ಅಮರೇಶ್ವರ ದೇವಸ್ಥಾನದ ಅಭಿವೃದ್ದಿ,ಸಹಾಯಕ ಆಯುಕ್ತರ ಭೇಟಿ,ಪರಿಶೀಲನೆ

Laxman Bariker
ಅಮರೇಶ್ವರ ದೇವಸ್ಥಾನದ ಅಭಿವೃದ್ದಿ,ಸಹಾಯಕ ಆಯುಕ್ತರ ಭೇಟಿ,ಪರಿಶೀಲನೆ
WhatsApp Group Join Now
Telegram Group Join Now

ಅಮರೇಶ್ವರ ದೇವಸ್ಥಾನದ ಅಭಿವೃದ್ದಿ,ಸಹಾಯಕ ಆಯುಕ್ತರ ಭೇಟಿ,ಪರಿಶೀಲನೆ

ಮೂಲಭೂತ ಸೌಕರ್ಯ, ಸ್ವಚ್ಚತೆಗೆ ಆದ್ಯತೆ, ದೇಣಿಗೆ ಕಾಣಿಕೆ, ಪೋಲಾಗದಂತೆ ಕ್ರಮ,

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು:ತಾಲೂಕಿನ ಐತಿಹಾಸಿಕ ಹಾಗೂ ಪುರಾಣಪ್ರಸಿದ್ದವಾದ ಗುರುಗುಂಟ ಅಮರೇಶ್ವರ ದೇವಸ್ಥಾನವನ್ನು ಮೂಲಭೂತಸೌಕರ್ಯ ಸೇರಿ ವಿವಿಧ ಅಭಿವೃದ್ದಿಗಳನ್ನು ಕೈಗೊಳ್ಳಲು ಸಹಾಯಕ ಆಯುಕ್ತರಾದ ಬಸವಣ್ಣೆಪ್ಪ ಕಲಶಟ್ಟಿಯವರು ದೇವಸ್ಥಾನಕ್ಕೆ ಭೇಟಿ ನಿಡಿ ಪರಿಶೀಲನೆ ನಡೆಸಿದರು


ಸದರಿ ದೇವಸ್ಥಾನಕ್ಕೆ ಸಾಕಷ್ಟು ಪ್ರಮಾಣದಲ್ಲಿ ಭಕ್ತರಿಂದ ಆದಾಯ ಬರುತ್ತದೆ ಆದರೆ ಅದರ ಸದ್ವಿನಿಯೋಗವಾಗದೆ ದೇವಸ್ಥಾನವು ಅಭಿವೃದ್ದಿಯಲ್ಲಿ ಕುಂಟಿತಗೊAಡಿದೆ ಎನ್ನುವ ಮಾತುಗಳು ಕೇಳಿಬರುತ್ತಿದ್ದು ಅದನ್ನು ಅರಿತ ಸಹಾಯಕ ಆಯುಕ್ತರು ಸ್ವತಃ ತಾವೆ ಒಂದು ದಿನ ಭೇಟಿನೀಡಿ ಪೂರ್ವಮಾಹಿತಿ ಪಡೆದುಕೊಂಡು ಬಂದು ನಂತರ ಸ೪ರಂದು ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ದೇವಸ್ಥಾನಕ್ಕೆ ಆಗಮಿಸಿ ಕುಂದುಕೊರತೆಗಳನ್ನು ಅಧಿಕಾರಿಗಳೊಂದಿಗೆ ಆಲಿಸುವುದರ ಜೊತೆಗೆ ತಮ್ಮದೆಯದ ಸಲಹೆ ಸೂಚನೆಗಳನ್ನು ನೀಡಿದರು


ಅದರಂತೆ ದೇವಸ್ಥಾನದ ವಿವಿಧ ಭಾಗಗಳಲ್ಲಿ ಇನ್ನು ಕೆಲ ಸಿಸಿಕ್ಯಾಮರಾಗಳನ್ನು ಅಳವಡಿಸಬೇಕು, ಹಬ್ಬ ಹರಿದಿನಗಳಲ್ಲಿ ಭಕ್ತರು ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು ನೂಕುನುಗ್ಗಲು ತಪ್ಪಿಸಲು ಗ್ರಿಲ್ ಗಳನ್ನು ಅಳವಡಿಸಲು ಸೂಚಿಸಿದರು ಅಲ್ಲದೆ ಭಕ್ತರು ಒಂದೆಡೆಯಿಂದ ಪ್ರವೇಶ ಪಡೆದು ಅಮರೇಶ್ವರ ಮೂಲದೇವಸ್ಥಾನ,ಆದಯ್ಯನ ಗುಡಿ, ಗಡಿಗಿಬಾವಿ,ಗುರುಮಠ ಹೀಗೆ ದರ್ಶನ ಪಡೆದ ನಂತರ ದಾಸೋಹ ಮಂಟಪದ ಕಡೆಗೆ ನಡೆದು ಹೊರಹೋಗಲು ಅವಕಾಶ ಮಾಡಬೇಕು
ಎರಡು ಹೊಂಡಗಳು ಇದ್ದು ಅದರಲ್ಲಿ ಮೊದಲನೆಯ ಹೊಂಡದಲ್ಲಿ ಯಾರು ಜಳಕ ಮಾಡಬಾರದು ಅದು ಪರಿಶುದ್ದವಾಗಿರುವಂತೆ ಕಾಪಾಡಬೇಕು ಎರಡನೆ ಹೊಂಡವನ್ನು ದುರಸ್ಥಿ ಮಾಡಿ ಅದರಲ್ಲಿ ಜಳಕ ಮಾಡಲು ಅವಕಾಶ ನಿಡಬೇಕು,
ಐಟೆಕ್ ಶೌಚಾಲಯಗಳು ಮಂಜೂರಿಯಾಗಿದ್ದು ಅವುಗಳನ್ನು ಹೊರಭಾಗದಲ್ಲಿ ಕಟ್ಟಬೇಕು ಅದರಲ್ಲಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ಇರುವಂತೆ ನೊಡಿಕೊಳ್ಳಬೇಕು
ದೇವಸ್ಥಾನದ ಸುತ್ತಮುತ್ತ ಶುಚಿತ್ವ ಕಾಪಾಡಬೇಕು ಎಲ್ಲಿಯೂ ಕಸಕಡ್ಡಿ ಬೀಳದಂತೆ ಸ್ವಚ್ಚವಾಗಿಡಬೇಕು ಕಸವಿಲೇವಾರಿ ಮಾಡಲು ಗ್ರಾಮಪಂಚಾಯ್ತಿಯ ಕಸವಿಲೇವಾರಿ ವಾಹನ ದಿನಾಲು ಬಂದು ಕಸಸಾಗಿಸುವಂತಾಗಬೇಕು, ದೇವಸ್ಥಾನದಲ್ಲಿ ಕೆಲಸ ಮಾಡುವ ಸ್ವೀಪರ್ ಹಾಗೂ ಸಿಬ್ಬಂದಿಗಳಿಗೆ ಅವರದೆಯಾದ ಸಮವಸ್ತçಗಳು ಇರಬೇಕು ಕಲ್ಯಾಣ ಮಂಟಪವನ್ನು ದುರಸ್ಥಿಗೊಳಿಸಬೇಕು ಮದುವೆ ಇತರೆ ಕಾರ್ಯಕ್ರಮಗಳಿಗೆ ಬೇಕಾಗುವ ಅಡುಗೆ ಪಾತ್ರೆ ಇತ್ಯಾದಿ ಪರಿಕರಗಳನ್ನು ದೇವಸ್ಥಾನದ ಸಮಿತಿಯಿಂದ ಸರಬರಾಜು ಮಾಡುವಂತಾಗಬೇಕು ಸುಮಾರು ನಾಲ್ಕುನುರು ಖುರ್ಚಿಗಳನ್ನು ಖರೀದಿಸಬೇಕು ಸೇರಿದಂತೆ ವಿವಿಧ ಸೌಕರ್ಯಗಳನ್ನು ಆದಷ್ಟು ಬೇಗನೆ ಅಧಿಕಾರಿಗಳು ಮಾಡಬೇಕು ಎಂದು ಸೂಚಿಸಿದರು
ಅಲ್ಲದೆ ೧೫೦ಎ ಮುಖ್ಯರಸ್ತೆಯಲ್ಲಿ ದೇವಸ್ಥಾನದ ನಾಮಫಲಕವನ್ನು ಹಾಕಬೇಕು ಮತ್ತು ಬಸ್ಸುಗಳು ನಿಲುಗಡೆಯಾಗುವಂತೆ ಮಾಡಬೇಕು ಇದರಿಂದ ಭಕ್ತರಿಗೆ ಹೆಚ್ಚು ಅನುಕೂಲವಾಗಲಿದೆಎಂದರು
ಈ ಸಂದರ್ಭದಲ್ಲಿ ತಹಸೀಲ್ದಾರ ಶಂಶಾಲA, ಜಿ,ಫಂ, ನೀರುಸರಬರಾಜು ಅಧಿಕಾರಿಗಳು ಸಾರಿಗೆ ಪೊಲೀಸ್ ಕಂದಾಯ ಇಲಾಖೆ ಟಿಎಂಸಿ ಮ್ಯಾನೇಜರ ಹನಂತನಾಯಕ, ದೇವಸ್ಥಾನದ ಹನುಮೇಶ,ಹೀಗೆ ವಿವಿಧ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ಸೇರಿದಂತೆ ಇದ್ದರು
“ಅಮರಶ್ವರ ದೇವಸ್ಥಾನದ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸಲಾಗುವುದು ಭಕ್ತರಿಗೆ ಹೆಚ್ಚಿನ ಅನುಕೂಲ ಮಾಡುವುದರ ಮೂಲಕ ಇದೊಂದು ಪ್ರವಾಸಿ ತಾಣವಾಗಿ ಮಾಡಲು ಶ್ರಮಿಸಲಾಗುವುದು”- ಬಸವಣ್ಣೆಪ್ಪ ಕಲಶೆಟ್ಟಿ ಸಹಾಯಕ ಆಯುಕ್ತರು ಲಿಂಗಸಗೂರು

WhatsApp Group Join Now
Telegram Group Join Now
Share This Article