ಸದಸ್ಯತ್ವ ನೋಂದಣಿ,ಪದಗ್ರಹಣ ಕಾರ್ಯಕ್ರಮ:
ಬಿಜೆಪಿ ಸದಸ್ಯತ್ವ ನೊಂದಣಿಯಲ್ಲಿ ಪ್ರಥಮ ಬಹುಮಾನ ೧೦ ಗ್ರಾಂ ಚಿನ್ನ ವಜ್ಜಲ್ ಘೋಷಣೆ!
ಕಲ್ಯಾಣ ಕರ್ನಾಟಕ ವಾರ್ತೆ
ರಾಜ್ಯದಲ್ಲಿ ಸರಕಾರ ದಿವಾಳಿಯಾಗಿದೆ, ಮುದಗಲ್ ತಾಲೂಕಾ ಮಾಡಲು ಹಿಂದೇಟು,೪೦ ಗ್ರಾಮಗಳಿಗೆ ನೀರಾವರಿ ದೊರೆಯದಿದ್ದರೆ ಹೋರಾಟ ಅನಿವಾರ್ಯ-ವಜ್ಜಲ್
ಲಿಂಗಸುಗೂರ:ಭಾರತೀಯ ಜನತಾ ಪಾರ್ಟೀ ನೂತನ ಸದಸ್ಯತ್ವ ಪ್ರತಿ ಬೂತನಲ್ಲಿ ೪೦೦ಕ್ಕೂ ಹೆಚ್ಚು ಸದಸ್ಯತ್ವ ಮಾಡಿಸಲು ಬೂತಿನ ಅಧ್ಯಕ್ಷರಿಗಳಿಗೆ ಹಾಗೂ ಕಾರ್ಯಕರ್ತರಿಗೆ ಶಾಸಕ ಮಾನಪ್ಪ ವಜ್ಜಲ್ ಕರೆ ನೀಡಿದರು
ಅವರು ಪಟ್ಟಣದಲ್ಲಿ ಮಾರವಾಡಿ ಕಲ್ಯಾಣ ಮಂಟಪ್ಪದಲ್ಲಿ ಆಯೋಜಿಸಿದ ಬಿಜೆಪಿ ಸದಸ್ಯತ್ವ ಅಭಿಯಾನ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ಸದಸ್ಯತ್ವ ನೊಂದಣ ಬೂತ ಮಟ್ಟದಲ್ಲಿ ಹೆಚ್ಚು ನೋಂದಾಯಿಸಿದವರಿಗೆ ಪ್ರಥಮ ಬಂದವರಿಗೆ ೧೦ಗ್ರಾಂ ಚಿನ್ನ ಹಾಗೂ ದ್ವೀತಿಯ ಬೆಳ್ಳಿ ಕಡಗ ವೈಯಕ್ತಿಕಾ ಕಾಣಿಕೆ ನೀಡಿ ಸನ್ಮಾನಿಸುವದಾಗಿ ಶಾಸಕ ವಜ್ಜಲ್ ಘೋಷಿಸಿದರು.
ಲಿಂಗಸುಗೂರ ರಾಯಚೂರ ಜಿಲ್ಲೆಗೆ ಸದಸ್ಯತ್ವ ನೊಂದಣಿಯಲ್ಲಿ ಪ್ರಥಮ ಸ್ಥಾನಕ್ಕೆ ಬರಬೇಕು ಎಂದು ಶಾಸಕ ವಜ್ಜಲ್ ಹೇಳೀದರು.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವು ದಿವಾಳಿಯಾಗಿದ್ದು ಯಾವ ಶಾಸಕರಿಗೂ ಅನುದಾನವನ್ನು ನೀಡುತ್ತಿಲ್ಲಲಿಂಗಸಗೂರು ಕ್ಷೇತ್ರದ ೪೦ ಗ್ರಾಮಗಳು ನೀರಾವರಿಯಿಂದ ವಂಚಿತವಾಗಿದ್ದು ಅವುಗಳಿಗೆ ನೀರು ದೊರೆಯದಿದ್ದರೆ ಹೋರಾಟಕ್ಕೂ ಸಿದ್ದವಿರುವುದಾಗಿ ಹೇಳಿದರು
ಮುಖ್ಯಮಂತ್ರಿ ಸಿದ್ದರಾಮಯ್ಯನವರೆ ಮುದಗಲ್ ತಾಲೂಕಾ ಮಾಡುವುದಾಗಿ ಹೇಳಿದ್ದರು ಈಗ ತಾಲೂಕಾ ಮಾಡಿ ಎಂದು ಕೇಳಿದರೆ ಹಣ ಎಲ್ಲಿದೆ ಎನ್ನುತ್ತಾರೆ ತಾಲೂಕಾ ಮಾಡಲು ಹಣವಿಲ್ಲ ಕೈಗಾರಿಕೆ ಮಾಡಿ ನಮ್ಮಲ್ಲಿ ಮಹಿಳೆಯರಿಗೆ ಉದ್ಯೋಗಕೊಡಬೇಕಾಗಿದೆ ಎಂದರೆ ಹಣವಿಲ್ಲ ಎನ್ನುತ್ತಾರೆ ತಮ್ಮ ಪಕ್ಷದ ಶಾಸಕರಿಗೆ ಅನುದಾನ ನೀಡುತ್ತೇವೆ ಎಂದು ಮಾತುಕೊಟ್ಟಿದದ್ದಾರೆ ಹೊರತು ಅನುದಾನ ನೀಡಿಲ್ಲ ಅದಕ್ಕಾಗಿ ಇದು ದಿವಾಳಿ ಸರಕಾರವಾಗಿದೆ ಎಂದರು
ಮೋದಿ ಬಿಜೆಪಿ ಪಕ್ಷವನ್ನು ಪ್ರಪಂಚದಲ್ಲಿಯೆ ದೊಡ್ಡಪಕ್ಷವಾಗಿ ಮಾಡಿದ್ದಾರೆ ಜಗತ್ತು ಭಾರತದತ್ತ ಹೊರಳಿನೋಡುವಂತೆ ಮಾಡಿದ್ದಾರೆ ಅಂತಹ ಪಕ್ಷದಲ್ಲಿ ನಾವು ಸೇವೆ ಸಲಲಿಸುತ್ತಿರುವುದು ಸಂತಸದ ವಿಷಯ ಎಂದರು
ಸಭೆಯಲ್ಲಿ ಮುಖಂಡರಾದ ಶರಣಪ್ಪ ಮೇಟು ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೀರನಗೌಡ ಲೆಕ್ಕಿಹಾಳ , ಗಿರಿಮಲ್ಲನಗೌಡ ಸೇರಿದಂತೆ ಮಾತನಾಡಿದರು,
ನೂತನ ಪಧಾದಿಕಾರಿಗಳ ಪದಗ್ರಹಣ ಕಾರ್ಯ ಜರುಗಿತು, ಮುಖಂಡರಾದ ಜಗನ್ನಾಥ ಕುಲಕರ್ಣಿ ಬಸ್ಸಣ್ಣ ಮೇಟಿ ಹುಲ್ಲೇಶಪ್ಪ ಸಾಹುಕಾರ ನಾರಾಯಣಪ್ಪ ನಾಯಕ ಬಸ್ಸಮ್ಮ ಯಾದವ ಚಂದಾವಲಿ ತಿಮ್ಮಣ್ಣ, ಮಹಾಂತಗೌಡ ಪಾಟೀಲ್ ಎನ್ ಸ್ವಾಮಿ ಬಸಣ್ಣ ನೀರಲಕೇರಿ ಸಿದ್ದರಾಮಯ್ಯ ಲಿಂಗಣ್ಣ ದೇವಿಕೆರಿ ಇತರರು ಭಾಗವಹಿಸಿದ್ದರು
ಮಂಡಲ ಅಧ್ಯಕ್ಷ ಅಯ್ಯಪ್ಪ ಮಾಳೂರ ಸದಸ್ಯತ್ವ ನೊಂದಣೀ ಪ್ರಕ್ರೀಯೆ ಕುರಿತು ಮಾತನಾಡಿದರು ಸ್ವಾಗತಿಸಿ ವಂದಿಸಿದವರು ಅನಂತದಾಸ.ನಿರೂಪಿಸಿದರು