,ಚಿ,ಗ ಕಂಪನಿಗೆ ಜಮೀನು ಕಳೆದುಕೊಂಡ ಪಕ್ಷಗಾರರಿಗೆ ಪರಿಹಾರ ಮೊತ್ತ ನೀಡಿ-ನ್ಯಾ,ಶ್ರೀಮತಿ ಉಂಡಿ ಮಂಜುಳಾ ಶಿವಪ್ಪ

Laxman Bariker
,ಚಿ,ಗ ಕಂಪನಿಗೆ ಜಮೀನು ಕಳೆದುಕೊಂಡ ಪಕ್ಷಗಾರರಿಗೆ ಪರಿಹಾರ ಮೊತ್ತ ನೀಡಿ-ನ್ಯಾ,ಶ್ರೀಮತಿ ಉಂಡಿ ಮಂಜುಳಾ ಶಿವಪ್ಪ
WhatsApp Group Join Now
Telegram Group Join Now

,ಚಿ,ಗ ಕಂಪನಿಗೆ ಜಮೀನು ಕಳೆದುಕೊಂಡ ಪಕ್ಷಗಾರರಿಗೆ ಪರಿಹಾರ ಮೊತ್ತ ನೀಡಿ-ನ್ಯಾ,ಶ್ರೀಮತಿ ಉಂಡಿ ಮಂಜುಳಾ ಶಿವಪ್ಪ

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು:ಪಟ್ಟಣದ ಹಿರಿಯಶ್ರೇಣಿ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾಲಯದಲ್ಲಿ ಪೂರ್ವಭಾವಿ ಲೋಕದಾಲತ್ ಆಯೋಜಿಸಿದ್ದು ಹಟ್ಟಿ ಚಿನ್ನದ ಗಣಿ ಕಂಪನಿಗೆ ಜಮೀನು ಕಳೆದುಕೊಂಡ ಪಕ್ಷಗಾರರು ಹಾಗೂ ಕಂಪನಿಯವರ ನಡುವೆ ಹೊಂದಾಣಿಕೆ ಮಾಡಿ ಪರಿಹಾರ ಮೊತ್ತವನ್ನು ನೀಡಿ ಎಂದು ನಿರ್ಣಯಿಸಲಾಯಿತು
ಕಂಪನಿಗೆ ಭೂಮಿ ಕಳೆದುಕೊಂಡ ಪಕ್ಷಗಾರರಿಗೆ ನ್ಯಾಯಾಲಯಕ್ಕೆ ಅಲೆದಾಟವನ್ನು ತತಪ್ಪಿಸಲು ಗೌರವಾನ್ವಿತ ಉಂಡಿ ಮಂಜುಳಾ ಶಿವಪ್ಪ ಹಿರಿಯ ಶ್ರೇಣಿ ಸಿವಿಲ್ಮತ್ತು ಜೆಎಂಎಫ್ ಸಿ ನ್ಯಾಯಾಧೀಶರು ಹಾಗೂ ಅಧ್ಯಕ್ಷರು ತಾಲೂಕು ಸೇವಾ ಸಮಿತಿ ಲಿಂಗಸಗೂರ ನಡೆಸಲಾಯಿತು ಕಂಪನೀಯವರಿಗೆ ಜಮೀನು ಕಳೆದುಕೊಂಡ ಪಕ್ಷದಾರರಿಗೆ ಕಂಪನೀಯವರಿAದ ನೀಡಭೇಕಾದ ಪರಿಹಾರ ಮೊತ್ತವನ್ನು ನೀಡಿ ಹಾಗೂ ಪಕ್ಷದಾರರಿಗೆ ಬರುವ ಕನಿಷ್ಟ ಮೊತ್ತ ನೀಡಿದರೆ ಒಪ್ಪಿಕೊಳ್ಳುವಿರಾ ಎಂದು ನ್ಯಾಯಾಧೀಶರು ಕೇಳಿದರು ಪಕ್ಷಗಾರರು ನಮಗೆ ೧೦% ಅಥವ ೧೫% ಕಡಿಮೆ ಮಾಡಿಕೊಟ್ಟರೆ ನಾವು ಸಿದ್ದರಿದೇವೆ ಎಂದು ಹೇಳಿದರು ಪಕ್ಷಗಾರರ ಪರ ವಕೀಲರು ಕೂಡ ಆಗಬಹುದು ಎಂದರು ನಂತರ ಕಂಪನಿಯವರ ಅಭಿಪ್ರಾಯ ಕೇಳಿದಾಗ ನಾವು ಕಂಪನೀಯ ಎಂ ಡಿ ಯವರಿಗೆ ಮಾತನಾಡಿ ಆದಷ್ಟು ಬೇಗನೆ ಬರುವ ಲೋಕ ಅದಾಲತ್ತಿನಲ್ಲಿ ಒಟ್ಟು ೧೪೦ ಪ್ರಕರಣಗಳು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳುತ್ತೇವೆ ಚಂದ್ರಶೇಖರ ಮರಗೂರು ನಿವೃತ್ತ ಜಿಲ್ಲಾನ್ಯಾಯಾಧೀಶರು ಮತ್ತು ಕಾನೂನು ಸಲಹಾಗಾರರು ಹ,ಚಿ,ಗ ಹಾಗೂ ಯಮನೂರಪ್ಪ ಹಿರಿಯ ವ್ಯವಸ್ಥಾಪಕರು, ತಿಳಿಸಿದರು
ಈ ಸಂದರ್ಭದಲ್ಲಿ ಶ್ರೀ ಭೂಪನಗೌಡ ಪಾಟೀಲ್ ತಾಲೂಕಾ ವಕೀಲರ ಸಂಘ, ಆಶಿಕ್ ಅಹ್ಮದ್ ಕಾನೂನು ಸಲಹೆಗಾರರು ಹ,ಚಿ,ಗ ಪಕ್ಷಗಾರರ ಪರ ವಕೀಲರಾದ ಮುದಕಪ್ಪ ವಕೀಲರು,ಮಾನಪ್ಪ ವಕೀಲರು, ಶರಣಬಸವ ಪಟ್ಟಣ ಶೆಟ್ಟಿ ಜರ್ತಾಜ್ ಸೇರಿದಂತೆ ಇದ್ದರು

WhatsApp Group Join Now
Telegram Group Join Now
Share This Article