ಇಲಾಖೆ ಅನುಮತಿ ಇಲ್ಲದೆ ಕೇಬಲ್ ಹಾಕಲು ರಸ್ತೆ ಅಗೆತ,ಪ್ರಯಾಣಿಕರಿಗೆ ತೊಂದರೆ, ಕ್ರಮಯಾವಾಗ?

Laxman Bariker
ಇಲಾಖೆ ಅನುಮತಿ ಇಲ್ಲದೆ ಕೇಬಲ್ ಹಾಕಲು ರಸ್ತೆ ಅಗೆತ,ಪ್ರಯಾಣಿಕರಿಗೆ ತೊಂದರೆ, ಕ್ರಮಯಾವಾಗ?
WhatsApp Group Join Now
Telegram Group Join Now

ಇಲಾಖೆ ಅನುಮತಿ ಇಲ್ಲದೆ ಕೇಬಲ್ ಹಾಕಲು ರಸ್ತೆ ಅಗೆತ,ಪ್ರಯಾಣಿಕರಿಗೆ ತೊಂದರೆ, ಕ್ರಮಯಾವಾಗ?

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು:ಪಟ್ಟಣದಿಂದ ಈಚನಾಳ ಮಾರ್ಗವಾಗಿ ಸಾಗುವ ರೋಡಲಬಂಡ(ಯುಕೆಪಿ) ರಸ್ತೆ ಬದಿಯಲ್ಲಿ ಪಿ೨ಪಿ ಕೇಬಲ್ ಕಂಪನಿಯ ಗುತ್ತಿಗೆದಾರರು ಪಿಡಬ್ಲೂಡಿ ಇಲಾಖೆಯ ಒಪ್ಪಿಗೆ ಇಲ್ಲದೆ ರಸ್ತೆಯಲ್ಲಿ ಮನಬಂದAತೆ ತೆಗ್ಗುತೆಗೆದಿದ್ದು ಪ್ರಯಾಣಿಕರು ತೊಂದರೆಪಡುವAತಾಗಿದ್ದು ಗುತ್ತಿಗೆದಾರರ ಮೇಲೆ ಕ್ರಮ ಯಾವಾಗ ಎನ್ನುವ ಮಾತುಗಳು ಕೇಳಿ ಬರುತ್ತಿವೆ
ಪಟ್ಟಣದಿಂದ ರೋಡಲಬಂಡಾ(ಯುಕೆಪಿ) ಮಾರ್ಗವಾಗಿ ಸಾಗುವ ರಸ್ತೆಯ ಬದಿಯಲ್ಲಿ ಮೊಬೈಲ್ ಕಂಪನಿಗಳು ಓಎಫ್ ಸಿ ವೈರಿಂಗ್ ಕೇಬಲ್ ಪಿ೨ಪಿ ನೆಟ್ವರ್ಕ ಪ್ರೆöÊವೇಟ್ ಲಿಮಿಟೆಡ್ ಕಂಪನಿಯ ಗುತ್ತಿಗೆದಾರರು ರಸ್ತೆಯ ಪಕ್ಕದಲ್ಲಿಯೆ ಗುಂಡಿಯನ್ನು ಅಗೆಯುತ್ತಾ ಸಾಗಿದ್ದು ಕೆಲವುಕಡೆಯಲ್ಲಿ ರಸ್ತೆಯ ಪಕ್ಕದಲ್ಲಿಯೆ ಅಗೆತ ಮಾಡಿದ್ದಾರೆ ಕೆಲಕಡೆಯಲ್ಲಿ ಡಾಂಬರರಸ್ತೆಯನ್ನೆ ಅಗೆತ ಮಾಡಿದ್ದಾರೆ ವಾಹನ ಸವಾರರಿಗೆ ಹಾಗೂ ಪಾದಾಚಾರಿಗಳಿಗೆ ಅಪಾಯಕಾರಿ ರಸ್ತೆಯಾಗಿ ಮಾರ್ಪಟ್ಟಿದೆ
ಅದರಲ್ಲಿ ಮಳೆಗಾಲವಾಗಿರುವುದರಿಂದ ರಸ್ತೆಯ ಪಕ್ಕದಲ್ಲಿ ಅಗೆತ ಮಾಡಿರುವುದರಿಂದ ವಾಹನಗಳು ಮತ್ತೊಂದು ವಾಹನಗಳಿಗೆ ದಾರಿ ಮಾಡಿಕೊಡುವಾಗ ವಾಹನಗಳು ಅಗೆತದ ತಗ್ಗಿನಲಿ ಇಳಿಯುವ ಸಂದರ್ಭಗಳಿಗೇನು ಕಡಿಮೆ ಇಲ್ಲ ರಾತ್ರಿಯಲ್ಲಿ ವಾಹನ ಸವಾರರು ಹಲವಾರು ಅಪಾಯದ ಸಂದರ್ಭಳು ಉಂಟಾಗಿದ್ದು ಅಪಾಯಕ್ಕೆ ಸಿಲುಕಿರುವ ಬಗೆಗೆ ಕೇಳಿಬರುತ್ತಿದೆ
ಇಲಾಖೆಯ ಗಮನಕ್ಕೆ ಇಲ್ಲವೇ:ಲಿಂಗಸಗೂರಿನಿAದ ರೊಡಲಭಮಡೆಯವರೆಗೆ ಅಗೆತ ಮಾಡುವ ಕೆಲಸ ನಡೆದಿದ್ದು ಇಲಾಖೆಯವರು ತಡೆಯುವ ಕೆಲಸ ಮಾಡಿಲ್ಲವೆನಿಸುತ್ತದೆ ಸಾರ್ವಜನಿಕರು ಮಾಧ್ಯಮದವರು ಇಲಾಖೆಯ ಗಮನಕ್ಕೆ ತರುತ್ತಲೆ ಕೆಲದಿನಗಳ ಹಿಂದೆ ಕೆಲಸವನ್ನು ಬಂದ್ ಮಾಡಲಾಗಿತ್ತು ಇದೀಗ ಪುನಃ ಪ್ರಾರಂಭ ಮಾಡಿದ್ದಾರೆ
ಇಲಾಗೆಯ ಒಪ್ಪಿಗೆ ಪಡೆದಿಲ್ಲ: ರಸ್ತೆ ಬದಿಯಲ್ಲಿ ಅಗೆತ ಮಾಡಬೇಕಾದರೆ ಅದಕ್ಕೆ ಸಂಬAಧಿಸಿದ ಇಲಾಖೆಯ ಒಪ್ಪಿಗೆಯನ್ನು ಕಡ್ಡಾಯವಾಗಿ ಪಡೆಯಬೇಕು ಅಲ್ಲದೆ ಇಂದಿಷ್ಟು ಹಣವನ್ನು ತುಂಬಬೇಕು ಎಂಬ ನಿಯಮವಿದೆ ಆದರೆ ಸದರಿಯವರು ಇಲಾಖೆಯ ಒಪ್ಪಿಗೆ ಪಡೆಯಲಾಗುತ್ತದೆ ಎನ್ನುತ್ತಲೆ ಒಪ್ಪಿಗೆ ಪಡೆಯದೆ ಕೆಲಸ ಮಾಡುತ್ತಿದ್ದಾರೆಂದು ಲೋಕೋಪಯೋಗಿ ಇಲಾಖೆಯವರು ಹೇಳುತ್ತಾರೆ
ನಿಯಮಬಾಹಿರವಾಗಿ ತಗ್ಗು ತೆಗೆಯವುದು ರಸ್ತೆ ಅಗೆತ ಮಾಡುವುದು ಮಾಡುತ್ತಿದ್ದು ಅನಾಹುತಗಳು ಸಂಭವಿಸಿದರೆ ಗತಿಏನು ಹಾಗೆ ಅಗೆತ ಮಾಡಿದವರ ಮೇಲೆ ಕ್ರಮ ಯಾವಾಗ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ

ರಸ್ತೆ ಅಗೆತದ ಬಗೆಗೆ ತಿಳಿದುಬಂದಾಗ ನಾನು ಕೆಲಸ ನಿಲ್ಲಿಸಲು ಸೂಚಿಸಿದ್ದೇನು ಆದರೆ ಪುನಃ ಪ್ರಾರಂಭ ಮಾಡಿರುವುದು ನನ್ನ ಗಮನಕ್ಕೆ ಬಂದಿರುವುದಿಲ್ಲ ಒಪ್ಪಿಗೆ ಇಲ್ಲದೆ ಕೆಲಸ ಮಾಡುತ್ತಿರುವ ಅವರ ಮೇಲೆ ದೂರ ನೀಡಲಾಗುತ್ತದೆ”-ಪ್ರಕಾಶ ಜ್ಯೋತಿ ಎಇಇ ಲೋಕೋಪಯೋಗಿ ಇಲಾಖೆ ಲಿಂಗಸಗೂರು

WhatsApp Group Join Now
Telegram Group Join Now
Share This Article