ಕೆರೆಗೆ ಹಾರವಾದ ಕೆಂಚಮ್ಮ: ಮರೆತ ಸಮಾಜ
ಹಿರೇಉಪ್ಪೇರಿ:ಕೆರೆಗೆ ಹಾರವಾದ ಕೆಂಚಮ್ಮ,, ನಿನ್ನ ಜೀವತ್ಯಾಗ ದೊಡ್ಡದಮ್ಮ
ಕಲ್ಯಾಣ ಕರ್ನಾಟಕ ವಾರ್ತೆ
ಕನ್ನಡನಾಡಿನ ಮಣ್ಣಿನ ಗುಣವೇ ತ್ಯಾಗಮಯ ನಾಡಿಗಾಗಿ ಪ್ರಾಣತೆತ್ತವರು ಸಾವಿರಾರು,ಗಡಿಗಾಗಿ ಪ್ರಾಣ ತೆತ್ತವರು ಸಾವಿರಾರು,ನುಡಿಗಾಗಿ ಪ್ರಾಣತೆತ್ತವರು ಹಲವಾರು ಹೀಗೆ ಕನ್ನಡ ನಾಡಿನ ಮಣ್ಣಿನ ಗುಣಧರ್ಮವೇ ತ್ಯಾಗಮಯವಾಗಿದ್ದು ಇಲ್ಲಿ ಹಲವಾರು ಆದರ್ಶಮಯಿಗಳು ನಿಸ್ವಾರ್ಥಕ್ಕಾಗಿ ಪ್ರಾಣ ತೆತ್ತಿದ್ದಾರೆ ಬಲಿಯಾಗಿದ್ದಾರೆ ಆದರೂ ಅದೆಲ್ಲವೂ ಇಲ್ಲಿ ಸಮಾನ್ಯವೆಂಬAತೆ ಹಾಗೆ ಅವರನ್ನು ನೆನೆಯುತ್ತಾ ಕೆಲವೊಮ್ಮೆ ಕಾಲನ ಮರೆಯಲ್ಲಿ ಮರೆಯುತ್ತಾ ಸಾಗಿದ್ದೇವೆ ಪರೋಪಕಾರಿ ತ್ಯಾಗಮಯಿಗಳನ್ನು ನಾವು ನೆನೆಯುತ್ತಲೆ ಇದ್ದಾಗ ಮಾತ್ರ ಬದುಕಿಗೆ ಸಾರ್ಥಕ ಅಲ್ಲವೇ
ಕನ್ನಡ ನಾಡಿನ ಇತಿಹಾಸದಲಿ ಹೆಣ್ಣಿನ ಜೀವನ ಬಹಳ ಮಹತ್ವದಾಗಿ ಕಂಡುಬAದಿದೆ ತೊಟ್ಟಿಲ ತೂಗುವ ಕೈ ಖಡ್ಗವಿಡಿದು ಯುದ್ದ ಮಾಡಿದ್ದಾಳೆ ಒನಕೆ ಹಿಡಿದು ವಿರೋಧಿಗಳ ರುಂಡವನು ಚಂಡಾಡಿದ್ದಾಳೆ ಇದು ವೀರಾವೇಶವಾದರೆ ಮನೆಯಲ್ಲಿ ತಾ ಅರೆಹೊಟ್ಟೆ ತಿಂದು ಮಕ್ಕಳಿಗೆ ಹೊಟ್ಟೆ ತುಂಬಿಸಿದ್ದಾಳೆ £ತಾ ನೋವುಂಡ ಜಗಕೆ ನಲಿವು ನೀಡಿದ್ದಾಳೆ ಅಂತಹ ಮಹಿಳೆಯ ಗುಣ ಸಾಮಾನ್ಯವಾದುದಲ್ಲ
ಅಂತೆ ಕಲ್ಲನಕೇರಿ ಮಲ್ಲನಗೌಡನ ಕೆರೆಯ ಕತೆ ನಾವು ಇಂದಿಗೂ ಸ್ಮರಿಸುತ್ತಾ ಬಂದಿದ್ದೇವೆ ಆ ಭಾಗದ ಕತೆಯನ್ನು ಭಾಗೀರಥಿಯ ಕತೆಯನ್ನು ನಾವು ಅಷ್ಟೇ ಕರುಣಾಭಾವದಿಂದ ಕೇಳಿ ಕನಿಕರ ಪಡುತ್ತೇವೆ ಭಗೀರಥಿಯಂತಹ ಹೆಣ್ಣನ್ನು ಕೆರೆಗೆ ಹಾರ ಮಾಡಿದರಲ್ಲವೆಂದು ಕನಿಕರ ಪಡುತ್ತೇವೆ ಆದರೆ ಅಂತಹ ಮಹಿಳೆಯರು ನಮ್ಮಲ್ಲಿ ಇದಾರೆ ಎಂದರೆ ನೀವು ನಂಬುತ್ತೀರಾ? ಅಂತಹ ತ್ಯಾಗಮಯಿಗಳ ಬಗೆಗೆ ಒಂದು ದಿನವಾದರು ನಾವು ಮಾತನಾಡಿದ್ದೇವಾ ನಮ್ಮ ಬದುಕಿನ ಜಂಜಾಟದಲ್ಲಿ ಅಂತಹುಗಳನ್ನು ಕೇಳುವುದು ನೋಡುವುದು ನಮಗೆ ಆಗುತ್ತಿಲ್ಲ ಇನ್ನು ನೆನೆಯುವುದು ಯಾವಾಗ ಎನ್ನುವಂತಾಗಿದೆ ಆದರೂ ನಮ್ಮ ಗ್ರಾಮೀಣರು ಅಂತಹ ತ್ಯಾಗಮಯಿಗಳನ್ನು ಇಂದಿಗೂ ಪೂಜೆ ಮಾಡುತ್ತಾ ಬಂದಿದ್ದಾರೆAದರೆ ನೀವು ನಂಬಲೇಬೇಕು ಹೌದು ಅವರೇ ಲಿಂಗಸಗೂರು ತಾಲೂಕಿನವರಾದ ಕರಡಕಲ್ಲಿನ ಬಿಜ್ಜಮ್ಮ ಹಾಗೂ ಮತ್ತೊಬ್ಬ ಮಹಿಳೆ ಹಿರೇ ಉಪ್ಪೇರಿಯ ಕೆಂಚಮ್ಮ
ಕೆರೆಗೆ ಹಾರ ಕತೆ ಬಂದಾಗಲೆಲ್ಲ ನಾವು ಭಾಗೀರಥಿಯನ್ನು ಮಾತ್ರ ನೆನೆಯುತ್ತೇವೆ ಲಿಂಗಸಗೂರ ತಾಲೂಕಿನಲ್ಲಿಯು ಅಂತಹ ಕೆರೆಗೆ ಹಾರದ ಪ್ರಸಂಗಗಳು ನಡೆದಿವೆ ಮತ್ತು ಇಲ್ಲಿಯ ಹೆಣ್ಣುಮಕ್ಕಳನ್ನು ಕೆರೆಗೆ ಹಾರವಾಗಿ ನೀಡಿದ ಘಟನೆಗಳು ನಮ್ಮ ಮುಂದೆ ಇವೆ ಈಗಾಗಲೆ ಅಲ್ಪಸ್ವಲ್ಪ ಜಿಜ್ಜಮ್ಮನ ಪರಿಚಯ ಕೆಲಜನರಿಗೆ ಆಗಿದೆ ಆದರೆ ಮತ್ತೊಬ್ಬ ಮಹಾತ್ಯಾಗಮಯಿ ಹಿರೇಉಪ್ಪೇರಿಯ ಕೆಂಚಮ್ಮ ಎನ್ನುವ ಮಹಿಳೆಯ ಕತೆ ಇದುವರೆಗೂ ಯಾರ ಗಮನಕ್ಕೆ ಬಂದಿಲ್ಲ ಎನ್ನುವುದೇ ದುರಂತವಾಗಿದೆ ನಾವು ಕ್ಷೇತ್ರಕಾರ್ಯಕ್ಕೆ ಹೋದಾಗ ಗ್ರಾಮಸ್ಥರಿಗೆ ಸರಿಯಾದ ಮಾಹಿತಿ ಹೇಳಲಿಲ್ಲ ಆದರೆ ಗ್ರಾಮದ ದೇವಮ್ಮ ಎನ್ನುವ ಹಿರಿಯಮಹಿಳೆ ಕೆಂಚಮ್ಮನ ಕತೆ ಹೇಳುತ್ತಿದ್ದರೆ ಮನ ಕ್ಷಣ ಮಿಡಿಯುತ್ತದೆ
ಕತೆ:ಹಿರೆಉಪ್ಪೇರಿ ಗ್ರಾಮದ ಕೆರೆಯನ್ನು ಕಟ್ಟಿಸುವಾಗ ಕೆರೆ ನಿಲ್ಲಲಿಲ್ಲವಂತೆ ಎಷ್ಟು ಪ್ರಯತ್ನಪಟ್ಟರು ನಿಲ್ಲದಾದಾಗ ಕೆರೆಕಟ್ಟಿಸುವ ನಾಯಕ ಜೋತಿಷಿಗಳನ್ನು ಕೇಳಿದಾಗ ಕೆರೆಗೆ ಮೈನೆರೆಯದ ಮಹಿಳೆಯನ್ನು ಬಲಿ ಕೊಟ್ಟರೆ ಕೆರೆ ನಿಲ್ಲುತ್ತದೆ ಎಂದು ಹೇಳಿದಂತೆ ಅದರಂತೆ ಗ್ರಾಮದ ನಾಯಕ ಹಾಗೂ ಗ್ರಾಮಸ್ಥರು ವಿಚಾರ ಮಾಡಿದಾಗ ಈ ನಾಯಕನದೆ ದೊಡ್ಡ ಕುಟುಂಬವAತೆ ಅಣ್ಣತಮ್ಮಂದಿರು ಬಹಳ ಜನ ಅದರಲ್ಲಿ ಒಬ್ಬ ಮಹಿಳೆ ಮೈನೆರೆದಿರಲಿಲ್ಲವಂತೆ ಅಲ್ಲಿ ಇಲ್ಲಿ ಹುಡುಕುವುದ್ಯಾಕೆ ನಮ್ಮ ಮನೆಯಲ್ಲಿ ನಮ್ಮ ತಂಗಿಯೆ ಇದ್ದಾಳೆ ಎಂದು ಕೆರೆಗೆ ಹಾರ ಕೊಡಲು ಮುಂದಾಗಿದ್ದಾರೆ
ಕೆರೆಯಲ್ಲಿ ದೊಡ್ಡದೊಂದು ಗುಂಡಿಯನ್ನು ತೆಗೆದು ಸಜ್ಜುಗೊಳಿಸಿ ಅದರಲ್ಲಿ ಪೂಜೆ ಮಾಡಲು ನಾಯಕನ ತಂಗಿಯಾದ ಕೆಂಚಮ್ಮನಿಗೆ ಒಪ್ಪಿಸುತ್ತಾರೆ ಆಕೆಗೆ ಹೊಸಸೀರೆ ಉಡಿಸಿ ಹೂಮುಡಿಸಿ ಬಳೆಹಾಕಿ ಕಂಕಣಕಟ್ಟಿ ಕಳಸಬೆಳಗಲು ಸಜ್ಜುಗೊಳಿಸಿದ ಗುಂಡಿಯಲ್ಲಿ ಕಳುಹಿಸುತ್ತಾರಂತೆ ಕೆಂಚಮ್ಮ ಯಾವುದಕ್ಕೂ ಹೆದರದೆ ಹಿರಿಯರ ಮಾತು ಪಾಲಿಸಿ ಕಳಸವಿಡಿದು ಪೂಜೆ ಮಾಡಲು ಗುಂಡಿಯಲ್ಲಿ ನಡೆದುಹೋಗುತ್ತಾಳೆ ಆದಾಗಲೆ ಎಲ್ಲಾ ವ್ಯವಸ್ಥೆ ಮಾಡಿದ ಜನ ಆಕೆ ಒಳಹೋಗುತ್ತಲೆ ಗುಂಡಿಯಮೇಲೆ ಬಂಡೆಯನ್ನು ಎಳೆಯುತ್ತಾರೆ ಆಗ ಕೆಂಚಮ್ಮ ಕೆರೆಗೆ ಹಾರವಾಗುತ್ತಾಳೆ
ಅಂದಿನಿAದ ಇಂದಿನವರೆಗೂ ಸದರಿ ಕೆರೆಗೆ ಕೆಂಚಮ್ಮನ ಕೆರೆ ಎಂದು ಕರೆಯಲಾಗುತ್ತಿದ್ದು ಈಗಲೂ ಕೆರೆಯ ಮೇಲೆ ಕೆಂಚಮ್ಮನ ದೇವಸ್ಥಾನವಿದೆ ವರ್ಷಕ್ಕೊಮ್ಮೆ ಊರಿನವರು ಬಾಜಾಭಜಂತ್ರಿಯೊAದಿಗೆ ಭಜನೆ ಮಾಡುತ್ತಾ ಕೆಂಚಮ್ಮನಿಗೆ ಪೂಜೆ ಸಲ್ಲಿಸುತ್ತಾರೆ
ದೇವಮ್ಮನ ಮನೆತನದ ಹಿರಿಯ ಜೀವವೇ ಈ ಕೆಂಚಮ್ಮ ಆಗಿದ್ದಳು ಎಂದು ದೇವಮ್ಮ ಹೇಳುತ್ತಾಳೆ
ಲಿಂಗಸಗೂರು ತಾಲೂಕಿನ ಹಿರೇಉಪ್ಪೇರಿ ಗ್ರಾಮದಿಂದ ಗ್ರಾಮದ ದಕ್ಷಿಣಭಾಗಕ್ಕೆ ಕೆರೆ ಇದ್ದು ಅದನ್ನು ಈಗಲೂ ಕೆಂಚಮ್ಮನ ಕೆರೆ ಎಂದು ಕರೆಯಲಾಗುತ್ತದೆ ಮತ್ತು ಕೆರೆಯಲ್ಲಿಯೆ ಕೆಂಚಮ್ಮನ ದೇವಸ್ಥಾನವಿದೆ
ಕೆರೆಗೆ ಹಾರವಾದ ಕೆಂಚಮ್ಮನ ತ್ಯಾಗಗುಣಕ್ಕೆ ನಮ್ಮ ಜನ ಆಕೆಯನ್ನು ದೇವರೆಂದು ಈಗಲೂ ಪೂಜಿಸುತ್ತಾರೆ ಮತ್ತು ತಮ್ಮ ಇಚ್ಚೆಗಳನ್ನು ಅಲ್ಲಿ ವ್ಯಕ್ತಪಡಿಸಿದರೆ ಈಡೇರಿಸುತ್ತಾಳೆ ಎನ್ನುವ ಮಾತುಗಳನ್ನು ಗ್ರಾಮಸ್ಥರು ಹೇಳುತ್ತಾರೆ
ಮಾಹಿತಿಯನ್ನು ನೀಡಿದವರು ಮಹಾಂತೇಶ ಸುರುಪುರ ಶಿಕ್ಷಕರು ಕತೆ ಹೇಳಿದವರು ದೇವಮ್ಮನಾಯಕ, ಸಹಕಾರ ಬಂದೇನಗೌಡ ಸಂಗಪ್ಪ ಅಮರೇಶ
ಲೇಖನ: ಲಕ್ಷ್ಮಣ ಬಿ