ಗಣೇಶ ಪ್ರತಿಷ್ಠಾಪಿಸಿ ಭಾವೈಕ್ಯತೆ ಮೆರೆದ ಮುಸ್ಲಿಂ ಯುವಕ ರಫೀ ಮುಸ್ಲಿಂ ಯುವಕನಿಂದಲೇ ಗಣೇಶನಿಗೆ ಪೂಜೆ,

Laxman Bariker
ಗಣೇಶ ಪ್ರತಿಷ್ಠಾಪಿಸಿ ಭಾವೈಕ್ಯತೆ ಮೆರೆದ ಮುಸ್ಲಿಂ ಯುವಕ ರಫೀ ಮುಸ್ಲಿಂ ಯುವಕನಿಂದಲೇ ಗಣೇಶನಿಗೆ ಪೂಜೆ,
WhatsApp Group Join Now
Telegram Group Join Now

ಗಣೇಶ ಪ್ರತಿಷ್ಠಾಪಿಸಿ ಭಾವೈಕ್ಯತೆ ಮೆರೆದ ಮುಸ್ಲಿಂ ಯುವಕ ರಫೀ
ಮುಸ್ಲಿಂ ಯುವಕನಿಂದಲೇ ಗಣೇಶನಿಗೆ ಪೂಜೆ, ೬ವರ್ಷದಿಂದ ಪ್ರತಿಷ್ಠಾಪನೆ

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು:ಹಿಂದು ಮುಸ್ಲಿಂ ಎನ್ನುತ್ತಾ ಕೋಮುಭಾವನೆಗಳ ಹರಡುವವರ ನಡುವೆ ಭಾವೈಕ್ಯತೆ ಮೆರೆಯುವವರು ಇದ್ದಾರೆ ಅಂತಹ ಭಾವೈಕ್ಯತೆಯ ಭಾವದ ಎಂ ಡಿ ರಫಿ ಗಣೇಶನನ್ನು ಪ್ರತಿಷ್ಠಾಪಿಸಿ ತಾನೆ ಗಂಟೆ ಬಾರಿಸಿ ಪೂಜೆ ಮಾಡುವ ಅಪರೂಪದ ದೃಶ್ಯ ಪಟ್ಟಣದಲ್ಲಿ ಕಂಡು ಬಂದಿದೆ

Oplus_131072

ಪಟ್ಟಣದ ೧೮ನೇ ವಾರ್ಡಿನ ನಿವಾಸಿ ಎಂ ಡಿ ರಫಿ ಮುಸ್ಲಿಂನಾದರು ಸಹಿತ ತನ್ನ ಗೆಳೆಯರ ಬಳಗದ ಸಹಾಯದಿಂದ ಪ್ರತಿವರ್ಷ ಗಣೇಶನನ್ನು ಪ್ರತಿಷ್ಠಾಪಿಸಿ ಪೂಜೆ ಮಾಡಿ ಭಾವೈಕ್ಯತೆ ಮೆರೆಯುತ್ತಿದ್ದಾನೆ ಸತತವಾಗಿ ೬ನೇ ವರ್ಷ ಇದಾಗಿದ್ದು ಆರು ವರ್ಷದಿಂದಲೂ ಗಣೇಶನನ್ನು ಕೂಡಿಸಿಉತ್ತಾ ಬಂದಿದ್ದು ಇದಕ್ಕೆ ಅವರ ತಂದೆ ಐಮತ್ ಸಾಬ ಸಾಥ್ ನೀಡುತ್ತಿದ್ದಾರೆ


ಆಜಾದನಗರ ಯುವಕ ಮಂಡಳಿ ಎಂದು ರಚಿಸಿಕೊಂಡು ಕಳೆದ ಆರುವರ್ಷಗಳಿಂದ ಗಣೇಶನನ್ನು ಪ್ರತಿಷ್ಠಾಪಿಸುತ್ತಾ ಬರುತಿದ್ದಾನೆ ಅಲ್ಲದೆ ತಾನೆ ಸ್ವತಃ ಗಂಟೆ ಬಾರಿಸಿ ಧೂಪವನ್ನು ಬೆಳೆಗುತ್ತಾನೆ ತಾನು ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿದ್ದರು ಗಣೇಶನ ಮೇಲೆ ಅಪಾರವಾದ ಭಕ್ತಿಯಿಂದ ಪ್ರತಿವರ್ಷ ಗಣೇಶನನ್ನು ಕೂಡಿಸುತ್ತಾ ಬಂದಿದ್ದಾನೆ

ಅಲ್ಲದೆ ಅನ್ನಸಂತಪರ್ಣೆಯನ್ನು ಮಾಡಿಸಲಾಗುತ್ತಿದ್ದು ಇಲ್ಲಿ ಹಲವಾರು ಭಕ್ತ ಜನರು ಬಂದು ಪ್ರಸಾದ ಸ್ವೀಕರಿಸುವುದು ಕಂಡು ಬರುತ್ತದೆ
ಒಬ್ಬ ಮುಸ್ಲಿಂನಾಗಿಯು ಗಣೇಶನನ್ನು ಕೂಡಿಸಲು ಹೇಗೆ ಮನಸು ಮಾಡಿದೆ ಎಂದರೆ ದೇವರು ಎಲ್ಲರಿಗೂ ಒಂದೆ ಅದೇ ರೀತಿಯಾಗಿ ಮಾನವರೆಲ್ಲರೂ ಒಂದೆ ಇಲ್ಲಿ ಹಿಂದು ಮುಸ್ಲಿಂ ಎನ್ನುವುದಕಿಂತ ನಾವೆಲ್ಲ ಮನುಷ್ಯರು ಎನ್ನುವ ಭಾವ ನಮ್ಮಲ್ಲಿ ಮೂಡಿಬರಬೇಕಾಗಿದೆ ಎನ್ನುವಂತ ವಿಚಾರವನ್ನು ಎಂ ಡಿ ರಫಿ ಹೇಳುತ್ತಾನೆ
ಭವ್ಯಭಾರತದಲ್ಲಿ ನಾನಾ ಜಾತಿಯ ಮನುಷ್ಯರಿದ್ದರು ನಾವೆಲ್ಲ ಭಾರತೀಯರು ಎನ್ನುವ ಭಾವ ತರುವಂತಹ ಇಂತಹ ಘಟನೆಗಳು ನಾಡಿನಲ್ಲಿ ಭಾವೈಕ್ಯತೆ ಮುಡಿಸುವಲ್ಲಿ ಸಫಲವಾಗುತ್ತವೆ ಅಲ್ಲವೇ
ನಾವೆಲ್ಲ ಮಾನವರು ನಮಗೆಲ್ಲ ದೇವರು ಒಬ್ಬನೆ ಎನ್ನುವ ವಿಚಾರದಲ್ಲಿ ಪ್ರತಿವರ್ಷ ಗಣೇಶನನ್ನು ಪ್ರತಿಷ್ಠಾಪಿಸುತ್ತಿದ್ದು ನನ್ನಿಂದ ಎಷ್ಟು ಸಾಧ್ಯವೊ ಅಲ್ಲಿಯವರೆಗೆ ಈ ಆಚರಣೆಯನ್ನು ಮಾಡುವುದಾಗಿ ರಫಿ ನುಡಿಯುತ್ತಾನೆ
ಈ ಸಂದರ್ಭದಲ್ಲಿ ಎಂ,ಡಿ ರಫಿ, ಆಯಿಮತ್ ಸಾಬ, ಈಶಪ್ಪ ಪೇರಿ ಹೊನ್ನಳ್ಳಿ, ಮಹೇಶ, ನರಸಿಂಹ, ರುದ್ರಪ್ಪ, ಅಮರೇಶ ಬಡಿಗೇರ, ಶಿವು,ಸತೀಶ, ಆಕಾಶ, ಪ್ರತಿಕ್ಷಾ, ರಾಹುಲ್, ನಾಗು ಸೇರಿದಂತೆ ಇದ್ದರು

WhatsApp Group Join Now
Telegram Group Join Now
Share This Article