ಇಂದಿರಾ ಕ್ಯಾಂಟೀನ್ ಊಟದಲ್ಲಿ ಹುಳು, ಕ್ರಮ ಯಾವಾಗ..!!?
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸುಗೂರು.ಸೆ.೨೩- ಬಡವರು ಅದರಲ್ಲಿ ವಿಶೇಷವಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಇಂದಿರಾ ಕ್ಯಾಂಟೀನ್‌ನಲ್ಲಿ ಮಧ್ಯಾಹ್ನ ಊಟ ಸೇವಿಸುತ್ತಾರೆ. ಆದರೆ ಇಂದು ಇಂದಿರಾ ಕ್ಯಾಂಟೀನ್ ತಯಾರಿಸಿರುವ ಊಟದಲ್ಲಿ ಹುಳುಗಳು ಪತ್ತೆಯಾಗಿವೆ.
ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳು ಇಲ್ಲಿಯೇ ಊಟ ಮಾಡುತ್ತಾರೆ. ಇಂದು ಮಧ್ಯಾಹ್ನ ಊಟದ ಸಮಯದಲ್ಲಿ ಅನ್ನ ಸಾಂಬರು ಹಾಕಿಕೊಂಡು ಊಟಕ್ಕೆ ಕುಳಿತ ವಿದ್ಯಾರ್ಥಿಗಳು ಅನ್ನದಲ್ಲಿರುವ ಹುಳುಗಳನ್ನು ಕಂಡು ಬೆಚ್ಚಿಬಿದಿದ್ದಾರೆ. ಪ್ರತಿ ನಿತ್ಯ ಊಟದಲ್ಲಿ ಒಂದಿಲ್ಲೊAದು ಸಮಸ್ಯೆ ಇದ್ದೇ ಇರುತ್ತದೆ. ಒಂದು ದಿನ ಅರ್ಧಂಬರ್ಧ ಬೆಂದಿದ್ದರೆ ಮತ್ತೊಂದು ದಿನ ಬೇರೆಯದೇ ಸಮಸ್ಯೆ ಇರುತ್ತದೆ ಎನ್ನುತ್ತಾರೆ ವಿದ್ಯಾರ್ಥಿಗಳು.
ಪ್ರತಿ ನಿತ್ಯ ಊಟದಲ್ಲಿ ಹುಳು ಹುಪ್ಪಟೆಗಳಿರುವರುತ್ತವೆ. ಇಂತಹ ಆಹಾರ ನೀಡುವುದಕ್ಕಿಂತ ಬರೀ ಹುಳುಗಳನ್ನು ನೀಡಿದರೆ ಚೆನ್ನಾಗಿರುತ್ತದೆ ಎಂದು ಒಬ್ಬ ವಿದ್ಯಾರ್ಥಿ ಆಕ್ರೋಶ ವ್ಯಕ್ತಪಡಿಸಿದರು. ಇಂತಹ ಆಹಾರ ತಯಾರಿಸುವ ಇಂದಿರಾ ಕ್ಯಾಂಟೀನ್ ನಡೆಸುವವರ ವಿರುದ್ಧ ಸೂಕ್ತ ಕ್ರಮಕೈಗೊಂಡು ಉತ್ತಮವಾದ ಆಹಾರ ನೀಡಬೇಕೆಂದು ವಿದ್ಯಾರ್ಥಿಗಳು ಒತ್ತಾಯಿಸಿದರು.