ಲಿಂಗಸಗೂರು:ತಾಲೂಕಿನ ತಾಂಡಾಗಳಿಗೆ ಚರಂಡಿಗಳ ಭಾಗ್ವವೇ ದೂರ, ಕಲ್ಪಿಸಿಕೊಡುವವರು ಯಾರು..?

Laxman Bariker
ಲಿಂಗಸಗೂರು:ತಾಲೂಕಿನ ತಾಂಡಾಗಳಿಗೆ ಚರಂಡಿಗಳ ಭಾಗ್ವವೇ ದೂರ, ಕಲ್ಪಿಸಿಕೊಡುವವರು ಯಾರು..?
WhatsApp Group Join Now
Telegram Group Join Now

ಲಿಂಗಸಗೂರು:ತಾಲೂಕಿನ ತಾಂಡಾಗಳಿಗೆ ಚರಂಡಿಗಳ ಭಾಗ್ವವೇ ದೂರ, ಕಲ್ಪಿಸಿಕೊಡುವವರು ಯಾರು..?

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು:ತಾಲೂಕಿನಲ್ಲಿ ಸುಮಾರು ೩೬ಕ್ಕೂ ಅಧಿಕ ತಾಂಡಾಗಳಿದ್ದು ಸದರಿ ತಾಂಡಾಗಳಿಗೆ ಇದುವರೆಗೂ ಚರಂಡಿಗಳ ವ್ಯವಸ್ಥೆ ಇಲ್ಲವೆಂದು ಆರೋಪಗಳು ಕೇಳಿ ಬರುತ್ತಿದ್ದು ಅವರಿಗೆ ಚರಂಡಿ ಕಲ್ಪಿಸಿಕೊಡುವವರು ಯಾರು ಎನ್ನುವ ಪ್ರಶ್ನೆಗಳು ಕೇಳಿ ಬರುತ್ತಿವೆ
ತಾಲೂಕಿನಲ್ಲಿ ಸುಮಾರು ೩೬ ಕ್ಕೂ ಅಧಿಕ ತಾಂಡಾಗಳು ಇವೆ ಎಂದು ಹೇಳಲಾಗುತ್ತಿದ್ದು ಆದರೆ ಅವುಗಳಿಗೆ ಚರಂಡಿ ವ್ಯವಸ್ಥೇಗಳೆ ಇಲ್ಲವೆನ್ನುವ ಮಾತುಗಳು ಕೇಳಿ ಬರುತ್ತಿವೆ ಮಳೆ ಬಂದರೆ ಸಾಕು ನೀರು ಸರಿಯಾಗಿ ಹರಿದುಹೋಗದೆ ಹಲವಾರು ಕಡೆಯಲ್ಲಿ ನಿಂತು ಕೊಳಚೆಯಾಗುವುದು ಅಲ್ಲದೆ ಬೋರ್ ವೆಲ್ ಜನರ ಬಳಕೆಯ ನೀರು ಇತ್ಯಾದಿ ಸರಿಯಾಗಿ ಹರಿದುಹೋಗಲು ವ್ಯವಸ್ಥೆ ಇಲ್ಲದೆ ಕೊಳಚೆಹೊಂಡಗಳು ನಿರ್ಮಾಣವಾಗುತ್ತಿವೆ ಎನ್ನುವ ಬಲವಾದ ಆರೋಪಗಳು ಕೇಳಿ ಬರುತ್ತಿವೆ
ಹಲವಾರು ಕಡೆಯಲ್ಲಿ ಸಿಸಿ ರಸ್ತೆಗಳು ಮಾತ್ರ ನಿರ್ಮಾಣವಾಗಿವೆ ಆದರೆ ಚರಂಡಿಗಳನ್ನು ಬಹುತೇಕ ಕಡೆಗಳಲ್ಲಿ ನಿರ್ಮಾಣ ಮಾಡಿರುವುದಿಲ್ಲ ಮಳೆ ಬಂದರೆ ಸಾಕು ನೀರು ಸರಾಗವಾಗಿ ಹರಿದುಹೋಗಲು ಸಾಧ್ಯವಾಗದೆ ನಿಂತ ನೀರಿನಿಂದ ನಿವಾಸಿಗಳಿಗೆ ರೋಗ ರುಜಿನಗಳ ಭೀತಿ ಹುಟ್ಟಿಸಿದೆ ಚರಂಡಿ ವ್ಯವಸ್ಥೆ ಇಲ್ಲದೆ ಅವ್ಯವಸ್ಥೇಗೆ ಕಾರಣವಾಗಿದೆ ಇದಕ್ಕೆ ಅಧಿಕಾರಿಗಳಾಗಲಿ ಅಥವ ಜನಪ್ರತಿನಿಧಿಗಳಾಗಲಿ ಗಮನಹರಿಸಿದಂತೆ ಕಂಡುಬರುತ್ತಿಲ್ಲ
ಲಿAಗಸಗೂರು ತಾಲೂಕಿಗೆ ಒಳಪಡುವ ವಿವಿಧ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ತಾಂಡಾಗಳು ಚರಂಡಿ ಭಾಗ್ಯವನ್ನು ಕಂಡಿಲ್ಲವಾಗಿದೆ ಪ್ರಮುಖವಾಗಿ ಪಟ್ಟಣದ ಸಮೀಪವಿರುವ ಕರಡಕಲ್ ತಾಂಡ, ಗೊರೇಬಾಳ ತಾಂಡ,ಕೆಸರಟ್ಟಿ ತಾಂಡ ಸೇರಿದಂತೆ ಹಲವು ತಾಂಡಾಗಳ ನಿವಾಸಿಗಳಿಗೆ ಸರಿಯಾದ ಚರಂಡಿ ಹಾಗೂ ಶೌಚಾಲಯದ ವ್ಯವಸ್ಥೇ ಇಲ್ಲ ಎನ್ನುವ ಆರೋಪಗಳು ಕೇಳಿಬರುತ್ತಿವೆ ಕಲ್ಮಷ ನೀರು ರೋಗವನ್ನು ಹರಡುವ ಭೀತಿ ಹುಟ್ಟಿಸಿದೆ ಅದಕ್ಕಾಗಿ ತಾಂಡಾಗಳಿಗೂ ಚರಂಡಿ ನಿರ್ಮಿಸಿಕೊಡಬೇಕೆಂಬ ಬಲವಾದ ಒತ್ತಾಯಗಳು ಕೇಳಿ ಬರುತ್ತಿವೆ ಹಾಗಾದರೆ ತಾಂಡಾಗಳಿಗೆ ಮೂಲಸೌಕರ್ಯ ಒದಗಿಸುವವರು ಯಾರು ತಾಂಡಾ ಅಭಿವೃದ್ದಿ ನಿಗಮದ ಕಣ್ಣಿಗೆ ತಾಂಡಾಗಳು ಕಾಣಿಸಿಲ್ಲವೆ ಎನ್ನುವ ಮಾತುಗಳು ಕೇಳಿಬರುತ್ತಿವೆ ಜನಪ್ರತಿನಿಧೀಗಳು ಅಧಿಕಾರಿಗಳು ಇತ್ತ ಗಮನಹರಿಸುವುದು ಸೂಕ್ತವಾಗಿದೆ ಕೂಡಲೇ ಚರಂಡಿ ನಿರ್ಮಾಣ ಕೆಲಸ ಪ್ರಾರಂಭವಾಗಬಹುದೆ ಪತ್ರಿಕೆಯ ಆಶಯವಾಗಿದೆ

“ತಾಲೂಕಿನಲ್ಲಿ ಸುಮಾರು ೩೬ ತಾಂಡಾಗಳಿವೆ ಇದರಲ್ಲಿ ಕೆಸರಟ್ಟಿ ತಾಂಡ,ಈಚನಾಳ ತಾಂಡ, ಆಶೀಹಾಳ ತಾಂಡ,ಜಂಗಿರಾಂಪೂರ ತಾಂಡ ಹೀಗೆ ಕೆಲವೇ ತಾಂಡಾಗಳಲ್ಲಿ ಅಲ್ಪಸ್ವಲ್ಪ ಚರಂಡಿಗಳಾಗಿದು ಬಿಟ್ಟರೆ ಬಹುತೇಕ ತಾಂಡಾಗಳಲ್ಲಿ ಚರಂಡಿ ಇರುವುದಿಲ್ಲ ಗ್ರಾಮಪಂಚಾಯ್ತಿಗಳಲ್ಲಿ ಚರಂಡಿ ನಿರ್ಮಾಣಕ್ಕೆ ಅವಕಾಶವಿz”ೆ-ವೆಂಕಟೇಶ ರಾಠೋಡ ರಾಜಕೀಯ ಮುಖಂಡರು ಈಚನಾಳ ತಾಂಡ

“ತಾಲೂಕಿನ ಬಹುತೇಕ ತಾಂಡಾಗಳಲ್ಲಿ ಚರಂಡಿ ಇರುವುದಿಲ್ಲ ಅದಕ್ಕೆ ಮುಖ್ಯಕಾರಣ ತಾಂಡಾ ಜನರು ನಮಗೆ ಚರಂಡಿ ಬೇಡ ಎನುತಿದ್ದಾರೆ ಯಾಕೆಂದರೆ ನಿರ್ಮಾಣದ ನಂತರ ಅದರ ನಿರ್ವಹಣೆ ಮಾಡುವುದಿಲ್ಲ ಸಿಸಿರಸ್ತೆ ಮಾಡಿದ್ದಾರೆ ಆದರೆ ಚರಂಡಿ ನಿರ್ಮಾಣವಾಗಿಲ್ಲ- ದೇವಪ್ಪ ರಾಠೋಡ ತಾಂಡಾ ನಿವಾಸಿ

WhatsApp Group Join Now
Telegram Group Join Now
Share This Article