ಲಿಂಗಸಗೂರು:ಕೆಕೆಆರ್ಡಿಬಿ ಯಿಂದ ಸಣ್ಣ ನೀರಾವರಿಗೆ ೧೨ಕೋಟಿ ಮಂಜೂರಿ, ಕಾಮಗಾರಿ ಶ್ರೀನಿವಾಸನೇ ಬಲ್ಲ!!?
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿಯಿಂದ ತಾಲೂಕಿನ ಸಣ್ಣ ನೀರಾವರಿ ಇಲಾಖೆಯ ಕಾಮಗಾರಿಗಳಿಗೆ ಸುಮಾರು ೧೨ಕೋಟಿ ಮಂಜೂರಿಯಾಗಿದ್ದು ಕಾಮಗಾರಿ ಮಾತ್ರ ಯಾವ ಹಂತದಲ್ಲಿ ಇದೆ ಎಂದು ಹೇಳುವುದಕ್ಕೆ ಜೆಇ ಶ್ರೀನಿವಾಸ ಮೌನವಾಗಿದ್ದು ಅದರ ಸ್ಥಿತಿಗತಿ ಶ್ರೀನಿವಾಸನೆ ಬಲ್ಲ ಎನ್ನುವಂತಾಗಿದೆ
ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿಯಿಂದ ೨೦೨೩-೨೪ನೇ ಸಾಲಿನಲ್ಲಿ ತಾಲೂಕಿನ ಸಣ್ಣ ನೀರಾವರಿ ಇಲಾಖೆಗೆ ೧೧ ಒಂದು ಕಾಮಗಾರಿಗೆ ೨ಕೋಟಿ ಉಳಿದಕಾಮಗಾರಿಗಳಿಗೆ ತಲಾ ಒಂದುಕೋಟಿಯಂತೆ ೧೨ ಕೋಟಿಮಂಜೂರಿಯಾಗಿದ್ದು ಕಾಮಗಾರಿ ಯಾವ ಹಂತದಲ್ಲಿದೆ ಎನ್ನುವುದು ಮಾತ್ರ ನಿಗೂಢವಾಗಿಯೆ ಇದೆ ಯಾಕೆಂದರೆ ಸಂಬಂಧಿಸಿದ ಜೆಇ ಶ್ರೀನಿವಾಸ ಲಿಂಗಸಗೂರಿಗೆ ಬರುತ್ತಾನೊ ಇಲ್ಲವೊ ತಿಳಿಯದು ಆದರೆ ಮೊಬೈಲ್ ಕರೆಯನ್ನು ಸ್ವೀಕರಿಸುವುದಿಲ್ಲವೆಂದು ಶಪಥ ಮಾಡಿದಂತೆ ಕಂಡು ಬರುತ್ತದೆ ಇವರ ನಂಬರಿಗೆ ಕರೆ ಮಾಡಿದರೆ ರಿಂಗ್ ಆಗುತ್ತದೆ ಆದರೆ ಕರೆಸ್ವೀಕರಿಸುವುದಿಲ್ಲ ಹಾಗಾಗಿ ಬಂದಿರುವ ಕಾಮಗಾರಿ ಹಣ ಹಾಗೂ ಕಾಮಗಾರಿ ಯಾವ ಹಂತದಲ್ಲಿವೆ ಎನ್ನುವುದು ಮಾತ್ರ ನಿಗೂಢ ನಿಗೂಢ ಎನ್ನುವಂತಾಗಿದೆ
ಎಇಇ ಲೋಕೇಶರವರಿಗೆ ಕೇಳಿದರೆ ಅಲ್ಲಿ ಶ್ರೀನಿವಾಸ ಎನ್ನುವವರು ಇರುತ್ತಾರೆ ಅವರೆ ಮಾಹಿತಿ ನೀಡುತ್ತಾರೆ ಎನ್ನುತ್ತಾರೆ ಹಾಗಾದರೆ ಇಲ್ಲಿ ಕಾಮಗಾರಿ ನಡೆಯುತ್ತಿದೆಯಾ ಅಥವ ಇಲ್ಲವೇ ಸಾರ್ವಜನಿಕರಿಗೆ ತಿಳಿಯದಂತಾಗಿದೆ
ಕಾಮಗಾರಿಗಳು:ತಾಲೂಕಿನ ಕೋಠಾ ಗ್ರಾಮದ ಸ,ನಂ೫೪೪ರ ಹತ್ತಿರ ಇರುವ ಹುಣಸೆಮರದ ಹತ್ತಿರದ ಹಳ್ಳಕ್ಕೆ ಚೆಕ್ ಡ್ಯಾಂ-೧೦೦ಲಕ್ಷ, ತಾಲೂಕಿನ ಮಲ್ಲಾಪುರ,ಉಪ್ಪಾರನಂದಿಹಾಳ, ಭೂಪುರ ರಾಂಪೂರ, ಭೋಗಾಪುರ ಕೆರೆಗಳನ್ನು ಅಭಿವೃದ್ದಿ ಪಡಿಸುವುದು ೨೦೦ಲಕ್ಷ, ಪೈದೊಡ್ಡಿ ಗ್ರಾಮದ ಹಳ್ಳಕ್ಕೆ ಚಕ್ ಡ್ಯಾಂ ನಿರ್ಮಾಣ ೧೦೦ಲಕ್ಷ, ಯಲಗಟ್ಟಾ ಗ್ರಾಮದ ವಡಕೇರಿ ಹಳ್ಳಕ್ಕೆ ಚಕ್ ಡ್ಯಾಂ ೧೦೦ಲಕ್ಷ, ವಂದ್ಲಿ ಹೊಸೂರು ಗ್ರಾಮದ ಹಳ್ಳಕ್ಕೆ ಚಕ್ ಡ್ಯಾಂ ನಿರ್ಮಾಣ ೧೦೦ ಲಕ್ಷ, ಗೆಜ್ಜಲಗಟ್ಟಾ ಗ್ರಾಮದ ಹಳ್ಳಕ್ಕೆ ಚಕ್ ಡ್ಯಾಂ ನಿರ್ಮಾಣ ೧೦೦ ಲಕ್ಷ,ನಿಲೋಗಲ್ ಗ್ರಾಮದ ಹಳ್ಳಕ್ಕೆ ಚೆಕ್ ಡ್ಯಾಂ ನಿರ್ಮಾಣ ೧೦೦ಲಕ್ಷ, ರಾಯದುರ್ಗ ಗ್ರಾಮದ ಭೈರಪ್ಪನ ಹಳ್ಳಕ್ಕೆ ಚಕ್ ಡ್ಯಾಂ ನಿರ್ಮಾಣ ೧೦೦ಲಕ್ಷ, ಟಣಮಕಲ್ ಗ್ರಾಮದ ಡೊಕ್ಕಿನ ಹಳ್ಳಕ್ಕೆ ಚಕ್ ಡ್ಯಾಣ ನಿರ್ಮಾಣ ೧೦೦ಲಕ್ಷ, ಬಂಡೇಬಾವಿ ಗ್ರಾಮದ ಜಟ್ಟೆನ ಹಳ್ಳಕ್ಕೆ ಚಕ್ ಡ್ಯಾಂ ನಿರ್ಮಾಣ೧೦೦ಲಕ್ಷ, ಫೂಲಬಾವಿ ಗ್ರಾಮದ ರುದ್ರಯ್ಯನ ಹಳ್ಳಕ್ಕೆ ಚಕ್ ಡ್ಯಾಂ ನಿರ್ಮಾಣ ೧೦೦ಲಕ್ಷ, ಹೀಗೆ ಒಟ್ಟು ೧೨ಕೋಟಿ ಅನುದಾನ ಮಂಜೂರಿಯಾಗಿದ್ದು ಮೂಲಗಳಿಂದ ಮಾಹಿತಿ ದೊರಕಿದೆ
ಇದು ಕೇವಲ ಕೆಕೆಆರ್ ಡಿ ಬಿಯ ಹಣವೇ ೧೨ಕೋಟಿ ಬಂದಿದ್ದು ಇನ್ನು ಬೇರೆಬೇರೆ ಅನುದಾನಗಳು ಲಭ್ಯವಿರಲು ಸಾಧ್ಯ ಒಟ್ಟಾರೆ ಎಷ್ಟು ಬರುತ್ತದೆ ಇಲ್ಲಿ ಕಾಮಗಾರಿಗಳು ಎಷ್ಟರಮಟ್ಟಿಗೆ ನಡೆಯುತ್ತಿವೆ ಎನ್ನುವುದು ಮಾತ್ರ ಯಾರಿಗೂ ಗೊತ್ತಾಗುವುದೆ ಇಲ್ಲ
ಲಿಂಗಸಗೂರಿನಲ್ಲಿ ಆಫಿಸ್ ಇಲ್ಲ ಜೆಇಯು ನಾಪತ್ತೆ: ಸಣ್ಣ ನೀರಾವರಿ ಇಲಾಖೆಯ ಆಫೀಸ್ ಲಿಂಗಸಗೂರಿನಲ್ಲಿ ಇರುವುದಿಲ್ಲ ಕೇವಲ ಒಬ್ಬ ಜೆಇ ಮಾತ್ರ ಇದ್ದು ಅವರೆ ಎಲ್ಲವನ್ನು ನೋಡಿಕೊಳ್ಳಬೇಕಾಗಿದೆ ಸದರಿ ಇಲಾಖೆಯಿಂz ತಾಲೂಕಿಗೆ ಯಾವ ಯಾವ ಕಾಮಗಾರಿಗಳು ಬರುತ್ತವೆ ಅವು ಎಷ್ಟರ ಮಟ್ಟಿಗೆ ಕಾಮಗಾರಿ ನಡೆಯುತ್ತವೆ ಎನ್ನುವುದು ಸರಿಯಾದ ಮಾಹಿತಿಯೆ ದೊರಕುವುದಿಲ್ಲ ಇನ್ನು ಮುಂದಾದರು ಕಾಮಗಾರಿಯ ಮಾಹಿತಿ ಹಾಗೂ ಕಾಮಗಾರಿ ನಡೆದಿರುವ ಬಗೆಗೆ ಸಾರ್ವಜನಿಕರ ಗಮನಕ್ಕೆ ಬರಬಹುದೆ ಕಾದುನೋಡೋಣ?