ಪುರಾಣ,ಪ್ರವಚನದ ಗಾರುಡಿಗ ದೇವಣ್ಣ ಸಾಹುಕಾರ ಸಂಕನಾಳರಿಗೆ ರಾಜ್ಯೋತ್ಸವ ಪ್ರಶಸ್ತಿ ಒಲಿದೀತೆ..?
ಕಲ್ಯಾಣ ಕರ್ನಾಟಕ ವಾರ್ತೆ
ಕಲ್ಯಾಣ ಕರ್ನಾಟಕ ವಚನಕಾರರ, ತತ್ವಪದಕಾರರ,ದಾಸಸಾಹಿತ್ಯದ ತವರೂರು ಇಲ್ಲಿ ಹಲವಾರು ಮಹಾನ್ ಸಾಹಿತ್ಯ ಕಲಾವಿದರು ತಮ್ಮ ಸೇವೆ ಸಲ್ಲಿಸಿ ತಮ್ಮದೆಯಾದ ಛಾಪುಮೂಡಿಸಿ ನಡೆದಿದ್ದಾರೆ ಇಂತಹ ನಾಡಿನಲ್ಲಿ ಸಾಹಿತ್ಯದ ಪರಂಪರೆ ಹಾಗೆ ಮುಂದುವರೆದಿದದು ಇಂದಿಗೂ ಹಲವಾರು ಕವಿ ಕಲಾವಿದರು ತಮ್ಮದೆಯಾದ ಸೇವೆ ಸಲ್ಲಿಸುತ್ತಾ ನಡೆದಿದ್ದಾರೆ ಅಂತವರಲ್ಲಿ ನಮ್ಮ ಮಸ್ಕಿ ತಾಲೂಕಿನ ಕಾನಿಹಾಳ ಗ್ರಾಮದ ದೇವಣ್ಣ ಸಾಹುಕಾರ ಸಂಕನಾಳ ಒಬ್ಬರಾಗಿದ್ದಾರೆ ಅವರು ಪುರಾಣಗಳನ್ನು ಹೇಳುತ್ತಾ ನಾಡಿನಲ್ಲಿ ಧಾರ್ಮಿಕತೆಯ ಭಾವನೆಯನ್ನು ಬಿತ್ತುತ್ತು ಸಮಾಜದ ಒಳಿತಿಗಾಗಿ ಸದಾಶ್ರಮಿಸುತ್ತಿದ್ದಾರೆ ಅಂತಹ ಕಲಾವಿದನ ಕಿರುಪರಿಚಯ
ದೇವಣ್ಣ ಸಾಹುಕಾರ ಸುಮಾರು ೩೬ ವರ್ಷಗಳಿಂದ ದೇವಿಪುರಾಣ,ಸಿದ್ದಾರೂಢರ ಪುರಾಣ, ಶರಣಬಸವೇಶ್ವರರ ಪುರಾಣ,ಕರಿಯಪ್ಪ ತಾತನ ಪುರಾಣ ಸೇರಿದಂತೆ ನಾಡಿನ ಮಹಾನ್ ಪುಣ್ಯಪುರುಷರ ಮಹಿಮೆಗಳ ಪುರಾಣ ಹೇಳುತ್ತಾ ಜನರಲ್ಲಿ ಭಕ್ತಿಭಾವವನ್ನು ತುಂಬುತ್ತಾ ನಡೆದಿದ್ದಾರೆ
ಹಿನ್ನೆಲೆ:ಇಂದಿನ ಮಸ್ಕಿ ತಾಲೂಕಿನ ಕಾನಿಹಾಳ ಗ್ರಾಮದ ವೆಂಕಣ್ಣ ಸಾಹುಕಾರ ಹಾಗೂ ನೀಲಮ್ಮ ದಂಪತಿಗಳ ಪುತ್ರನಾಗಿ ಜನಿಸಿದ ಸಿದ್ದಣ್ಣ ಶಿಕ್ಷಣ ಕೇವಲ ನಾಲ್ಕನೆ ತರಗತಿಯ ವರೆಗೆ ಮಾತ್ರ ಆದರೆ ಮನೆಯಲ್ಲಿ ತಂದೆ ವೆಂಕಣ್ಣನವರು ಆಧ್ಯಾತ್ಮದ ಗೋಷ್ಠಿಗಳನ್ನು ನಡೆಸುತ್ತಿದ್ದರು ಇವರ ಮನೆಗೆ ಅನೇಕ ಪಂಡಿತರು ಬಂದು ಆಧ್ಯಾತ್ಮದ ಬಗೆಗೆ ಚರ್ಚೆ ನಡೆಸುತ್ತಿದ್ದರು ಅದನ್ನೆಲ್ಲ ಕೇಳುತ್ತಾ ಬೆಳೆದ ದೇವಣ್ಣನವರು ತಾವುಕೂಡ ಆಧ್ಯಾತ್ಮದ ಬಗೆಗೆ ಒಲವನ್ನು ಬೆಳೆಸಿಕೊಂಡರು ಓದಿದ್ದು ಕೇವಲ ನಾಲ್ಕನೆ ತರಗತಿಯಾದರು ಲೋಕಜ್ಞಾನದ ಮೂಲಕ ಅಪಾರ ಪಾಂಡಿತ್ಯವನ್ನು ಸಾಧಿಸಿದರು
ಅಲ್ಲದೆ ಇವರ ಮನೆಗೆ ಕೊಪ್ಪಳದ ಅಜ್ಜನವರು,ಮನ್ನಾಪುರ ಮಲ್ಲಿನಾಥ ಸ್ವಾಮಿಗಳು ಆಗಮಿಸಿ ಆಗಾಗ್ಗೆ ಸತ್ಸಂಗಗಳನ್ನು ನಡೆಸುತ್ತಿದ್ದರು ಇಂತಹ ಚಟುವಟಿಕೆಗಳು ದೇವಣ್ಣನವರ ಮೇಲೆ ಅಪಾರ ಪ್ರಭಾವವನ್ನು ಬೀರಿದವು ಅಲ್ಲದೆ ಇವರ ತಂದೆಯವರು ನಿಜಗುಣರ ಅನುಭವಾಮೃತವನ್ನು ಓದಿಸುತ್ತಿದ್ದರು ಇವೆಲ್ಲವುಗಳನ್ನು ಆಸ್ವಾದಿಸುತ್ತಲೆ ಬೆಳೆದ ದೇವಣ್ಣನವರ ಮನದಲ್ಲಿ ಮೆಲ್ಲನೆ ಬೆಳೆದು ನಿಂತದ್ದು ಒಬ್ಬ ಪುರಾಣ ಪ್ರವಚನಕಾರನಾಗಿ ಅಂತೆಯೆ ಅವರು ತಮ್ಮ ಕಿರುವಯಸಿನಲಿ ಪುರಾಣಗಳನ್ನು ಹೇಳಲು ಪ್ರಾರಂಭಿಸಿದರು
ಆಗಿನ ಸಂದರ್ಭದಲ್ಲಿ ಈಗಿನಂತೆ ಟಿವಿ ಮೊಬೈಲ್ ಇಲ್ಲದ ಕಾಲವಾಗಿತ್ತು ಮನರಂಜನೆ ಎಂದರೆ ಅದು ನಾಟಿಕ,ಭಜನೆ ಹಾಡು ಪುರಾಣ,ಪ್ರವಚನಗಳೆ ಆಗಿದ್ದವು ಅಂತಹ ಸಂದರ್ಭದಲ್ಲಿ ಉದಯವಾದದ್ದೆ ದೇವಣ್ಣನವರ ಪುರಾಣ ಪ್ರವಚನಗಳು
ಪುರಾಣಗಳು:ತಮ್ಮ ಕಿರುವಯಸಿನಲ್ಲಿ ಪ್ರಥಮವಾಗಿ ಸಿಂಧನೂರು ತಾಲೂಕಿನ ಚನ್ನಳ್ಳಿಯಲ್ಲಿ ದೇವಿÀ ಪುರಾಣವನ್ನು ಆರಂಭ ಮಾಡಿದರು ಅಲ್ಲಿ ೧೦ ವರ್ಷ ಪುರಾಣ ನೀಡಿದರು
ನಂತರದಲ್ಲಿ ಸಿದ್ದರಾಮೇಶ್ವರ ಪುರಾಣ ೧೦ ವರ್ಷ ಹಾಗೂ ಬಪ್ಪೂರಿನಲ್ಲಿ ೧೫ ವರ್ಷ ಹೀಗೆ ಸುಮಾರು ೩೫-೩೬ ವರ್ಷಗಳಿಂದ ನಾಡಿನಲ್ಲಿ ಪುರಾಣಗಳನ್ನು ಹೇಳುತ್ತಾ ವಿವಿಧ ಧಾರ್ಮಿಕಗೋಷ್ಠಿಗಳಲ್ಲಿ ಭಾಗವಹಿಸುತ್ತಾ ತಮ್ಮ ಧಾರ್ಮಿಕ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದಾರೆ
ಇವರು ದೇವಿಪುರಾಣ,ಸಿದ್ದಾರೂಢರ ಪುರಾಣ, ಶರಣಬಸವೇಶ್ವರರ ಪುರಾಣ, ಹೇಮರಡ್ಡಿ ಮಲ್ಲಮ್ಮನ ಪುರಾಣ ಕರಿಯಪ್ಪ ತಾತನ ಪುರಾಣ ಸೇರಿದಂತೆ ವಿವಿಧ ಶರಣ ಶರಣೆಯರ ಪವಾಡ ಪುರುಷರ ಪುರಾಣಗಳನ್ನು ಹೇಳುತ್ತಾ ಬಂದಿದ್ದಾರೆ
ಪ್ರವಚನ ನೀಡಿದ ಸ್ಥಳಗಳು: ಸಿದ್ದಪರ್ವತ ಶ್ರೀಸುಕ್ಷೇತ್ರ ಅಂಬಾಮಠ, ತುರ್ವಿಹಾಳ, ಸಿಂಧನೂರು,ಮಸ್ಕಿ, ತಾವರಗೇರಾ, ಬಪ್ಪೂರ, ಹತ್ತಿಗುಡ್ಡ, ಮಹಂಪುರ, ಯದ್ದಲದಿನ್ನಿ,ಚಂದನಹಳ್ಳಿ,ಸಿದ್ರಾAಪುರ,ಮುಕ್ಕುAದಿ,ಸೋಮಲಾಪುರ,ಹರಳಹಳ್ಳಿ,ಮಾಟಲದಿನ್ನಿ,ಮಲ್ಲದಗುಡ್ಡ, ತಡಕಲ್, ಆನಂದಗಲ್,ಹಾಲಕುಸುಗಲ್ ಹೀಗೆ ನಾನಾಕಡೆಯಲ್ಲಿ ಪ್ರವಚನ ನೀಡಿದ್ದಾರೆ
ಸದಾ ಶರಣರ ದಾರ್ಶನಿಕರ ವಿಚಾರಗಳನ್ನು ನಾಡಿಗೆ ಬಿತ್ತುತ್ತಿರುವ ಇವರ ಕುಟುಂಬವು ತಂದೆಯ ಕಾಲಕ್ಕೆ ಕೊಡುಗೈ ದಾನಿಗಳಾಗಿದ್ದರು ಆದರೆ ಇತ್ತಿಚೆಗೆ ಬಡತನದ ಜೀವನವನ್ನು ಸಾಗಿಸುತ್ತಾ ಮುನ್ನಡೆದಿದ್ದಾರೆ
ಪ್ರಶಸ್ತಿಗಳು:ಇವರ ಪ್ರವಚನ ಕಲೆಯನ್ನು ನೋಡಿ ಹಲವಾರು ಸಂಘ-ಸಂಸ್ಥೆಗಳು ಗ್ರಾಮಸ್ಥರು ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ನೀಡಿ ಗೌರವಿಸಿದ್ದಾರೆ ಅಂತಹುಗಳಲ್ಲಿಅಭಿನಂದನಾ ಪತ್ರಗಳು,ಪ್ರಮಾಣ ಪತ್ರಗಳು, ಪ್ರಶ್ತಿ ಪತ್ರಗಳು ಸನ್ಮಾನ ಪತ್ರಗಳು ಇವರಿಗೆ ನೀಡಿ ಗೌರವಿಸಲಾಗಿದೆ
ರಾಜ್ಯೊತ್ಸವ ಪ್ರಶಸ್ತಿ ದೊರಕೀತೆ..?: ಕಲ್ಯಾಣ ಕರ್ನಾಟಕದಲ್ಲಿ ಅಪ್ರತಿಮ ಪುರಾಣ ಪ್ರವಚನಕಾರನಾಗಿ ಸೇವೆ ಸಲ್ಲಿಸುತ್ತಾ ಬರುತ್ತಿರುವ ಇವರಿಗೆ ಈಗಾಗಲೆ ೬೨ ವರ್ಷಗಳು ದಾಟಿದ್ದು ಹಿರಿಯ ಕಲಾವಿದರಾಗಿ ಸೇವೆ ಸಲ್ಲಿಸುತ್ತಿದ್ದು ಈ ಮಹನಿಯರನ್ನು ರಾಜ್ಯ ಸರಕಾರ ಗುರುತಿಸಿ ಮುಂಬರುವ ರಾಕ್ಯೋತ್ಸವ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಬಹುದೆ ಎಂಬುದು ಅವರ ಅಭಿಮಾನಿಗಳ ಆಶಯವಾಗಿದೆ