ಶಿಕ್ಷಕರ ದಿನಾಚರಣೆ ಕಾರ್ಯಕ್ರಮ, ಶಿಕ್ಷಣಕ್ಕೆ ಹೆಚ್ಚಿನ ಅನುದಾನ, ಮಹಿಳೆಯರ ನಿರ್ಲಕ್ಷ ಆಕ್ರೋಶ,
ದೇಶದ ಅಭಿವೃದ್ದಿಯಲ್ಲಿ ಶಿಕ್ಷಕರ ಪಾತ್ರ ಅಗಾಧವಾಗಿದೆ-ಶಾಸಕ ವಜ್ಜಲ್
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ಪ್ರತಿಯೊಬ್ಬ ವ್ಯಕ್ತಿಯ ಜೀವನ ವಿಕಾಸವಾಗಲು ಶಿಕ್ಷಕರು ಅವಶ್ಯವಾಗಿದ್ದು ಮಕ್ಕಳಿಗೆ ಸಂಸ್ಕಾರವನ್ನು ಕಲಿಸಿ ಉತ್ತಮ ಸಮಾಜ ನಿರ್ಮಾಣ ಮಾಡುತ್ತಿದ್ದು ದೇಶದ ಅಭಿವೃದ್ದಿಯಲ್ಲಿ ಶಿಕ್ಷಕರ ಪಾತ್ರ ಅಗಾಧವಾಗಿದೆ ಎಂದು ಶಾಸಕ ಮಾನಪ್ಪ ವಜ್ಜಲ್ ಹೇಳಿದರು
ಅವರು ಪಟ್ಟಣದ ವಿಜಯಮಹಾಂತೇಶ್ವರ ಮಠದಲ್ಲಿ ಜಿಲ್ಲಾ ಪಂಚಾಯತ ಶಾಲಾ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣ ಲಿಂಗಸಗೂರು ಇವರ ಸಹಯೋಗದಲ್ಲಿ ಏರ್ಪಡಿಸಿದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಮಕ್ಕಳಿಗೆ ಉತ್ತಮ ಸಂಸ್ಕಾರ ಸಂಸ್ಕೃತಿ ಕಲಿಸುವುದರಿಂದ ಉತ್ತಮ ಸಮಾಜ ನಿರ್ಮಾನವಾಗುತ್ತದೆ ಉತ್ತಮ ಸಮಾಜದಿಂದ ದೇಶದ ಅಭಿವೃದಿ ಸಾಧ್ಯವಾಗಲಿದೆ ಕೆಲವುಕಡೆಯಲ್ಲಿ ಈ ಹಿಂದೆ ಬಯೊತ್ಪಾದನೆಯಂತ ಇತರೆ ಕಾನೂನುಬಾಹಿರ ಚಟುವಟಿಕೆಗಳು ಹೆಚ್ಚಾಗಿದ್ದವು ಅದಕ್ಕೆ ಅಲ್ಲಿಯ ಶಿಕ್ಷಣ ಪದ್ದತಿಯೆ ಕಾರಣವಾಗಿದೆ ಮಿದೀಜಿ ಬಂದಮೇಲೆ ಜಮ್ಮು ಕಾಶ್ಮೀರದಂತ ಪ್ರದೇಶದಲ್ಲಿ ಶಾಂತಿ ನೆಲೆಸಿದೆ ಅದಕ್ಕೆ ಶಿಕ್ಷಣದ ಕೊಡುಗೆ ಅಪಾರವಾಗಿದೆ ಇಂದು ಸರಕಾರಿ ಶಾಲೆಯ ಮಕ್ಕಳು ಸಹಿತ ಉತ್ತಮ ಅಂಕಗಳನ್ನು ಪಡೆದು ಉನ್ನತ ಪರೀಕ್ಷೆಗಳನ್ನು ಬರೆದು ಅಧಿಕಾರಿಗಳು ಆಗುತ್ತಿರುವುದು ಸಂತಸದ ವಿಚಾರವಾಗಿದೆ ಖಾಸಗಿ ಶಾಲೆಗಳಿಗಿಂತ ನಾವೇನು ಕಡಿಮೆ ಎನ್ನುವಂತೆ ಸರಕಾರಿ ಶಾಲಾ ಶಿಕ್ಷಕರು ಕೆಲಸ ಮಾಡುತ್ತಿರುವುದರಿಂದಲೇ ಶಾಲಾ ಗುಣಮಟ್ಟ ಹೆಚ್ಚುತ್ತಿದೆ ಹಲವಾರು ಕಡೆಯಲ್ಲಿ ಕೆಲಶಿಕ್ಷಕರಿಂದಲೇ ಅನೈತಿಕತೆಯಂತಹ ಕೆಲಸಗಳು ನಡೆಯುತ್ತಿದ್ದು ದುರಂತವಾಗಿದೆ ಅಂತಹ ಕೆಟ್ಟಹೆಸರು ತರುವ ಶಿಕ್ಷಕರಾಗದೆ ಉತ್ತಮ ಹೆಸರು ತರುವ ಶಿಕ್ಷಕರಾಗಬೇಕು
ಸರ್ವಪಲ್ಲಿ ರಾಧಾಕೃಷ್ಣ ಹಾಗೂ ಜ್ಯೋತಿಬಾ ಬಾಯಿ ಪುಲೆ ಶಿಕ್ಷಣಕ್ಕೆ ತಮ್ಮದೆಯಾದ ಕೊಡುಗೆ ನೀಡಿದ್ದಾರೆ ಅವರ ವಿಚಾರಧಾರೆಗಳನ್ನು ಅರಿತು ಶಿಕ್ಷಕರು ಸೇವೆ ಸಲ್ಲಿಸಲಿ ಎಂದರು
ಕೆಕೆಆರ್ ಡಿ ಬಿಯಲ್ಲಿ ಲಿಂಗಸಗೂರು ಕ್ಷೆತ್ರಕ್ಕೆ ಹೆಚ್ಚಿನ ಅನಿದಾನವನ್ನು ನೀಡಿದ್ದು ಅದನ್ನು ಸಮರ್ಪಕವಾಗಿ ಬಳಸಿಕೊಂಡು ನಮ್ಮ ಶಾಲೆಗಳ ಮೂಲಭೂತ ಸೌಕರ್ಯಗಳು ಪಾಠೋಪಕರಣ ಪೀಠೋಪಕರಣ ಹಾಗೂ ಶೌಚಾಲಯ ಕುಡಿಯುವ ನೀರು ತರಗತಿ ಕೊಠಡಿಗಳು ಸುಧಾರಣೆಯಾಗಲಿ ಎಂದರು
ಮಹಿಳಾ ಶಿಕ್ಷಕಿಯರ ನಿರ್ಲಕ್ಷ ಆಕ್ರೋಶ: ಕಾರ್ಯಕ್ರಮದಲ್ಲಿ ಶಿಕ್ಷಕರ ವಿವಿಧ ಸಂಘಟನೆಗಳ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು ಅದರಲ್ಲಿ ಮಹಿಳಾ ಶಿಕ್ಷಕಿಯರಿಗೆ ಅವಕಾಶವೇ ನೀಡಿರಲಿಲ್ಲ ಈ ತಾರತಮ್ಯವನ್ನು ಶಿಕ್ಷಕಿ ಗಂಗಮ್ಮ ಕಟ್ಟಿಮನಿ ಪ್ರಶ್ನಿಸಿ ಮಹಿಳೆಯರು ವೇದಿಕೆ ತಯಾರಿಕೆ, ಪ್ರಾರ್ಥನೆ, ಇತ್ಯಾದಿ ಕಾರ್ಯಕ್ರಮಗಳಿಗೆ ಬಳಕೆ ಮಾಡಿಕೊಳ್ಳುತ್ತೀರಿ ಆದರೆ ವೇದಿಕೆಯಲ್ಲಿ ಮಾತ್ರ ಕಡೆಗಣಿಸಲಾಗಿದೆ ಅಲ್ಲದೆ ವೇದಿಕೆಯಲ್ಲಿ ಕರೆದರು ನಮ್ಮ ಹೆಸರುಗಳನ್ನು ಕೊನೆಯಲ್ಲಿ ಹೇಳಲಾಗುತ್ತದೆ ಈ ತಾರತಮ್ಯ ಸರಿಯಲ್ಲಿ ಮುಂದಿನ ಕಾರ್ಯಕ್ರಮಗಳಲ್ಲಿ ನಮಗೂ ಆದ್ಯತೆ ನೀಡಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು
ಅಶೋಕ ಹಂಚಲಿಯವರು ವಿಶೇಷ ಉಪನ್ಯಾಸ ನೀಡಿದರು, ಉತ್ತಮ ಶಿಕ್ಷಕರನ್ನು ಸನ್ಮಾನಿಸಲಾಯಿತು ಕ್ರೀಡಾಕೂಟ ಹಾಗೂ ಪ್ರತಿಭಾ ಕಾರಂಜಿ ಉದ್ಘಾಟಿಸಲಾಯಿತು
ಈ ಸಂದರ್ಭದಲ್ಲಿ ಪಿಕಾರ್ಡ ಬ್ಯಾಂಕ್ ಅಧ್ಯಕ್ಷ ಬಸನಗೌಡ ಮೇಟಿ, ಕೆ,ಡಿ ಬಡಿಗೇರ, ತಹಸೀಲ್ದಾರ ಶಂಶಾಲA, ಹುಂಬಣ್ಣ ರಾಠೊಡ್, ಹನಮಂತಪ್ಪ ಕುಳಗೇರಿ, ಮಾರ್ಟಿನ್ ಅಮಲ್ ರಾಜ್, ಚನ್ನಬಸವರಾಜ ಮೇಟಿ, ನೌಕರರ ಸಂಘದ ಜಿಲಾಧ್ಯಕ್ಷ ಹಾಜಿಬಾಬು ಕಲ್ಯಾಣಿ, ಪ್ರಭುಲಿಂಗ ಗದ್ದಿ, ಬಸಪ್ಪ ಹಂದ್ರಾಳ, ಗುರುಸಂಗಯ್ಯ ಗಣಚಾರಿ, ಅಮರಪ್ಪ ಸಆಲಿ, ಅಮರಯ್ಯ ಹಿರೇಮಠ, ಅಮರೇಶ ನಾಡಗೌಡ ಸೇರಿದಂತೆ ಇದ್ದರು