ಮಾಜಿ ಶಾಸಕರು,ರಾಂಪೂರ ಏತನೀರಾವರಿ ಜಾಕವೆಲ್ ಗೆ ಭೇಟಿನೀಡಿ ಪೋಜ್ ಕೊಡುವುದನು ಬಿಟ್ಟು, ಕೆಲಸ ಮಾಡಿಸುವುದಕೆ ಮುಂದಾಗಲಿ-ಬಂದೇನವಾಜ್
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ಮಾಜಿ ಶಾಸಕ ಡಿ ಎಸ್ ಹೂಲಿಗೇರಿಯವರು ಬಸವಸಾಗರ ಜಲಾಶಯಕ್ಕೆ ನೀರು ಬಂದಾಗ ರಾಂಪೂರ ನೀರಾವರಿ ಜಾಕ್ ವೆಲ್ ಗಳಿಗೆ ಭೇಟಿ ನೀಡಿ ಪ್ರಶ್ನೆ ಮಾಡುತಾ ಫೋಜುಕೊಡುವುದನ್ನು ಬಿಟ್ಟು ರೈತರ ಹಿತಾಸಕ್ತಿ ಇದ್ದರೆ ಯಂತ್ರಗಳ ರಿಪೇರಿ ಹಾಗೂ ನೀರು ಸೋರಿಕೆಯ ತಡೆಗೆ ಯತ್ನ ಮಾಡಲಿ ಎಂದು ಕೆಡಿಪಿ ಮಾಜಿ ಸದಸ್ಯರಾದ ಬಂದೇನವಾಜ್ ಆನರಹೊಸುರು ಆರೋಪಿಸಿದ್ದಾರೆ
ಅವರು ಪತ್ರಿಕೆಯೊಂದಿಗೆ ಮಾತನಾಡುತ್ತಾ ರಾಂಪೂರ ಏತನೀರಾವರಿಯ ನವಲಿ ಜಾಕವೆಲ್ ಹಾಗೂ ಆನೆಹೊಸೂರು ಜಾಕ್ ವೆಲ್ ಗಳು ಕಳೆದ ಎರಡು ವರ್ಷಗಳಿಂದ ರಿಪೇರಿಯಲ್ಲಿವೆ ಎಂದು ಇಲಾಖೆಯವರು ಹೇಳುತ್ತಿದ್ದಾರೆ ಅಲ್ಲದೆ ಎರಡು ಕಡೆಯು ನೀರಿನ ಸೋರಿಕೆ ಕಂಡು ಬರುತ್ತಿದೆ ಹೂಲಿಗೇರಿಯವರು ಶಾಸಕರಾಗಿದ್ದ ಸಂದರ್ಭದಿAದಲೂ ಈ ದೋಷಗಳು ಕಂಡು ಬರುತ್ತಿವೆ ಹಿಂದೆ ನಾನು ಕೆಡಿಪಿ ಸಭೆಯ ಸದಸ್ಯನಿದ್ದಾಗ ಶಾಸಕರ ಗಮನಕ್ಕೆ ತರುತ್ತಲೆ ಇದ್ದೇನೆ ಆಗಿನಿಂದಲೂ ಕಾಳಜಿವಹಿಸದ ಮಾಜಿ ಶಾಸಕ ಹೂಲಿಗೇರಿಯವರು ಇದೀಗ ಎರಡು ಜಾಕವೆಲ್ ಗಳಿಗೆ ಭೇಟಿ ನೀಡಿ ಕೇವಲ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ ರಾಜ್ಯದಲ್ಲಿ ಇವರದೆ ಸರಕಾರವಿದೆ ಬೆಂಗಳೂರು ಮಟ್ಟದಲ್ಲಿ ಕುಳಿತು ಅನುದಾನವನ್ನು ತಂದು ಉಂಟಾಗಿರುವ ದೊಷವನ್ನು ಸರಿಪಡಿಸಿದರೆ ರೈತರ ಹೊಲಗಳಿಗೆ ನೀರು ದೊರೆಯುತ್ತವೆ ಅದು ಬಿಟ್ಟು ಕೇವಲ ಆರೋಪ ಮಾಡಿದರೆ ಸಮಸ್ಯೆ ಪರಿಹಾರವಾಗುವುದಿಲ್ಲ ಕೇವಲ ಫೋಜ್ ಕೊಟ್ಟಂತಾಗುತ್ತಿದ್ದು ಇಂತಹ ಪೋಜು ಕೊಡುವ ಕೆಲಸ ಬಿಟ್ಟು ಅನುದಾನ ತರುವ ಕೆಲಸ ಮಾಡಲಿ ಎಂದು ಆರೋಪಿಸಿದರು
ಇನ್ನು ಮುಂದಾದರು ಮಾಜಿ ಶಾಸಕರು ರೈತರ ಬಗೆಗೆ ನಿಜವಾದ ಕಾಳಜಿ ಇದ್ದರೆ ಎರಡು ಜಾಕ್ ವೆಲ್ ನಲ್ಲಿರುವ ಯಂತ್ರಗಳ ರಿಪೇರಿಗೆ ಹಣ ತರಲಿ ಹಾಗೆ ನೀರು ಸೋರಿಕೆಯಾಗುತ್ತಿದ್ದು ಅದನ್ನು ತಡೆಯುವ ಕೆಲಸಗಳು ನಡೆಯುವಂತೆ ಮಾಡಲಿ ಎಂದರು
ಅಲ್ಲದೆ ಸದರಿ ದೋಷವನ್ನು ಹಾಲಿ ಶಾಸಕರ ಗಮನಕ್ಕೂ ತರಲಾಗಿದ್ದು ಅವರುಕೂಡ ಉತ್ತಮ ಸ್ಪಂದನೆ ನೀಡಿದ್ದಾರೆ ಕೇವಲ ಫೋಜುಕೊಡುವ ಕೆಲಸ ಮಾಡದೆ ರೈತಪರವಾಗಿ ಕಾಳಜಿ ಕೆಲಸ ಮಾಡಲಿ ಎಂದರು