ಬದುಕಿನ ಬಂಧ ಬೆಸೆಯುತ್ತಾ ಪ್ರೇಕ್ಷಕರ ಮನಸೂರೆಗೊಂಡ ಕೌದಿ ನಾಟಕ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ಕೌದಿ ಎನ್ನುವುದು ಕೇವಲ ಹೊದಿಕೆಯಲ್ಲ ಅದೊಂದು ಬದುಕಿನ ಬಂಧ ಎನ್ನುವ ಭಾವನೆಗಳನ್ನು ಅನಾವರಣಗೊಳಿಸಿದ ನಾಟಕ ಕೌದಿ ಪ್ರೇಕ್ಷಕರ ಮನಸೂರೆಗೊಂಡಿತು
ಪಟ್ಟಣದ ವಿವಿಸಭಾಂಗಣದಲ್ಲಿ ಸಾಹಿತ್ಯ ಸ್ನೇಹಿತರ ಬಳಗ ಲಿಂಗಸಗೂರುವತಿಯಿಂದ ಏರ್ಪಡಿಸಿರುವ ಕವಿತಾ ಕಲಾತಂಡ ಮೈಸೂರು ಪ್ರಸ್ತುತ ಪಡಿಸುವ ಗಣೇಶ ಅಮೀನಗಡರವರ ಕೌದಿ ನಾಟಕ ಏಕಪಾತ್ರದೊಂದಿಗೆ ಭಾಗ್ಯಶ್ರೀಯವರು ಪ್ರಸ್ತುತಪಡಿಸಿದರು ಸದರಿ ನಾಟಕವನ್ನು ವಿವಿಸಂಘದ ಆಡಳಿತಾಧಿಕಾರಿ ಬಸವಂತ್ರಾಯ ಕುರಿಯವರು ಉದ್ಘಾಟಿಸಿ ಮಾತನಾಡಿ ನಾಟಕದಂತ ಕಲೆಗಳು ಪ್ರಸತುತ ದಿನಮಾನದಲ್ಲಿ ನಸಿಸುತ್ತಿದ್ದು ಅವುಗಳನ್ನು ನೋಡುವುದರ ಮೂಲಕ ಕಲೆಗೆ ಪ್ರೋತ್ಸಾಹಿಸಿ ಕಲಾವಿದರನ್ನು ಬೆಳೆಸಬೇಕಾಗಿದೆ ಎಂದರು
ಕೌದಿ ನಾಟಕದಲ್ಲಿ ಅದನ್ನು ತಯಾರು ಮಾಡುವ ಜನಾಂಗ ಸಂಚಾರಿ ಬದುಕು ರಾಜಮಹಾರಾಜರ ಕಾಲದಲ್ಲಿ ಗುಪ್ತಚಾರಿಕೆ ಮಾಡುವುದು ಸಮಾನ್ಯರ ಬದುಕಿನಲಿ ಕೌದಿ ಹಳೆಯ ತಲೆಮಾರುಗಳ ನೆನಪು ಬೇಸಿಗೆಗೆ ತಂಪು ಚಳಿಗೆ ಬೆಚ್ಚಗೆ ಕೌದಿ ಅವಶ್ಯಬೇಕು ಆದರೆ ಆಧುನಿಕ ಬದುಕು ಕೌದಿಯನ್ನು ಹಿನ್ನೆಲೆಗೆ ಸರಿಸುತ್ತಿದೆ ಹೊಸತಲೆಮಾರು ಕೌದಿ ಹೊಲಿಯಲು ಮನಸು ಮಾಡುತ್ತಿಲ್ಲ ಒಂದು ಕಾಲಕ್ಕೆ ಕೌದಿ ತಮ್ಮ ಇಡೀ ಜೀವನ ಸಾಕಿ ಸಲಹಿದ ಕೀರ್ತಿ ಅದಕ್ಕಿದೆ ಆದರೆ ಕೊರೊನಾದಂತಹ ಸಂದರ್ಭದಲ್ಲಿ ಬಸುಕು ಡೋಲಾಯಮಾನಾಗಿತ್ತು ಸಣ್ಣಪುಟ್ಟ ವ್ಯಾಪಾರಗಳಿಗೆ ಸ್ಪಂದಿಸುವ ಬ್ಯಾಂಕುಗಳಿಗೆ ಕೌದಿಯಿಂದ ಬದುಕು ಕಟ್ಟಿಕೊಳ್ಳುವವರಿಗೆ ಸಹಕಾರ ನಿಡದಿರುವುದು ದುರಂತವಾಗಿದೆ ಕೊನೆಗೆ ಮುಕ್ತಿಗೂ ಕೌದಿಯೆಬೇಕು ಹುಬ್ಬಳ್ಳಿಯ ಸಿದಾರೂಢರ ಮುಕ್ತಿಯಲಿ ಕೌದಿಯ ಮಹತ್ವ ಸಾರುತ್ತಾ ನಾಟಕ ಸಾಗಿತು
ಭಾಗ್ಯಶ್ರೀಯವರು ಸುಮಾರು ಒಂದುಗAಟೆಗಳಕಾಲ ಯಾವುದೆ ಬಿಡುವಿಲ್ಲದೆ ನಿರಂತರವಾಗಿ ಅಭಿನಯಿಸಿದ್ದು ಜನಮೆಚ್ಚುಗೆಯನ್ನು ಪಡೆಯಿತು
ಸತತವಾಗಿ ೩೭ ಪ್ರಯೋಗಗಳನ್ನು ಕಂಡಿರುವ ಸದರಿ ನಾಟಕ ಲಿಂಗಸಗೂರಿನಲ್ಲಿ ೩೮ನೇ ಪ್ರಯೋಗ ಪ್ರದರ್ಶನಗೊಂಡಿತು
ಈ ಸಂದರ್ಭದಲ್ಲಿ ನಾಟಕ ರಚನೆಕಾರ ಗಣೇಶ ಅಮೀನಗಡ, ಬಸವಂತ್ರಾಯ ಕುರಿ, ಬಸವರಾಜಗೌಡ ಗಣೇಕಲ್, ಪುರಸಭೆ ವ್ಯವಸ್ಥಾಪಕ ಹನಮಂತನಾಯಕ, ಕಸಾಪ ಅಧ್ಯಕ್ಷ ಮಲ್ಲಿಕಾರ್ಜುನ ಗೌಡೂರು ಸೇರಿದಂತೆ ಇದ್ದರು