ಮಾನದಹಂಗು ತೊರೆದು ಉಟ್ಟ ಸೀರೆ ಬಿಚ್ಚಿಕೊಟ್ಟು ಜೀವ ರಕ್ಷಿಸಿದ ಗ್ಯಾನಮ್ಮ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು: ತನ್ನ ಮಾನದ ಹಂಗು ತೊರೆದು ಉಟ್ಟ ಸೀರೆಯನು ಬಿಚ್ಚಿಕೊಟ್ಟು ಜೀವ ರಕ್ಷಿಸಿದ ಗ್ಯಾನಮ್ಮನ ಸಾಹಸ ವಿಶಿಷ್ಟವೇ ಸರಿ
ಹೌದು ಇಂತಹ ಸಾಹಸಮಯ ಘಟನೆಯೊಂದು ಇಂದು ಬೆಳಗ್ಗೆ ನಡೆದಿರುವ ಬಗೆಗೆ ತಿಳಿದು ಬಂದಿದೆ
ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲ್ಲೂಕಿನ ರೋಡಲಬಂಡ(ಯುಕೆಪಿ)ಯ ನಾರಾಯಣ ಪುರ ಬಲದಂಡೆ ಮುಖ್ಯ ನಾಲೆಯಲ್ಲಿ ಖಾಸಗಿ ಶಾಲೆಯ ಶಿಕ್ಷಕರೊಬ್ಬರು ಬೆಳಗ್ಗೆ ಜಳಕ ಮಾಡಲು ಹೋದ ಸಂದರ್ಭದಲ್ಲಿ ಆಯಾತಪ್ಪಿ ನೀರಿನಲ್ಲಿ ಕೊಚ್ಚಿಹೋಗುತಿರುವುದನು ಅದೆ ನಾಲೆಯ ದಾರಿಯಲ್ಲಿ ಹೊಲಕ್ಕೆ ಹೊರಟಿದ್ದ ಗ್ಯಾನಮ್ಮ ಕನಕೇರಿ ಎನ್ನುವ ಮಹಿಳೆ ಇದನ್ನು ಗಮನಿಸಿ ಕೂಗಿಕೊಂಡಿದ್ದಾಳೆ ಅಲ್ಲೆ ಇರುವ ಯುವಕನೊಬ್ಬ ಸಣ್ಣದೊಂದು ಬಟ್ಟೆ ಮೂಲಕ ಸಹಾಯಕ್ಕೆ ಧಾವಿಸಿದ್ದಾನೆ ಸಾಧ್ಯವಾಗಿಲ್ಲ ಅಷ್ಡರಲಿ ಮತ್ತೊಬ್ಬ ಯುವಕ ನೀರಿಗೆ ಜಿಗಿದಿದ್ದಾನೆ ಅಷ್ಟರಲ್ಲಿ ಗ್ಯಾನಮ್ಮ ತನ್ನ ಮಾನದ ಹಂಗು ತೊರೆದು ಉಟ್ಟ ಸೀರೆಯನೆ ಬಿಚ್ಚಿ ನೀರಿಗೆ ಬಿಟ್ಡಿದ್ದಾಳೆ ಅದೆ ಸೀರೆಯನು ಹಿಡಿದುಕೊಂಡು ಬದುಕಿದೆಯಾ ಬಡಜೀವವೇ ಎನ್ನುವಂತೆ ಆ ಶಿಕ್ಷಕ ಅಪಾಯದಿಂದ ಪಾರಾಗಿದ್ದಾನೆ
ಗ್ಯಾನಮ್ಮ ಕನಗಿರಿಯ ಧೈರ್ಯ ಕ್ಕೆ ನಾವು ಹ್ಯಾಟ್ಸ್ ಪ್ ಹೇಳಲೇಬೇಕು ಅಲ್ಲವೇ..?