ಮುದಗಲ್: ಪಟ್ಟಣದಲ್ಲಿ ಜೋಡಿ ಕೊಲೆ ಎಸ್ಪಿ ಭೇಟಿ ಪರಿಶೀಲನೆ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು: ತಾಲ್ಲೂಕಿನ ಮುದಗಲ್ ಪಟ್ಟಣದಲ್ಲಿ ಜೋಡಿಕೊಲೆಯಾಗಿದ್ದು ಸ್ಥಳಕ್ಕೆ ಎಸ್ಪಿಯವರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ
ಇಂದು ಬೆಳಗಿನ ಜಾವದಲಿ ಘಟನೆ ಜರುಗಿದ್ದು ಪಟ್ಟಣದ ಆರೋಗ್ಯ ಇಲಾಖೆಯ ವಸತಿ ಗೃಹದಲ್ಲಿ ಘಟನೆ ಜರುಗಿದ್ದು ಗುತ್ತಿಗೆ ಆಧಾರದಲಿ ಕೆಲಸ ಮಾಡುತಿದ್ದ ದುರಗಪ್ಪ ಎಂಬುವವನು ತನ್ನ ಹೆಂಡತಿ ಹಾಗೂ ಅಕ್ಕಿಯನ್ನು ಕೊಲೆಮಾಡಿರುವುದಾಗಿ ಹೇಳಲಾಗುತ್ತಿದೆ
ಕೊಲೆಗೆ ಕೌಟುಂಬಿಕ ಕಲಹವೇ ಕಾರಣ ಎಂದು ಹೇಳಲಾಗುತಿದ್ದು ದುರಗಪ್ಪ ಸಂತೆಕಲ್ಲೂರು ಎನ್ನುವಾತ ಜ್ಯೋತಿಯನ್ನು ಪ್ರೇಮವಿವಾಹ ಮಾಡಿಕೊಂಡಿದ್ದ ಎಂದು ಹೇಳಲಾಗುತಿದ್ದು ಆಗಾಗ್ಗೆ ಕಲಹಗಳುನಡೆಯುತಿದ್ದವು ಎನ್ನಲಾಗುತಿದೆ
ದುರಗಪ್ಪ ಕೊಡಲಿಯಿಂದ ಹೆಂಡತಿ ಜ್ಯೋತಿ ವಯಸ್ಸು 23ಹಾಗೂ ಅಜ್ಜಿ ದ್ಯಾಮಮ್ಮ 66 ಇಬ್ಬರನ್ನು ಕೊಲೆ ಮಾಡಲಾಗಿದ್ದು ವಿಷಯ ತಿಳಿದ ಪೊಲೀಸ್ ಎಸ್ಪಿ ಡಿವೈಎಸ್ಪಿ ಸಿಪಿಐ ಸೇರಿದಂತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ