ಆ19ರಂದು ಪುಣ್ಯಸ್ಮರಣೋತ್ಸವ,೧೫೩ನೇ ಮಾಸಿಕ ಧಾರ್ಮಿಕ ದಾಸೋಹ ಕಾರ್ಯಕ್ರಮ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು: ಮಸ್ಕಿ ತಾಲೂಕಿನ ಬೇಡರ ಕಾರ್ಲಕುಂಟಿಯಲ್ಲಿ ಪುಣ್ಯಸ್ಮರೋತ್ಸವ ಹಾಗೂ ೧೫೩ನೇ ಮಾಸಿಕ ಧಾರ್ಮಿಕ ದಾಸೋಹ ಕಾರ್ಯಕ್ರಮ ಬೆ೧೧ ಗಂಟೆಗೆ ನಡೆಸಲಾಗುವದೆಂದು ಪೀಠಾಧ್ಯಕ್ಷರಾದ ಶ್ರೀಶಿವಕುಮಾರಮಹಾಸ್ವಾಮಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಅವರು ಪತ್ರಿಕೆಯೊಂದಿಗೆ ಮಾತನಾಡಿ ಹುಣ್ಣಿಮೆ ನಿಮಿತ್ಯವಾಗಿ ಬೇಡರಕಾರ್ಲಕುಂಟಿಯ ಕಾಲಜ್ಞಾನಮಠದಲ್ಲಿ ರುದ್ರಯ್ಯ ತಾತನವರ ೧೦ನೇ ಹಾಗೂ ಬಸವರಾಜಯ್ಯ ತಾತನವರ ೪ನೇಯ ಪುಣ್ಯಸ್ಮರಣೋತ್ಸವ ಹಾಗೂ ೧೫೩ನೇ ಮಾಸಿಕ ಧಾರ್ಮಿಕ ದಾಸೋಹ ಕಾರ್ಯಕ್ರಮವು ಆ೧೯ರಂದು ಹುಣ್ಣಿಮೆ ದಿನ ಬೆಳಗ್ಗೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಬೆ೧೧ಗಂಟೆಗೆ ವೇದಿಕೆ ಕಾರ್ಯಕ್ರಮಗಳು ಜರುಗಲಿದ್ದು ಸದರಿ ಕಾರ್ಯಕ್ರಮಕ್ಕೆ ವಿವಿಧ ಮಠಾಧೀಶರು ಸಂಗಮೇಶ ಶರಣರು, ಎಚ್ ಕೆ ಸ್ವಾಮಿ, ಶಾಸಕ ಆರ್ ಬಸನಗೌಡ ತುರುವಿಹಾಳ, ಪ್ರತಾಪಗೌಡ ಪಾಟೀಲ್, ಮಲ್ಲಿಕಾರ್ಜುನಸ್ವಾಮಿ ಮಠದ, ಸತ್ಯನಾರಾಯಣ ತಿವಾರಿ, ಮಹಾಂತಗೌಡ ನಾಡಗೌಡ್ರ ಕರಿಯಪ್ಪ ದೇವಿಕೇರಿ, ಶ್ರೀಧರ ಕಿರಗಿ, ಸೇರಿದಂತೆ ಹಲವಾರು ಗಣ್ಯಮಾನ್ಯರು ಆಗಮಿಸಲಿದ್ದು ಸದರಿ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸುವಂತೆ ಅವರು ಕೋರಿದ್ದಾರೆ