ಎಸಿ ಕಛೇರಿ ಮುಂದೆ ರೈತರ ಧರಣಿ
ಸರಕಾರಿ ಭೂಮಿ ಸಾಗವಳಿ ಮಾಡಿದವರಿಗೆ ಪಟ್ಟ ಕೊಡಿ: ಆರ್ ಮಾನಸಯ್ಯಾ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸುಗೂರ:ಸರಕಾರಿ ಭೂಮಿ ಸಾಗುವಳಿ ಮಾಡಿದವರಿಗೆ ಪಟ್ಟ ಕೂಡಿ ಹಾಗೂ ಆಕ್ರಮ ಭೂ ಕಬಳಿಕೆ ಮಾಡಿದವರ ವಿರುದ್ಧ ಕ್ರಮ ಜರಗಿಸಬೇಕು ಎಂದು ಕರ್ನಾಟಕ ರೈತ ಸಂಘ (ಎಐಕೆಕೆಎಸ) ಮುಖಂಡ ಆರ್ ಮಾನಸಯ್ಯಾ ಹೇಳಿದರು.
ಅವರು ಧರಣಿ ಉದ್ದೇಶಿಸಿ ಮಾತನಾಡುತ್ತ ರಾಜ್ಯದಲ್ಲಿ ಮತ್ತೋಮ್ಮೆ ಭೂ ರಹಿತ ಸಾಗವಳಿದಾರರಿಗೆ ಮೋಸ ಮಾಡಲಾಗುತ್ತದೆ ಭೂ ರಹಿತ ಶೆ೭೦ರಷ್ಟು ಎಸ್ಸಿ ಮತ್ತು ಎಸ.ಟಿಗಳು ಇದ್ದಾರೆ ಇವರುಗಳು ಎಲ್ಲಾ ಕಾಲಕೂ ದುಡಿದು ದೂಳಾದವರು ಆದರೆ ಇವರಿಗೆ ಸ್ವಂತ ಮಣ್ಣೆ ಮುಟ್ಟದ ಮೇಲ್ಜಾತಿಯವರ ಕೈಯಲ್ಲಿ ಇಂದು ಸಾವಿರಾರು ಎಕರೆ ಫಲವತಾದ ಭೂಮಿ ಇದೆ ಸರಕಾರದ ಅರಣ್ಯ ಹೆಚ್ಚುವರಿ ಭೂಮಿ ಇದ್ದು ಅದರಲ್ಲಿ ಕೆರೆ ಕುಂಟೆ ಭೂಮಿಗಳು ಇವೆ ಇತ್ತಿಚಿನ ಸಾಲಿನ ಎಸ.ಸಿ ಎಸ.ಟಿ ಒ.ಬಿ.ಸಿ, ಜಾತಿಗಳ ರಾಜಕಾರಿಣಿಗಳು ದೂಡ್ಡ ಅಧಿಕಾರಿಗಳು ಗುತ್ತಿಗೆದಾರರು ಸೇರಿಕೊಂಡಿದ್ದಾರೆ.
ಸದರಿ ಅವರು ತಮ್ಮ ಸಮುದಾಯಗಳಿಗೆ ದ್ರೋಹ ಬಗೆದು ದಿಕ್ಕು ತಪ್ಪಿಸಿ ಬ್ರೋಕರಗಳೆ ಆಗುತ್ತಿದ್ದಾರೆ ರಾಜ್ಯ ಕಾಂಗ್ರೆಸ್ಸ ಸರಕಾರ ಕಂಪನಿಗಳಿಗೆ ಬ್ರೋಕರಯಾಗಿದೆ ಬಳ್ಳಾರಿಯಲ್ಲಿ ಜಿಂದಾಲ್ ಕಂಪನಿಗೆ ಮೂರು ಸಾವಿರ ಅರಣ್ಯ ಭೂಮಿ ನೀಡಿದ್ದು ಆದರೆ ಜೀವನಕ್ಕಾಗಿ ಸರಕಾರದ ತುಂಡು ಭೂಮಿ ಮಾಡುವ ರೈತರನ್ನು ಭೂಮಿಯಿಂದ ಹೊರ ಹಾಕುತ್ತಿದೆ ಸಾವಿರಾರು ರೈತರ ಮೇಲೆ ಕೇಸ್ ದಾಖಲಿಸಲಾಗಿದೆ ಕಳೆದ ೭೦ -೮೦ವರ್ಷದಿಂದ ಬಡವರು ಸಾಗವಳಿ ಮಾಡುವ ಭೂಮಿಗೆ ಪಟ್ಟ ಕೊಟ್ಟಿಲ್ಲ ಸಾಗವಳಿ ಚೀಟಿ ಹಾಗೂ ಪಟ್ಟ್ವಿರು ಭೂಮಿಯಲ್ಲಿ ಅರಣ್ಯ ಇಲಾಖೆಯವರು ಕಂದಾಯ ಇಲಾಖೆ , ಪೋಲೀಸ ಇಲಾಖೆ ಸಹಯೋಗದೊಂದಿಗೆ ಗಿಡ ನಾಟಿ ಮಾಡುತ್ತಿದ್ದಾರೆ ಇದು ರಾಜ್ಯಾದ್ಯಂತ ಸರ್ವೆ ಸಾಮಾನ್ಯ ವಾಗಿದೆ ಎಂದರು.
ತಾಲೂಕು ಇದರ ಭೀಕರ ಮಾದರಿಯಾಗಿದೆ ಹಾಗಾಗಿ ನಮ್ಮ ಭೂಮಿ ಇಲ್ಲದೆ ಬಡ ರೈತರು ವಿಶೇಷವಾಗಿ ಎಸ್ಸಿ ಎಸ,ಟಿ ಒ.ಬಿ.ಸಿಗಳು ಕರ್ನಾಟಕ ರೈತ ಸಂಘದ ಅಡಿ ಒಗ್ಗೂಡಬೇಕಾಗಿದೆ ಹಾಗೂ ಸಾಗು ಭೂಮಿಯ ಸಂರಕ್ಷಣೆಗಾಗಿ ಸಂಘ಼ರ್ಷಕ್ಕೆ ಸಜ್ಜಾಗ ಬೇಕಾಗಿದೆ ಎಂದು ಕರೆ ನೀಡಿದ್ದಾರೆ
ಒತ್ತಾಯಗಳು ಸರಕಾರಿ ಭೂಮಿ ಸಾಗವಳಿ ಮಾಡಿದ ಎಲ್ಲ ಭೂ ರೈತರಿಗೆ ಪಟ್ಟ ಕೊಡಿ, ಸರಕಾರಿ ಕಂದಾಯ ಪರಾಂಪೂಕ ಅರಣ್ಯ ಭೂಮಿಯಲ್ಲಿ ಸಾಗವಳಿ ಮಾಡಿದ ರೈತರ ಮೇಲೆ ದೌರ್ಜನ್ಯ ನಿಲ್ಲಿಸಿ ತಾಲೂಕಿನಲ್ಲಿ ಎಲ್ಲ ಹೆಚ್ಚುವರಿ ಭೂಮಿಯನ್ನು ಬಡ ರೈತರಿಗೆ ಹಂಚಿ ಹೊಸೂರು ಗ್ರಾಮzಲ್ಲಿÀ ಹಂಚಲಾದ ಹೆಚ್ಚುವರಿ ಭೂಮಿಯ ಕಬ್ಜ ಕೊಡಿಸಿ ಭೂ ರಹಿತ ಸಾಗುವಳಿದಾರರ ಮೇಲೆ ಹಾಕಿರುವ ಕೇಸಗಳನ್ನು ಹಿಂಪಡೆಯಿರಿ ಎಂದು ಒತ್ತಾಯಿಸಿರುವರು
ಈ ಸಂಧರ್ಭದಲ್ಲಿ ತಾಲೂಕು ಅಧ್ಯಕ್ಷ ವೀರಭದ್ರಪ್ಪ ಹಡಪದ ,ತಿಪ್ಪಣ್ನ ಚಿಕ್ಕಹೆಸರೂರು, ಬಸವರಾಜ ಬಡಿಗೇರ ಗಂಗಧಾರ ನಾಯಕ ಆದೇಶ ನಗನೂರ ಮಲ್ಲಯ್ಯ ಕಟ್ಟಿಮನಿ, ಬಿ.ರುದ್ರಯ್ಯ, ಅಮೀರ ಅಲಿ ಹಾಗೂ ಇತರರು ಇದ್ದರು.