ಎಸ್.ಬೋಸರಾಜು

Laxman Bariker
ಖಾಸಗಿ ಶಾಲೆ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಯತ್ನ:ಎನ್.ಎಸ್.ಬೋಸರಾಜು
WhatsApp Group Join Now
Telegram Group Join Now

ರುಸ್ಮಾ ಶಿಕ್ಷಕರ ದಿನಾಚರಣೆ: ಸಾಧಕರು, ಶಿಕ್ಷಕರಿಗೆ ಸನ್ಮಾನ

ಖಾಸಗಿ ಶಾಲೆ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಯತ್ನ:ಎನ್.ಎಸ್.ಬಿ

ಕಲ್ಯಾಣ ಕರ್ನಾಟಕ ವಾರ್ತೆ

ರಾಯಚೂರು ಸೆ.28:- ಖಾಸಗಿ ಶಾಲೆಗಳ 10 ಹಲವು ಸಮಸ್ಯೆಗಳ ಪರಿಹಾರಕ್ಕೆ ರಾಜ್ಯ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳುವ ಭರವಸೆಯನ್ನು ರಾಜ್ಯ ಸಣ್ಣ ನೀರಾವರಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವರಾದ ಎನ್ಎಸ್ ಬೋಸರಾಜು ಭರವಸೆ ನೀಡಿದರು.
ಶಿಕ್ಷಕರ ದಿನಾಚರಣೆ ಅಂಗವಾಗಿ ನಿನ್ನೆ ನಗರದ ಪಂಡಿತ ಸಿದ್ದರಾಮಯ್ಯ ರುಸ್ಮಾ ಆಯೋಜಿಸಿದ ಶಿಕ್ಷಕರ ದಿನಾಚರಣೆ ಮತ್ತು ಶಿಕ್ಷಕರ ರತ್ನ ಪ್ರಶಸ್ತಿ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಖಾಸಗಿ ಶಿಕ್ಷಕರ ಸಮಸ್ಯೆಗಳು ತಾಲೂಕು ಮಟ್ಟದಿಂದ ಜಿಲ್ಲಾ ಮಟ್ಟ ಹಾಗೂ ವಿಭಾಗಿಯ ಮಟ್ಟದ ಶಿಕ್ಷಣ ಅಧಿಕಾರಿಗಳೊಂದಿಗೆ ಚರ್ಚಿಸುವ ಮೂಲಕ ಪರಿಹರಿಸಲು ಪ್ರಯತ್ನಿಸಲಾಗುತ್ತದೆ ಈ ಸಮಸ್ಯೆಗಳು ಈ ಹಂತದಲ್ಲಿ ಪರಿಹಾರ ಗೊಳ್ಳದಿದ್ದರೆ ರಾಜ್ಯ ಸರ್ಕಾರದ ಮಟ್ಟದಲ್ಲೂ ಇದಕ್ಕೆ ಒಂದು ಪರಿಹಾರ ಕಂಡುಕೊಳ್ಳಲು ಸಹಕರಿಸುವೆ.
ಇಂದಿನ ವಿದ್ಯಾರ್ಥಿಗಳಿಗೆ ನಾಳಿನ ಉಜ್ವಲ ಭವಿಷ್ಯದ ದಾರಿದೀಪವಾಗಿ ಶಿಕ್ಷಕರು ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿದರೆ ರಾಜ್ಯ ದೇಶದ ಪ್ರಗತಿ ಸಾಧ್ಯ.
ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಮಂಡಳಿಗೆ ಪ್ರತಿ ವರ್ಷ 5000 ಕೋಟಿ ರಾಜ್ಯ ಸರ್ಕಾರ ಅನುದಾನ ನೀಡಲಿದೆ ಈ ಅನುದಾನದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ ಕಾರ್ಯ ನಿರ್ವಹಿಸಲು ಸೂಚಿಸಲಾಗಿದೆ ಅನುದಾನ ಶಿಕ್ಷಣಕ್ಕೆ ಬೀಸಲಿಸುವ ಬದ್ಧತೆ ರಾಜ್ಯ ಸರ್ಕಾರದ್ದಾಗಿದೆ.ಈಗಾಗಲೇ ಈಭಾಗಕ್ಕೆ 1250 ಕೋಟಿ ರೂ. ಅನುದಾನ ನೀಡಲಾ ಗಿದೆ. ಅನುದಾನ ರಹಿತ ಖಾಸಗಿ ಶಾಲೆಗಳ ಅಗತ್ಯ ಸೌಲಭ್ಯಕ್ಕಾಗಿ ಅನು ದಾನ ನೀಡುವ ನಿಟ್ಟಿನಲ್ಲಿ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ನಗರದ ಕಿಲ್ಲೆ ಬೃಹನ್ಮಠದ ಶ್ರೀಶಾಂತಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ರುಸ್ಮಾ ಸಂಘಟನೆ ಕಾರ್ಯಕ್ರಮ ಶಿಕ್ಷಕರ ಗೌರವವನ್ನು ಹೆಚ್ಚಿಸುತ್ತದೆ ಮತ್ತು ಅವರ ಕರ್ತವ್ಯ ನಿಷ್ಠೆಯನ್ನು ಮತ್ತಷ್ಟು ಜಾಗೃತಿಗೊಳಿಸುತ್ತದೆ.
ರಾಯಚೂರು ಖಾಸಗಿ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ(ರುಸ್ಮಾ)ದ ಅಧ್ಯಕ್ಷ ರಾಜಾ ಶ್ರೀನಿವಾಸ ಅವರು ಪ್ರಾಸ್ತಾವಿಕವಾಗಿ ಮಾತನಾಡಿ,ಖಾಸಗಿ ಶಾಲಾ ಆಡಳಿತ ಮಂಡಳಿಯವರು ಅನೇಕ ಸಮಸ್ಯೆಗಳನ್ನು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಪರಿಹಾರಕ್ಕೆ ಸಚಿವರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆಗೈದ ಸಾಧಕರಿಗೆ ರುಸ್ಮಾ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಪತ್ರಿಕಾ ರಂಗದಲ್ಲಿ ಗಣನೀಯ ಸೇವೆ ಸಲ್ಲಿಸಿ ಈ ಭಾಗದ ಜನರ ಮನೆ ಮಾತಾಗಿರುವ ರಾಯಚೂರ ವಾಣಿ ಪತ್ರಿಕೆ ವ್ಯವಸ್ಥಾಪಕ ಸಂಪಾದಕ ಅರವಿಂದ ಕುಲಕರ್ಣಿ, ವೈದ್ಯಕೀಯ ಕ್ಷೇತ್ರದಲ್ಲಿ ಗಣನೀಯ ಸೇವೆಗಾಗಿ ಬಾಲಂಕು ಆಸ್ಪತ್ರೆಯ ವೈದ್ಯಕೀಯ ನಿರ್ದೇ ಶಕರಾದ ಡಾ.ವಿ.ಶ್ರೀಧರರೆಡ್ಡಿ, ಸಾಹಿತ್ಯ ಕ್ಷೇತ್ರದಲ್ಲಿ ಬಾಬು ಬಂಡಾರಿಗಲ್, ಶಾಂತಿ ಸೌಹಾರ್ದತೆ ಗಾಗಿ ಸಿಪಿಐ ಉಮೇಶ ಕಾಂಬ್ಳೆ, ಗಾಯನ ಕ್ಷೇತ್ರದಲ್ಲಿ ಶೇಷಗಿರಿ ದಾಸ್‌ ಅವರಿಗೆ ರುಸ್ಮಾ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಅಲ್ಲದೇ 100ಕ್ಕೂ ಹೆಚ್ಚು ಶಿಕ್ಷಕರಿಗೆ ಶಿಕ್ಷಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾ ಯಿತು.
ವೇದಿಕೆಯಲ್ಲಿ ನಗರಸಭೆ ಅಧ್ಯಕ್ಷೆ ನರಸಮ್ಮ ನರಸಿಂಹಲು ಮಾಡಗಿರಿ, ಉಪಾಧ್ಯಕ್ಷಸಾಜೀದ್ ಸಮೀರ್, ನಿವೃತ್ತ ಶಿಕ್ಷಣಾಧಿ ಕಾರಿ ನರಸಪ್ಪ, ನಗರಸಭೆ ಹಿರಿಯ ಸದಸ್ಯರಾದ ಜಯಣ್ಣ, ಬಿ.ರಮೇಶ, ರುದ್ರಪ್ಪ ಅಂಗಡಿ, ನರಸಿಂಹಲು ಮಾಡಗಿರಿ, ಸುಧಾಮ, ರುಸ್ಮಾ ಒಕ್ಕೂಟದ ಚಂದ್ರಮೋಹನರೆಡ್ಡಿ, ಎಚ್.ವೆಂಕಟೇಶಲು,, ಮೋಹಿನುದ್ದೀನ್, ಶೇಖರ ರಾಂಪೂರಿ, ಎಸ್.ಕೆ.ನಾಗಿರೆಡ್ಡಿ, ಕೆ.ಮಲ್ಲೇಶ, ಗಿರೀಶ ಆಚಾರ್ಯ, ಮೊಹ್ಮದ್ ಅಬ್ದುಲ್‌ಹೈಫಿರೋಜ್, ಎಂ.ಸುರೇಶಬಾಬು, ಮಲ್ಲೇಶ ಮೋಸಿನ್ ಜಮಾಲ್, ಸೈಯ್ಯದ್ ಜಹರಾ ಬತುಲ್, ಶರಣಯ್ಯ ಸ್ವಾಮಿ, ಮಹಬೂಬ್ ಮಲಿಯಾಬಾದ್, ಸಿದ್ದಣ್ಣ, ಶೇಖ್ ಮಹೆಬೂಬ, ಅಭಿಲಾಷ್, ಲಕ್ಷ್ಮೀದೇವಿ, ಶಾರದಾ, ವನಜಾ, ಶಿರೀಷಾ, ವೀಣಾ, ಲತಾ, ಪ್ರಣಯರೆಡ್ಡಿ ಸೇರಿದಂತೆ ಇನ್ನಿತರ ಪದಾಧಿಕಾರಿಗಳು, ಸದಸ್ಯರು, ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article