ಬೇಡರಕಾರ್ಲಕುಂಟಿ: ಬದುಕಿನಾನಂದಕಿಂತ ಆಧ್ಯಾತ್ಮದ ಆನಂದವೇ ಸಂತಸ ನೀಡುವುದು-ಶಿವಕುಮಾರಸ್ವಾಮೀಜಿ

Laxman Bariker
ಬೇಡರಕಾರ್ಲಕುಂಟಿ: ಬದುಕಿನಾನಂದಕಿಂತ ಆಧ್ಯಾತ್ಮದ ಆನಂದವೇ ಸಂತಸ ನೀಡುವುದು-ಶಿವಕುಮಾರಸ್ವಾಮೀಜಿ
WhatsApp Group Join Now
Telegram Group Join Now

ಬೇಡರಕಾರ್ಲಕುಂಟಿ: ಬದುಕಿನಾನಂದಕಿಂತ ಆಧ್ಯಾತ್ಮದ ಆನಂದವೇ ಸಂತಸ ನೀಡುವುದು-ಶಿವಕುಮಾರಸ್ವಾಮೀಜಿ

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು:ಮಾನವನು ತನ್ನ ಸಂಸಾರಿಕ ಜೀವನದಲ್ಲಿ ವಿಷಯಾನಂದಲ್ಲಿ ಮಗ್ನನಾಗಿ ನಿಜಾನಂದವನ್ನು ಕಳೆದುಕೊಳ್ಳುತ್ತಿದ್ದಾನೆ ಆಧ್ಯಾತ್ಮದ ಆನಂದವೇ ನಿಜಾನಂದವಾಗಿದೆ ಎಂದು ಕಾಲಜ್ಞಾನಮಠದ ಪೀಠಾಧಿಪತಿ ಶ್ರೀಶಿವಕುಮಾರಮಹಾಸ್ವಾಮಿಗಳು ಹೇಳಿದರು


ಅವರು ಮಸ್ಕಿ ತಾಲೂಕಿನ ಬೇಡರಕಾರ್ಲಕುಂಟಿಯ ಕಾಲಜ್ಞಾನಮಠದಲ್ಲಿ ನಡೆದರುದ್ರಮುನಿ ಮಹಾಸ್ವಾಮಿ ಹಾಗೂ ಬಸವರಾಜಯ್ಯ ಮಹಾಸ್ವಾಮಿಗಳ ಪುಣ್ಯಾರಾಧನೆ ಮತ್ತು ೧೫೩ನೇ ನಿರಂತರ ಮಾಸಿಕ ಧಾರ್ಮಿಕ ದಾಸೋಹ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡುತ್ತಾ ಮಾನವ ತನ್ನ ಸಂಸಾರಿಕ ಜೀವನದಲ್ಲಿ ದೊರೆಯುವ ಕ್ಷಣಿಕ ಆನಂದವನ್ನೆ ಮಹಾನಂದ ಎಂದು ತಿಳಿಯುತ್ತಾ ಅದರ ಹಿಂದಿನ ಸಂಕಷ್ಟಗಳಿಗೆ ಒಳಗಾಗುತ್ತಿದ್ದಾನೆ ಆದರೆ ನಿಜಾನಂದ ಎನ್ನುವುದು ಆಧ್ಯಾತ್ಮಕದಲ್ಲಿ ದೊರೆಯುತಿದ್ದು ಅದನ್ನು ಪಡೆದುಕೊಂಡಾಗ ಮಾತ್ರ ಮಾನವನಿಗೆ ನಿಜಾನಂದವಾಗಲಿದೆ ಎಂದು ಶಿವಕುಮಾರಮಹಾಸ್ವಾಮಿಗಳು ಹೇಳಿದರು
ನಂತರ ಸಚ್ಚಿದಾನಂದ ಆಶ್ರಮದ ಸಂಗಮೇಶ ಶರಣರು ಮಾತನಾಡುತ್ತಾ ಜೀವನದಲ್ಲಿ ಹಲವಾರು ಆನಂದಗಳು ಸಹಜ ಅವುಗಳು ಮೊದಲಿಗೆ ಸಂತಸವನ್ನು ನೀಡಿದಂತೆ ಕಂಡರು ಅದರ ಹಿಂದೆ ನೋವು ಇರುವುದು ಗೋಚರವಾಗುತ್ತದೆ ಅಂತಹ ಆನಂದಕಿAತ ದೇವತ್ವದಲ್ಲಿ ದೊರೆಯುವ ಆನಂದ ನಮ್ಮದಾಗಿಸಿಕೊಳ್ಳಬೇಕು ಎಂದರು
ಕಾರ್ಯಕ್ರಮದ ಸಾನಿಧ್ಯವನ್ನುವಹಿಸಿದ ಮಹಾಂತಶಿವಾಚಾರ್ಯಮಹಾಸ್ವಾಮಿಗಳು ಮಾತನಾಡುತ್ತಾ ಶ್ರೀಮಠವು ನಿರಂತರವಾಗಿ ಜ್ಞಾನದಾಸೋಹ ಹಾಗೂ ಅನ್ನ ದಾಸೋಹ ನಡೆಸಿಕೊಂಡು ಬರುತ್ತಿದ್ದು ನಿರಂತರವಾಗಿ ನಡೆಯಲಿ ಎಂದರು
ಪತ್ರಕರ್ತ ಲಕ್ಷö್ಮಣ ಬಾರಿಕೇರ್ ಮಾತನಾಡುತ್ತಾ ಇಂದಿನ ಯುವಕರು ದುಶ್ಚಟಗಳಿಗೆ ಬಲಿಯಾಗಿ ಜೀವನದವನ್ನು ಕಳೆದುಕೊಳ್ಳುವ ದುಸಾಹಸ ಮಾಡುತ್ತಿದ್ದಾರೆ ಅಂತಹ ಮನಸುಗಳನ್ನು ತಿದ್ದುವ ಕೆಲಸವನ್ನು ಶ್ರೀಮಂಠವು ಮಾಡುತ್ತಿದ್ದು ಹಾದಿ ತಪ್ಪುತ್ತಿರುವವರನ್ನು ಸರಿದಾರಿಗೆ ಪ್ರಯತ್ನ ಮಾಡುತ್ತಿದೆ ಎಂದರು
ಡಾ ಎಚ್ ಕೆ ಸ್ವಾಮಿ ಪರಿಸರ ಮತ್ತು ಗಾಂಧಿ ತತ್ವ ಕುರಿತು ಪ್ರಾತ್ಯಕ್ಷಿಕೆಯೊಂದಿಗೆ ವಿವರಿಸುತ್ತಾ ಎಲ್ಲರ ಮನೆಯಲ್ಲಿ ಪುನಃ ಚರಕ ಬರಬೇಕು ಎಂದರು
ಕಾರ್ಯಕ್ರಮದಲ್ಲಿ ಮಳೆರಾಜೇಂದ್ರ ಮಹಾಸ್ವಾಮಿಗಳು ಗದ್ದನಕೇರಿ, ಅಮರಾನಂದ ಮಹಸ್ವಾಮಿಗಳು ಲಿಂಗಸಗೂರು ಶಶಿನಾ ಚಿಕ್ಕಹೆಸರೂರು ಸೇರಿದಂತೆ ಹಲವರು ಮಾತನಾಡಿದರು
ಈ ಸಂದರ್ಭದಲ್ಲಿ ಕರಿಯಪ್ಪ ದೇವಿಕೇರಿ, ಮಹಾಂತಗೌಡ ನಾಡಗೌಡ್ರ,ಗಂಗಾಧರ ಮೇಟಿ,ಅಂಗಣ್ಣ ನಾಡಗೌಡ, ರಾಮಣ್ಣ ವಂದಾಲ, ಚಂದ್ರಶೇಖರ, ತಿಪ್ಪುಸೀಂಗ್, ಈರಮ್ಮ ರಂಗಾಪೂರ, ಬಸವರಾಜಸ್ವಾಮಿ ಹಿರೇಮಠ,ನಿರುಪಾದಿ ಕವಿಗಳು ಸೇರಿದಂತೆ ಇದ್ದರು ರಾಚೋಟಯ್ಯಸ್ವಾಮಿ ನಿರೂಪಿಸಿದರು

WhatsApp Group Join Now
Telegram Group Join Now
Share This Article