ಮಿತ್ರಬಂಧು ಸೌಹಾರ್ದ: ಸಹಕಾರದೊಂದಿಗೆ ಬದುಕಿದರೆ ಜೀವನದ ದಿಕ್ಕು ಬದಲಾಗುತ್ತದೆ- ನಟರಾಜ

Laxman Bariker
ಮಿತ್ರಬಂಧು ಸೌಹಾರ್ದ: ಸಹಕಾರದೊಂದಿಗೆ ಬದುಕಿದರೆ ಜೀವನದ ದಿಕ್ಕು ಬದಲಾಗುತ್ತದೆ- ನಟರಾಜ
WhatsApp Group Join Now
Telegram Group Join Now

ಮಿತ್ರಬಂಧು ಸೌಹಾರ್ದ ೪ನೇ ವಾರ್ಷೀಕೋತ್ಸವ ಕಾರ್ಯಕ್ರಮ
ಸಹಕಾರದೊಂದಿಗೆ ಬದುಕಿದರೆ ಜೀವನದ ದಿಕ್ಕು ಬದಲಾಗುತ್ತದೆ- ನಟರಾಜ

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು:ಸಮಾಜದಲ್ಲಿ ಸಹಕಾರದೊಂದಿಗೆ ಬದುಕುತ್ತಾ ಹೋರಾಟಗಳನ್ನು ರೂಪಿಸುತ್ತಾ ಬದುಕಿಗೆ ಅವಕಾಶಗಳನ್ನು ಸರಿಯಾಗಿ ಸ್ಪಂದಿಸಿದರೆ ಜೀವನದ ದಿಕ್ಕು ಬದಲಿಸುತ್ತದೆ ಎಂದು ಸೌಹಾರ್ದ ಒಕ್ಕೂಟದ ರಾಯಚೂರು ಜಿಲ್ಲಾ ಸಂಯೋಜಕ ನಟರಾಜ ಹೇಳಿದರು


ಅವರು ಪಟ್ಟಣದ ಐಎಂಎ ಹಾಲ್ ನಲ್ಲಿ ಮಿತ್ರಬಂಧು ಸೌಹಾರ್ದ ಪತ್ತಿನ ಸಹಕಾರಿ ಸಂಘದಿAದ ಏರ್ಪಡಿಸಿದ ೪ನೇ ವರ್ಷದ ವಾರ್ಷೀಕೋತ್ಸವ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಸಹಕಾರಿಗಳು ಪ್ರತಿವರ್ಷ ತಮ್ಮ ವರದಿಯನ್ನು ನೀಡಬೇಕು ಅದರಂತೆ ಮಿತ್ರಬಂಧು ಸಹಕಾರಿ ಕಾರ್ಯಕ್ರಮ ಏರ್ಪಡಿಸಿದೆ ಜಿಲ್ಲೆಯಲ್ಲಿ ೪೩೦ ಸಹಕಾರಿಗಳು ಇದ್ದು ಲಿಂಗಸಗೂರಿನಲ್ಲಿ ೬೦ ಸಹಕಾರಿಗಳು ಇವೆ ಮಿತ್ರಬಂಧು ಕೇವಲ ನಾಲ್ಕು ವರ್ಷದಲ್ಲಿ ೧೦ಕೋಟಿ ದುಡಿಮೆ ಬಂಡವಾಳ ಹೊಂದಿರುವುದು ಸಾಧನೆಯಾಗಿದೆ ಎಂದರು
ನAತರ ರಡ್ಡೇರ ಸೌಹಾರ್ದ ಸಹಕಾರಿಯ ಅಧ್ಯಕ್ಷರಾದ ಎಚ್ ಕುಮಾರಪ್ಪನವರು ಮಾತನಾಡುತ್ತಾ ಆಡಳಿತದಲ್ಲಿ ಪಾರದರ್ಶಕತೆ ಹಾಗೂ ವಿಶ್ವಾಸಗಳು ಅಭಿವೃದ್ದಿಗೆ ಸಹಕಾರಿಯಾಗುತ್ತಿದ್ದು ಅದರಮತೆ ಸದರಿ ಸಹಕಾರಿ ಸದೃಢವಾಗಿ ಬೆಳೆಯುತ್ತಿರುವುದು ಪರಸ್ಪರ ವಿಶ್ವಾಸವೇ ಕಾರಣವಾಗಿದೆ ಎಂದು ಹೇಳಿದರು


ನೀಡಿದ ಸಾಲವನ್ನು ಸದುಪಯೋಗಪಡಿಸಿಕೊಂಡು ಸಕಾಲದಲ್ಲಿ ಗ್ರಾಹಕರು ಮರಳಿಸಿದರೆ ಉತ್ತಮವಾಗಿ ಬೆಳವಣಿಗೆ ಸಾಧ್ಯವಾಗುತ್ತದೆ ಮಾನವಧರ್ಮ ಸಹಕಾರಿಯಿಂದಲೆ ಸಾಗಿದೆ ಎಂದು ಸಂಗಮೇಶ ಶರಣರು ಹೇಳಿದರು
ಮಾತೇ ಮಾಣಿಕೇಶ್ವರಿ ಮಠದ ನಂದೀಕೇಶ್ವರಿ ಅಮ್ಮನವರು ಅಮರಾನಂದ ಶರಣರು ಆಶಿರ್ವಚನ ನೀಡಿದರು ದೇವಣ್ಣ ಕಾನಿಹಾಳ ಶರಣರು ಸೇರಿದಂತೆ ಹಲವರು ಮಾತನಾಡಿದರು ಮಿತ್ರಬಂಧು ಸಹಕಾರಿಯ ಅಧ್ಯಕ್ಷರಾದ ಕರಿಯಪ್ಪ ದೇವಿಕೇರಿಯವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅಧ್ಯಕ್ಷಿಯ ನುಡಿಗಳನ್ನು ಹೇಳಿದರು ತಿರುಮಲರಾವ್ ಕುಕರ್ಣಿ ಸಾಮಾನ್ಯ ಸಭೆಯ ವರದಿ ನೀಡಿದರು ಬಸವರಾಜ ಕೊಳ್ಳಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು ಅಮರಯ್ಯಸ್ವಾಮಿ ಹಿರೇಮಠರು ವಾಷೀಕ ವರದಿ ವಆಚನ ಮಾಡಿದರು
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರಾದ ಕಾಳಪ್ಪ ಬಡಿಗೇರ್, ವಿನಯಕುಮಾರ ಗಣಾಚಾರಿ, ಗಯಾಸುದೀನ್, ಲಕ್ಷö್ಮಣ ಬಾರಿಕೇರ್ ಸೇರಿದಂತೆ ವಿವಿಧ ಸಾಧಕರನ್ನು ಸನ್ಮಾನಿಸಿ ಗೌರವಿಸಿದರು ಪರಶುರಾಮ ನಗನೂರು ಶಿಕ್ಷಕರು ನಿರೂಪಿಸಿದರು

WhatsApp Group Join Now
Telegram Group Join Now
Share This Article