ಸಬ್ ರಿಜಿಸ್ಟರ್ ಆಫೀಸ್ ರಾತ್ರಿಯಲಿ ಆಕ್ಟಿವ್, ಹೊರಗಿನ ವ್ಯಕ್ತಿಯ ಕಾರಬಾರ್
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು: ಪಟ್ಟಣದ ಸಬ್ ರಿಜಿಸ್ಟರ್ ಆಫೀಸ್ ರಾತ್ರಿಯಲ್ಲಿ ಆಕ್ಟಿವ್ ಆಗಿರುತ್ತದೆ ಎಂದರೆ ನೀವು ನಂಬುತ್ತೀರಾ.? ನಂಬಲೇಬೇಕು ಯಾಕೆಂದರೆ ಗುರುವಾರ ರಾತ್ರಿ ಒಂಬತ್ತು ಗಂಟೆಯಾದರು ಇನ್ನೂ ತೆರದೆ ಇತ್ತು ಅಲ್ಲದೆ ಆಫೀಸ್ ನಲಿ ಖಾಸಗಿ ವ್ಯಕ್ತಿ ಇದ್ದದ್ದು ಇನ್ನೂ ಆಶ್ಚರ್ಯ ವೆನಿಸುತ್ತದೆ
ಹೌದು ಪಟ್ಟಣದ ಸಬ್ ರಿಜಿಸ್ಟರ್ ಆಫೀಸ್ ಹಗಲಿನಲಿ ಬ್ರೋಕರ್ ಗಳಿಂದ ತುಂಬಿದ್ದರೆ ರಾತ್ರಿಯಲ್ಲಿ ಆಫೀಸ್ ಗೆ ಸಂಬಂಧ ವಿರದ ಖಾಸಗಿ ವ್ಯಕ್ತಿ ಬಾಗಿಲು ತೆಗೆದುಕುಳಿತು ಕೆಲಸ ಮಾಡುತ್ತಾನೆಂದರೆ ಏನಿರಬಹುದು ಅಷ್ಟಕ್ಕೂ ಇದು ಆಸ್ತಿಗಳ ನೋಂದಣಿ ಆಫೀಸ್ ಅದರಲಿ ರಾತ್ರಿಯಲ್ಲಿ ಬೇರೆ ವ್ಯಕ್ತಿಗಳು ಕೆಲಸದಲಿ ಬಿಜಿಯಾಗಿದ್ದಾರೆ ಅಂದರೆ ಅಲ್ಲಿ ಯಾವ ಕೆಲಸ ನಡೆದಿರಬಹುದು ನೀವೆ ಊಹಿಸಿ
ರಾತ್ರಿಯಲ್ಲಿ ಯೂ ಆಫೀಸ್ ತೆಗೆದಿದ್ದು ಖಾಸಗಿ ವ್ಯಕ್ತಿ ನಿಮ್ಮ ಆಫೀಸ್ ನಲಿ ಇದ್ದಾರಲ್ಲ ಎಂದು ಕೇಳಿದರೆ
ಮುಂದಿನ ತಿಂಗಳಿನಿಂದ ಎನಿವೇರ್ ಆರಂಭವಾಗುತ್ತದೆ ವ್ಯಾಲಿವೇಷನ್ ಅಪಲೋಡ್ ಕೆಲಸ ಇತ್ತು ಸ್ಕ್ಯಾನಿಂಗ್ ಆರುವರೆಗೆ ಬಂದ್ ಆಗುತ್ತದೆ ಈಗ ಸೈಟ್ ಓಪನ್ ಮಾಡಿದ್ದಾರೆ ಅದರ ಕೆಲಸ ನಡೆದಿತ್ತು ಎಂದು ಹೇಳುತ್ತಾರೆ
ಆದರೆ ಅಲ್ಲಿಗೆ ಭೇಟಿ ನೀಡಿದ ಮಾಧ್ಯಮದವರಿಗೆ ಖಾಸಗಿ ವ್ಯಕ್ತಿ ಹೇಳುವುದೆ ಬೇರೆ ನಾನು ಅರ್ಜಿ ಬರೆಯುವುದಿತ್ತು ಆಪರೇಟರ್ ಮೀಟಿಂಗ್ ಇತ್ತು ಹೀಗೆ ಬೇರೆ ಬೇರೆ ಉತ್ತರ ನೀಡುತ್ತಾನೆ ಅಷ್ಟಕ್ಕೂ ನೀ ಖಾಸಗಿ ವ್ಯಕ್ತಿ ಆಫೀಸ್ ನವರು ಯಾರು ಇಲ್ಲ ಅದುಹೇಗೆ ಕೆಲಸ ಮಾಡುತ್ತಿರುವಿ ಎಂದಾಗ ಇಷ್ಟೊತ್ತು ಆಪರೇಟರ್ ಇದ್ದರು ಎನ್ನುತ್ತಾನೆ
ಒಟ್ಟಾರೆಯಾಗಿ ಸಬ್ ರಿಜಿಸ್ಟರ್ ಆಫೀಸ್ ರಾತ್ರಿಯಲ್ಲಿಯೂ ಬಿಜಿಯಾಗಿರುತ್ತದೆ ಇದಕ್ಕೆ ಕಡಿವಾಣ ಹಾಕುವವರು ಯಾರು ಎನ್ನುವಂತಾಗಿಧ