ಬೆಳೆಹಾನಿ ಜಂಟಿ ಸಮೀಕ್ಷೆ ಸಮಪರ್ಕವಾಗಿಲ್ಲ ರೈತರ ಆಕ್ರೋಶ, ಮರುಸಮೀಕ್ಷೆಗೆ ಒತ್ತಾಯ!!?

Laxman Bariker
ಬೆಳೆಹಾನಿ ಜಂಟಿ ಸಮೀಕ್ಷೆ ಸಮಪರ್ಕವಾಗಿಲ್ಲ ರೈತರ ಆಕ್ರೋಶ, ಮರುಸಮೀಕ್ಷೆಗೆ ಒತ್ತಾಯ!!?
WhatsApp Group Join Now
Telegram Group Join Now

ತಾಲೂಕಿನಲ್ಲಿ೪೧.೮ರಷ್ಟು ಬೆಳೆಹಾನಿ ವರದಿ, ಪ್ರವಾಹ೨೧,ಮಳೆ ೬೮ ರೈತರಿಗೆ ಹಾನಿ

ಬೆಳೆಹಾನಿ ಜಂಟಿ ಸಮೀಕ್ಷೆ ಸಮಪರ್ಕವಾಗಿಲ್ಲ ರೈತರ ಆಕ್ರೋಶ, ಮರುಸಮೀಕ್ಷೆಗೆ ಒತ್ತಾಯ!!?

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು: ಇತ್ತೀಚೆಗೆ ಜುಲೈ ಹಾಗೂ ಆಗಷ್ಟನಲ್ಲಿ ತಾಲೂಕಿನಲ್ಲಿ ಸುರಿದ ಮಳೆಗೆ ಹಾಗೂ ಪ್ರವಾಹಕ್ಕೆ ಬೆಳೆಹಾನಿಯಾಗಿದ್ದು ಕೃಷಿ ಇಲಾಖೆ ಹಾಗೂ ಕಂದಾಯ ಇಲಾಖೆ ಜಂಟಿ ಸರ್ವೇ ಮಾಡಿದ್ದು ಅದರಲ್ಲಿ ಕೇವಲ೪೧.೮ರಷ್ಟು ಮಾತ್ರ ಹಾನಿಯಾಗಿದೆ ಎಂದು ವರದಿಯಾಗಿದ್ದು ಅದು ಸಮರ್ಪಕವಾಗಿಲ್ಲವೆಂದು ರೈತರು ಆಕ್ರೋಶ ವ್ಯಕ್ತಪಡಿಸಿದಾರೆ
ಪತ್ರಿಕೆಗೆ ದೊರಕಿರುವ ಮಾಹಿತಿಯ ಪ್ರಕಾರ ೨೦೨೪-೨೫ ನೇ ಸಾಲಿನ ನೈಸರ್ಗಿಕ ವಿಕೋಪದಡಿ ತಾಲೂಕಿನಲ್ಲಿ ಜುಲೈ ಹಾಗೂ ಆಗಷ್ಟನಲ್ಲಿ ಸುರಿದ ಮಳೆಯಿಂದ ಮಳೆ ಮತ್ತು ಪ್ರವಾಹದಿಂದ ಹಾನಿಯಾಗಿದ್ದು ಅದರಲ್ಲಿ ಕೆಲವೇ ಗ್ರಾಮಗಳ ಹೆಸರು ಇದ್ದು ಕಡಿಮೆ ರೈತರ ಹೆಸರುಗಳಿವೆ ಇನ್ನು ಹಲವಾರು ರೈತರ ಬೆಳೆಹಾನಿಯಾಗಿವೆ ಆದರೆ ಸರ್ವೇಕಾರ್ಯವು ಸಮರ್ಪಕವಾಗಿಲ್ಲ ಅದಕ್ಕಾಗಿ ಮರುಸರ್ವೇ ಮಾಡಬೇಕೆಂದು ರೈತರು ಒತ್ತಾಯಿಸಿದ್ದಾರೆ
ತಾಲೂಕಿನಲ್ಲಿ ಮಳೆಯಿಂದ ಹಾನಿಯಾಗಿರುವುದು ಕೇವಲ ೬೮ ರೈತರ ಬೆಳೆ ಎಂದು ವರದಿ ಮಾಡಲಾಗಿದ್ದು ಅದರಲ್ಲಿ ಕೋಠಾ೧೫ ರೈತರು, ಮೇದಿನಾಪುರ೧೪ ರೈತರು, ಯರಡೋಣ ೬ರೈತರು, ಹೊನ್ನಳ್ಳಿ ೩ರೈತರು ದೇವರಭೂಪುರ೨,ಫೂಲಬಾವಿ೧ ಪ್ರವಾಹಕ್ಕೆ ೨೧ ರೈತರ ಬೆಳೆಗಳು ಹಾನಿಯಾಗಿವೆ ಎನ್ನಲಾಗುತ್ತಿದೆ ಹೀಗೆ ಆಯಾ ಗ್ರಾಮಗಳಿಗೆ ಕೆಲವೇ ರೈತರ ಹೆಸರುಗಳಿದ್ದು ಆಯಾ ಗ್ರಾಮದಲ್ಲಿ ಇನ್ನು ಹೆಚ್ಚಿನ ರೈತರು ಹಾನಿಗೆ ಒಳಗಾಗಿದ್ದಾರೆ ಎನ್ನುವ ಆರೋಪಗಳು ಕೇಳಿ ಬರುತ್ತವೆ
ಜುಲೈ ಹಾಗೂ ಆಗಷ್ಟನಲ್ಲಿ ಉಂಟಾದ ಹಾನಿಯ ಬಗೆಗೆ ಈಗಾಗಲೆ ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗಿದ್ದು ಸಪ್ಟಂಬರ ೬ರಂದು ಅಂತಿಮಪಟ್ಟಿ ಬಿಡುಗಡೆ ಮಾಡಲಾಗಿದ್ದು ಅದಕ್ಕೆ ಆಕ್ಷೇಪಣೆಗಳು ಇದ್ದರೆ ಒಂದು ವಾರದಲ್ಲಿ ಸಲ್ಲಿಸಬೇಕು ಎನ್ನುವ ಗಡುವನ್ನು ನೀಡಲಾಗಿದೆ ಆದರೆ ವಾಸ್ತವವಾಗಿ ಅದರ ಬಗೆಗೆ ರೈತರಿಗೆ ಸರಿಯಾದ ಮಾಹಿತಿಯೆ ಇಲ್ಲವೆನ್ನಲಾಗುತ್ತಿದೆ

“ನಮ್ಮ ಗ್ರಾಮ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಮಳೆಗೆ ಸಾಕಷ್ಟು ಪ್ರಮಾಣದಲ್ಲಿ ಬೆಳೆಗಳು ಹಾನಿಯಾಗಿವೆ ಆದರೆ ಗ್ರಾಮದಲ್ಲಿ ೧೫ ಜನರೈತರ ಹೆಸರು ಅಷ್ಟೆ ಇರುವುದು ಕಂಡು ಬಂದಿದ್ದು ಸಮೀಕ್ಷೆ ಯಾವ ರಿತಿ ಮಾಡಿದ್ದಾರೆಯೊ ತಿಳಿಯದಾಗಿದೆ ಅಲ್ಲದೆ ನಮ್ಮ ಗ್ರಾಮಕ್ಕೆ ಸಮೀಕ್ಷೆಗಾದರು ಯಾವಾಗ ಬಂದಿದ್ದಾರೆ ಎನ್ನುವುದು ಗೊತ್ತಿಲ್ಲ”- ಅಮರೇಗೌಡ ಗ್ರಾ,ಪಂ ಮಾಜಿ ಅಧ್ಯಕ್ಷರು ಹಾಗೂ ರೈತರು ಕೋಠಾ ಗ್ರಾಮ

“ಕಾಳಾಪುರ ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ಕೇವಲ ಎರಡುಮೂರು ರೈತರ ಹೆಸರುಗಳು ಮಾತ್ರ ಇವೆ ಇನ್ನು ಹೆಚ್ಚಿನ ರೈತರ ಹೊಲಗಳಲ್ಲಿ ಬೆಳೆಹಾನಿಯಾಗಿದೆ ಬೆಳೆಸಮೀಕ್ಷೆ ಯಾವ ರೀತಿಯಿಂದ ಮಾಡಿದ್ದಾರೆ ತಿಳಿಯದಾಗಿದೆ-ವೆಂಕನಗೌಡ ಪಾಟೀಲ್ ಐದನಾಳ ರಾಜಕೀಯ ಮುಖಂಡರು ಹಾಗೂ ರೈತರು

“ರೈತರಿಂದ ಆಕ್ಷೇಪಣೆಗಳು ಕೇಳಿ ಬರುತ್ತಿವೆ ಅವುಗಳನ್ನು ಸರಿಪಡಿಸುವ ಕೆಲಸ ಮಾಡುತ್ತೇವೆ- ಕೃಷಿ ಅಧಿಕಾರಿ ಲಿಂಗಸಗೂರು

WhatsApp Group Join Now
Telegram Group Join Now
Share This Article