ಅಹಿಂಸಾ ಮಾರ್ಗದಿಂದ ಸ್ವಾತಂತ್ರ್ಯ ಪಡೆದ ನಮಗೆ ಒಗ್ಗಟ್ಟು ಸಾಧ್ಯವಾಗಿದೆ- ಕಲಶಟ್ಟಿ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ನಮ್ಮ ದೇಶಕ್ಕೆ ಸ್ವಾತಂತ್ರ್ಯ ಪಡೆಯಲು ಹಲವಾರು ಹೋರಾಟಗಾರರು ತ್ಯಾಗ ಬಲಿದಾನದಿಂದ ಸಾಧ್ಯವಾಗಿದೆ ಅಹಿಂಸಾ ಮಾರ್ಗದಿಂದ ಸ್ವಾತಂತ್ರö್ಯ ಪಡೆದಿರುವುದರಿಂದ ನಮ್ಮ ದೇಶದಲ್ಲಿ ಒಗ್ಗಟ್ಟಿನಿಂದ ಬದುಕಲು ಸಾಧ್ಯವಾಗಿದೆ ಎಂದು ಸಹಾಯಕ ಆಯುಕ್ತರಾದ ಬಸವಣ್ಣೆಪ್ಪ ಕಲಶಟ್ಟಿ ಹೇಳಿದರು
ಅವರು ಪಟ್ಟಣದಲ್ಲಿ ತಾಲೂಕಾಡಳಿತದಿಂದ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಾ ಹಿಂಸಾಮಾರ್ಗದಿಂದ ಹೋರಾಟ ರೂಪಿಸಿದ್ದರೆ ನಾವು ಬೇಗನೇ ಸವತಂತ್ರ ಪಡೆಯಬಹುದಾಗಿತ್ತು ಆದರೆ ನಮ್ಮಲ್ಲಿ ಒಗ್ಗಟ್ಟು ಉಳಿಯುತ್ತಿರಲಿಲ್ಲ ಹಲವಾರು ರಾಷ್ಟçಗಳಲ್ಲಿ ಒಗ್ಗಟ್ಟಿನ ತೊಂದರೆಯಿಂದಲೇ ಏನೆಲ್ಲ ಸಂಕಷ್ಟ ಅನುಭವಿಸುವಂತಾಗಿದೆ ಅಂತಹ ಸನ್ನಿವೇಶ ನಮ್ಮದೇಶದಲ್ಲಿ ಬಂದಿಲ್ಲ ಯಾಕೆಂದರೆ ಇಲ್ಲಿ ಎಲ್ಲ ಧರ್ಮದವರಿದ್ದು ನಾವೆಲ್ಲ ಭಾರತೀಯರು ಎಂಬ ಮನೋಭಾವದಿಂದ ಬದುಕುತ್ತಿರುವದರಿಂದಲೆ ಇದು ಸಾಧ್ಯವಾಗಿದೆ ಎಂದು ಇನ್ನು ಕೆಲವೇ ವರ್ಷಗಳಲ್ಲಿ ಭಾರತ ಉತ್ತಮ ಅಭಿವೃದ್ದಿ ಹೊಂದಿದ ದೇಶವಾಗಲಿದೆ ಎಂದು ಅವರು ಆಶಯ ವ್ಯಕ್ತಪಡಿಸಿದರು
ನಂತರ ವಿಧಾನಪರಿಷತ್ ಸದಸ್ಯರಾದ ಶರಣಗೌಡ ಪಾಟೀಲ್ ಬಯ್ಯಾಪುರ ಮಾತನಾಡುತ್ತಾ ನಮಗೆ ಸ್ವತಂತ್ರ್ಯ ದೊರಕಿರುವುದು ಸುಮ್ಮನೆ ಅಲ್ಲ ಹಲವಾರು ಹೋರಾಟಗಾರರ ತ್ಯಾಗ ಬಲಿದಾನದಿಂದ ಸಾಧ್ಯವಾಗಿದೆ ಬ್ರಟಿಷರಿಂದ ಮುಕ್ತಿಪಡೆಯಲು ಭಾರತೀಯರು ಏನೆಲ್ಲ ಹೋರಾಟ ನಡೆಸಿದರು ಎನ್ನುವುದನ್ನು ಯುವಪೀಳಿಗೆ ಅರಿತು ನಡೆಯಬೇಕಾಗಿದೆ ನಮಗೆ ಸ್ವಾತಂತ್ರ್ಯ ದೊರಕಿದಾಗ ನಾವು ಅತಂತ್ರದ್ಲಲಿದ್ದೇವು ಬ್ರಿಟಿಷರು ಬಿಟ್ಟುಹೋದ ನಂತರ ಶಿಕ್ಷಣ, ಆರೋಗ್ಯ, ಆರ್ಥಿಕತೆ, ಸಾಮಾಜಿಕ ಹೀಗೆ ವಿವಿಧ ಸ್ತರಗಳಲ್ಲಿ ಹಿಂದುಳಿದಿದ್ದೇವೆ ಅದನ್ನು ನಮ್ಮ ನಾಯಕರು ಶ್ರಮಿಸಿ ಉತ್ತಮ ಬದುಕುಕಟ್ಟಿಕೊಳ್ಳಲು ಅವಕಾಶ ಮಾಡಿದ್ದಾರೆ ಎಂದರು
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಶಾಸಕ ಮಾನಪ್ಪ ವಜ್ಜಲರು ಮಾತನಾಡುತ್ತಾ ಇದೀಗ ಪ್ರಪಂಚ ಭಾರತದತ್ತ ಹೊರಳಿ ನೋಡುತ್ತಿದೆ ಯಾಕೆಂದರೆ ಪ್ರಪಂಚ ಒಂದು ಮನೆ ಎಂದುಕೊAಡರೆ ಅದರಲ್ಲಿ ಭಾರತ ದೇವರ ಮನೆಯಂತಾಗಿದೆ ಅಷ್ಟೊಂದು ಪವಿತ್ರತೆ ಭಾರತಕ್ಕಿದೆ ನಾವು ಬ್ರಟಿಷರಿಂದ ಮುಕ್ತಿ ಪಡೆದ ಸವಿ ನೆನಪಿಗಾಗಿ ಸ್ವತಂತ್ರ ದಿನ ಆಚರಿಸುತ್ತಿದ್ದೇವೆ ಎಂದರು
ವಿವಿಧ ಶಾಲಾಮಕ್ಕಳಿಂದ ನೃತ್ಯರೂಪಕ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು
ಈ ಸಂದರ್ಭದಲ್ಲಿ ಪಿಕರ‍್ಡ ಬ್ಯಾಂಕ್ ಅಧ್ಯಕ್ಷ ಬಸನಗೌಡ ಮೇಟಿ, ತಾ,ಒ,ಹು ಅಧ್ಯಕ್ಷ ಶಶಿಧರ ಪಾಟೀಲ್ ಆಶೀಹಾಳ ತಹಸೀಲ್ದಾರ ಶಂಶಾಲಂ, ತಾ,ಪಂ ಇಓ ಅಮರೇಶ, ಡಿವೈಎಸ್ಪಿ ದತ್ತಾತ್ರೆಯ ಕಾರ್ನಾಡ, ಬಿಈಓ ಹುಂಬಣ್ಣ ರಾಠೋಡ್, ಸಿಡಿಪಿಓ ಎಂ,ಡಿ ಗೋಕುಲ್, ಅರಣ್ಯ ಇಲಾಖೆಯ ವಿದ್ಯಾಶ್ರೀ ತೋಟಗಾರಿಕೆ, ಪಶುಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ವೇದಿಕೆಯ ಮೇಲಿದ್ದರು