ಸಬ್ ರಜೀಸ್ಟರ್ ಆಫೀಸ್ ರಾತ್ರಿ ಓಪನ್, ಸಿಬ್ಬಂದಿಗೆ ನೋಟಿಸ್-ಪದ್ಮನಾಭಗುಡಿ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ಪಟ್ಟಣದಲಿರುವ ಸಬ್ ರಜೀಸ್ಟರ ಆಫೀಸಿನಲಿ ರಾತ್ರಿಯಲಿ ತೆಗೆದು ಏನು ಕೆಲಸ ಮಾಡುತ್ತಿರೋ ಅಂತಹ ವಿಷಯ ಮಾಧ್ಯಮಗಳಲ್ಲಿ ಬಯಲಿಗೆ ಬರುತ್ತಲೆ ನಾನಾ ರೀತಿಯ ಉತ್ತರ ನೀಡುವ ಉಪನೋಂದಣಿ ಅಧಿಕಾರಿ ಪದ್ಮನಾಭ ಗುಡಿ ನಾನು ಸಂಬAಧಿಸಿದ ಸಿಬ್ಬಂದಿಗಳಿಗೆ ನೋಟಿಸ್ ನೀಡಿದ್ದೇನೆ ಎಂದು ಹೇಳುತ್ತಾನೆ ಹೊರತು ಅದು ಎಷ್ಟರ ಮಟ್ಟಿಗೆ ಸತ್ಯವೊ ಆತನೇ ಬಲ್ಲ
ಇಂದು ಪತ್ರಿಕೆಯೊಂದಿಗೆ ಮಾತನಾಡಿದ ಉಪನೋಂದಣಿ ಅಧಿಕಾರಿ ಪದ್ಮನಾಭ ಗುಡಿ ರಾತ್ರಿಯಲಿ ವಿದ್ಯುತ್ ರಿಪೇರಿ ಮಾಡಲು ಬಂದಿದ್ದರು ಎಂದು ಹೇಳುತ್ತಾನೆ ಆದರೆ ವಾಸ್ತವವಾಗಿ ಬಂದಿರುವ ಅನಧೀಕೃತ ವ್ಯಕ್ತಿ ವಿಡಿಯೋದಲ್ಲಿ ಹೇಳುವುದೆನಂದರೆ ನಾನು ಲೆಟರ್ ಟೈಪ್ ಮಾಡಲು ಬಂದಿದ್ದೇ ಎನ್ನುತ್ತಾನೆ ಕೆಲವೊಮ್ಮೆ ಆಪರೇಟರ್ ಮೀಟಿಂಗ್ ಇತ್ತು ಬಂದಿದ್ದೆ ಎನ್ನುತ್ತಾನೆ ಮಗದೊಮ್ಮೆ ವ್ಯಾಲಿವೇಷನ್ ಮೀಟಿಂಗ್ ಇತ್ತು ಎನ್ನುತ್ತಾನೆ ಇದರಲ್ಲಿ ಅನಧೀಕೃತ ವ್ಯಕ್ತಿಯ ಉತ್ತರಗಳು ಭಿನ್ನವಾಗಿವೆ ಆದರೆ ಇಲ್ಲಿ ಪದ್ಮನಾಭ ಗುಡಿ ಹೇಳುವುದೇ ಬೇರೆ ಹೊರಗಿನ ವ್ಯಕ್ತಿ ವಿದ್ಯುತ್ ರಿಪೇರಿ ಮಾಡಲು ಬಂದಿದ್ದ ಅದಕ್ಕಾಗಿ ಇಬ್ಬರಿಗೆ ನೋಟೀಸ್ ನೀಡಲಾಗಿದೆ ಅದಕ್ಕೆ ಅವರು ಏನು ಉತ್ತರ ಹೇಳುತ್ತಾರೊ ಹಾಗೆ ಮೇಲಾಧಿಕಾರಿಗಳಿಗೆ ಬರೆಯಲಾಗುವುದು ಸಮಜಾಯಿಸಿ ನೀಡುತ್ತಿದ್ದು ಹಾಗೆ ಬರೆದ ಲೆಟರ್ ನೀಡು ಎಂದರೆ ಅದು ಕೊಡುವುದಿಲ್ಲ ಎನ್ನುತ್ತಾನೆ ಹಾಗಾದರೆ ನಿಜವಾಗಿಯು ಸಿಬ್ಬಂದಿಗಳಿಗೆ ನೋಟಿಸ್ ನೀಡಿಬಹುದೆ ಎಂಬ ಅನುಮಾನಗಳು ಕಾಡುತ್ತಿವೆ
ಕೆಲವರು ಹೇಳುವ ಪ್ರಕಾರ ಪ್ರತಿದಿನ ರಾತ್ರಿ ಹೊರಗಿನವರನ್ನು ಕರೆದುಕೊಂಡುಬAದು ಹೀಗೆ ಕೆಲಸ ಮಾಡುತ್ತಿದ್ದರು ಎಂದು ಕೆಲವರು ಹೇಳುತ್ತಿದ್ದಾರೆ ಹಾಗಾದರೆ ನಿಜವಾಗಿಯು ನಿತ್ಯವು ಅಲ್ಲಿ ನಡೆಯುತ್ತಿರುವುದಾದರು ಏನು ಎನ್ನುವುದು ನಿಗೂಢವಾಗಿದೆ
ಸದ್ಯ ರಾತ್ರಿಯಲಿ ನಡೆದಿರುವ ಸದರಿ ಕೃತ್ಯದ ಬಗ್ಗೆ ಸರಿಯಾದ ತನಿಖೆ ನಡೆದು ಸತ್ಯ ಹೊರಬರಬಹುದೆ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ