ಆರ್,ಬಿ,ಶುಗರ್ಸ ಭೂಮಿ ಕಬಳಿಕೆ ಅರೋಪ, ತಹಸಿಲ್ದಾರ ಅರಣ್ಯ ಅಧಿಕಾರಿಗಳ ಭೇಟಿ!, ಕಬಳಿಕೆಯಾಗಿಲ್ಲ ಸ್ಪಸ್ಟನೆ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸೂರು:ತಾಲೂಕಿನ ಸುಣಕಲ್ ಗ್ರಾಮದಲ್ಲಿ ರಾಜ್ಯ ಅಬಕಾರಿ ಸಚಿವರ ಒಡೆತನದ ಆರ್ ಬಿ ತಿಮ್ಮಾಪೂರ ಮೇII. ಶುಗರ್ಸ ಸಕ್ಕರೆ ಕಾರ್ಖಾನೆ ತಾವೂ ಖರಿದಿಸಿದ ಜಮೀನಿಗೆ ಹತ್ತಿಕೊಂಡಿರುವ ಸರಕಾರ ಖಾರಿಜ ಖಾತಾ ಕಂದಾಯ ಹಾಗೂ ಅರಣ್ಯ ಇಲಾಖೆಯ ಭೂಮಿಯನ್ನು ಅತಿಕ್ರಮಿಸಿ ಕಬಳಿಕೆ ಮಾಡಿದ ಆರೋಪದ ಹಿನ್ನಲೆಯಲ್ಲಿ ಕಳೆದ ಎರಡು ದಿನಗಳಿಂದ ಸರ್ವೆ ಕಾರ್ಯ ನಡೆದ ಸ್ಥಳಕ್ಕೆ ತಹಶಿಲ್ದಾರ ಶಂಶಾಲಾಂ ಹಾಗೂ ವಲಯ ಅರಣ್ಯ ಅಧಿಕಾರಿ ವಿದ್ಯ ಮತ್ತು ಕಂದಾಯ ನಿರೀಕ್ಷಕ ರಾಮಕೃಷ್ಣ ನಾಯಕ ಹಾಗೂ ಸರ್ವೇ ಇಲಾಖೆ ಅಧಿಕಾರಿಗಳು ಸಿಬ್ಬಂದಿ ಪರಿಶಿಲಿಸಿ ಗ್ರಾಮಸ್ಥರೊಂದಿಗೆ ಚರ್ಚಸಿದರು.
ಆರ.ಬಿ.ಶುಗರ್ಸ ಅವರು ಸರಕಾರಿ ಹಾಗೂ ಕಂದಾಯ ಭೂಮಿಯಲ್ಲಿ ಅತಿಕ್ರಮಣ ಮಾಡಿಲ್ಲವೆಂದು ಸರ್ವೇ ಮೂಲಕ ತಿಳಿದು ಬಂದಿದೆ ಅದೆ ರೀತಿ ಅರಣ್ಯ ಇಲಾಖೆ ಜಮೀನಿನಲ್ಲಿ ಯಾವದೇ ಅತಿಕ್ರಮಣವಾಗಿಲ್ಲ ಪಟ್ಟಾ ಭೂಮಿ ಜೊತೆಗೆ ಅರಣ್ಯ ಭೂಮಿ ಇರುವದರಿಂದ ಆ ಸರ್ವೇ ನಂಬರಗಳಿಗೆ ಯಾವದೆ ಕಾಮಗಾರಿ ಮಾಡದಂತೆ ಹೇಳಲಾಗಿದೆ.
ಸರಕಾರಿ ಜಮೀನಿನಲ್ಲಿ ಸರ್ವೇ ನಂ ೭೨,೭೩ರಲ್ಲಿ ಮಣ್ಣು ಕಲ್ಲು ತಂದು ಹಾಕಿದ್ದು ಗಿಡ ಮರಗಳನ್ನು ಕತ್ತರಿಸಿ ಹಾಕಲಾಗಿದೆ
ಸಂದರ್ಭದಲ್ಲಿ ಕಂದಾಯ ನಿರೀಕ್ಷಕ ರಾಮಕೃಷ್ಣ ನಾಯಕ, ಗ್ರಾಮ ಆಡಳಿತ ಅಧಿಕಾರಿ ಪುಷ್ಪಲತ್, ತಾಲೂಕು ಸರ್ವೇ ವಿಜಯ ಪತ್ತಾರ್, ಮಲ್ಲಪ್ಪ ಪೂಜಾರಿ,ಹಜರತ ಅಲಿ ಹಾಗೂ ಬಾಲನ್ ಗ್ರಾಮಸ್ಥರು ಇದ್ದರು.
“ಲಿಂಗಸುಗೂರ ತಾಲೂಕಿನ ಸುಣಕಲ್ ಗ್ರಾಮದ ಸರ್ವೇ ನಂ೮೦,೮೧ರಲ್ಲಿ ಅರಣ್ಯ ಭೂಮಿವಿದ್ದು ಆರ.ಬಿ ಶುಗರ್ಸ ಪಟ್ಟಾ ಭೂಮಿಗೆ ಹೊಂದಿಕೊಂಡಿದ್ದು ಕಾರಣ ಭೂ ಮಾಪನ ಸಹಾಯಕ ನಿರ್ದೆಶಕರಿಗೆ ಪತ್ರ ಬರೆದಿದ್ದು ಸರ್ವೇ ಕಾರ್ಯ ನಂತರ ಅರಣ್ಯ ಭೂಮಿ ಗುರುತ್ತಿಸಲಾಗುವದು ಅಲ್ಲಿಯವರಗೆ ಸದರಿ ಭೂಮಿಯಲ್ಲಿ ಯಾವದೇ ಕಾಮಗಾರಿ ಮಾಡದಂತೆ ಸೂಚಿಸಲಾಗಿದೆ ಎಂದು ವಿದ್ಯಾಶ್ರೀ ವಲಯ ಅರಣ್ಯ ಅಧಿಕಾರಿಗಳು ಲಿಂಗಸುಗೂರ ತಿಳಿಸಿದರು.”
“ಸುಣಕಲ್ ಗ್ರಾಮದ ಸರಕಾರಿ ಜಮೀನಲ್ಲಿ ಯಾವದೆ ಅತಿಕ್ರಮಣವಾಗಿಲ್ಲ ಹಾಗೂ ಯಾವದೆ ಕಾಮಗಾರಿ ನಡೆದಿಲ್ಲ ಕಂದಾಯ ಅಧಿಕಾರಿಗಳು ಸರ್ವೇ ಅವರಿಗೆ ನಿತ್ಯ ಸರ್ವೆ ಮಾಡಿ ಹದ್ದುಬಸ್ತು ಮಾಡಿ ಸರ್ವೇ ಕಲ್ಲು ಹಾಕಲು ಸೂಚಿಸಲಾಗಿದ್ದು ಮೆIIಬಿ.ಆರ ಶುಗರ್ಸ ಅತಿಕ್ರಮಣ ಮಾಡಿದ್ದು ಕಂಡು ಬಂದರೆ ಅಂತವರ ವಿರುದ್ಧ ಕಾನೂನು ಕ್ರಮ ಜರಗಿಸಲಾಗುವದು ಎಂದು ಸೈದ್ ಶಂಶಾಲಾA ತಹಶಿಲ್ದಾರ ಲಿಂಗಸುಗೂರ ತಿಳಿಸಿರುವರು.