ಖರೀದಿದಾರರೊಡನೆ ಪ್ರವಾಸಿಮಂದಿರಲ್ಲಿ ಸಬ್ ರಜಿಸ್ಟರ್ ಊಟಕ್ಕೆ ಹಾಜರ್, ಸಾರ್ವಜನಿಕರ ಆಕ್ರೋಶ
ಕಂಪ್ಯೂಟರ್ ಅವರ ಮನೆಗೆ ತೆಗೆದುಕೊಂಡುಹೋಗಿ ರಜಿಸ್ಟರ ಮಾಡು, ಸಾರ್ವಜನಿಕರು ಆಫೀಸ್ ಕಾಯುತ್ತಾ ಕೂಡಲಿ-ಸಿರಾಜ್
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ಪಟ್ಟಣದ ಸಬ್ ರಜಿಸ್ಟರ ಪದ್ಮನಾಭ ಗುಡಿ ಖರದೀದಾರರೊಡನೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಊಟಕ್ಕೆ ಹಾಜರ್ ಆಗಿದ್ದನ್ನು ಕಂಡ ಸಾರ್ವಜನಿಕರು ಶ್ರೀಮಂತರು ಬಂದರೆ ಅವರೊಮದಿಗೆ ಉಟಕ್ಕೆ ಹೋಗುತ್ತಿರು ಜನಸಾಮಾನ್ಯರು ನೀವು ಬರುವವರೆಗೆ ಆಫಿಸ್ ಕಾಯಬೇಕೇನು ಎಂದು ಸಿರಾಜ್ ಹಾಗೂ ದುರ್ಗೇಶ್ ಆಕ್ರೋಶ ವ್ಯಕ್ತಪಡಿಸಿದರು
ರಾಯಚೂರಿನ ಶಾಸಕ ಶಿವರಾಜ ಪಾಟೀಲರು ಪತ್ನಿ ಹಾಗೂ ಅವರ ಸಹವರ್ತಿಗಳು ಲಿಂಗಸಗೂರಿನಲ್ಲಿ ಭೂಮಿ ಖರೀದಿಗಾಗಿ ಬಂದಿದದರು ಎನ್ನಲಾಗುತ್ತಿದ್ದು ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಊಟಕ್ಕೆ ವ್ಯವಸ್ಥೆ ಮಾಡಿದ್ದು ಅಲ್ಲಿಗೆ ಸಬ್ ರಜಿಸ್ಟರ್ ಪದ್ಮನಾಭಗುಡಿ ಆಗಮಿಸಿ ಅವರೊಡನೆ ಕಛೇರಿ ವೇಳೆಯಲ್ಲಿ ಊಟಕ್ಕೆ ಕುಳಿತಿದ್ದ ಎಂದು ಆರೋಪಿಸಲಾಗುತ್ತಿದೆ
ಅದನ್ನು ಗಮನಿಸಿದ ಸಿರಾಜ್ ಹಾಗೂ ದುರ್ಗೇಶ ಪ್ರವಾಸಿಮಂದಿರಕ್ಕೆ ಆಗಮಿಸಿ ಸಬ್ ರಜಿಸ್ಟರನನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ ಕಛೇರಿ ವೇಳೆಯಲ್ಲಿ ಪ್ರವಾಸಿ ಮಂದಿರಕ್ಕೆ ಬಂದಿದ್ದು ಅಲ್ಲದೆ ಖರೀದಿದಾರರೊಡನೆ ಊಟಕ್ಕೆ ಕುಳಿತಿರುವುದರ ಹಿಂದಿನ ಉನ್ನಾರವಾದರು ಏನು ಅವರು ಕರೆದಲ್ಲಿಗೆ ಹೋಗುತ್ತಿ ಎಂದಾದರೆ ಕಂಪ್ಯೂಟರನ್ನು ತೆಗೆದುಕೊಂಡು ಅವರ ಮನೆಗೆ ಹೋಗು ಇನ್ನು ಊಟದ ವೇಳೆಯಾಗಿಲ್ಲ ಆಗಲೆ ಆಫೀಸಿನಿಂದ ಬಂದಿದ್ದು ಸಾರ್ವಜನಿಕರು ಅಲ್ಲಿ ಆಫೀಸ್ ಕಾಯಬೇಕೇನು ಎಂದು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಳ್ಳುತ್ತಿರುವಂತೆ, ನಾನು ಊಟಕ್ಕೆ ಬಂದಿರುವೆ ಎನ್ನುತ್ತಾ ಅಲ್ಲಿಂದ ಪರಾರಿಯಾದ ಘಟನೆ ಜರುಗಿತು
ಕೆಲದಿನಗಳ ಹಿಂದೆಯೆ ಅನಧೀಕೃತ ವ್ಯಕ್ತಿ ರಾತ್ರಿಯಲ್ಲಿ ಆಫೀಸ್ ತೆಗೆದು ಕುಳಿತುಕೊಂಡಿದ್ದು ಅದು ಮಾಸುವ ಮುನ್ನವೇ ಸಬ್ ರಜಿಸ್ಟರ್ ಖರೀದಿದಾರರೊಂದಿಗೆ ಪ್ರವಾಸಿ ಮಂದಿರಲ್ಲಿ ಊಟಕ್ಕೆ ಹಾಜರಾಗಿರುವುದನ್ನು ಕಂಡರೆ ಅದರ ಹಿಂದಿನ ಕರಾಮತ್ತುಗಳು ಹೊರಬರಬೇಕು ಎನ್ನುವ ಮಾತುಗಳು ಸಾರ್ವಜನಿಕರಿಂದ ಕೇಳಿ ಬರುತ್ತಿವೆ