ತುಂಗಭದ್ರ ಡ್ಯಾಂ ಕ್ರಸ್ಟಗೇಟ್ ಕಟ್ ಸ್ಥಳಕ್ಕೆ ಎಂ ಎಲ್ ಸಿ ಶರಣಗೌಡ ಪಾಟೀಲ್ ಬಯ್ಯಾಪುರ ಭೇಟಿ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ತುಂಗಭದ್ರಾ ಆಣೆಕಟ್ಟೆಯ ೧೯ನೇ ಕ್ರಸ್ಟಗೇಟ್ ಮುರಿದಿದ್ದು ಸ್ಥಳಕ್ಕೆ ರಾಯಚೂರು ಕೊಪ್ಪಳ ಎಂ ಎಲ್ ಸಿ ಶರಣಗೌಡ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದರು
ಅವರು ಮಾಧ್ಯಮದೊಂದಿಗೆ ಮಾತನಾಡಿ ಸ್ಥಳಕ್ಕೆ ಈಗಾಗಲೆ ರಾಜ್ಯದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರರವರು ಸ್ಥಳಕ್ಕೆ ಭೇಟಿ ನೀಡಿದ್ದು ಇನ್ನು ಕೇವಲ ನಾಲ್ಕು ದಿನದಲ್ಲಿ ಕ್ರಸ್ಟಗೇಟ್ ದುರಸ್ಥಿಗೊಳಿಸಲಾಗುತ್ತದೆ ಯಾವುದೆ ಕಾರಣಕ್ಕೂ ರೈತರು ಆತಂಕಕ್ಕೆ ಒಳಗಾಗಬಾರದು ಎಂದು ಭರವಸೆಯನ್ನು ನೀಡಿದ್ದು ಕೆಲಸವು ಸಮರೋಪಾದಿಯಲ್ಲಿ ಮಾಡಿ ನೀರನ್ನು ರಕ್ಷಿಸುವ ಕೆಲಸವನ್ನು ಮಾಡುವುದರ ಮೂಲಕ ರೈತರ ಬೆಳೆಗಳಿಗೆ ನೀರು ಒದಗಿಸುವ ಕೆಲಸ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ ಅದರಂತೆ ಕ್ರಸ್ಟಗೇಟ್ ರಿಪೇರಿಯು ಆದಷ್ಟು ಬೇಗನೆ ಮಾಡುವುದರ ಮೂಲಕ ನೀರಿನ ರಕ್ಷಣೆ ಮಾಡಲಾಗುತ್ತಿದ್ದು ಯಾರು ಆತಂಕಕ್ಕೆ ಒಳಗಾಗಬಾರದು ಎಂದು ವಿಧಾನ ಪರಿಷತ್ ಸದಸ್ಯರಾದ ಶರಣಗೌಡ ಪಾಟೀಲ್ ಬಯ್ಯಾಪುರ ಹೇಳಿದರು
ತುಂಗಭದ್ರಾ ಜಲಾಶಯದ ೧೯ನೇ ಕ್ರಸ್ಟಗೇಟ್ ಕೊಚ್ಚಿಹೋಗಿದ್ದು ಅಪಾರ ಪ್ರಮಾಣದ ನೀರು ಹರಿಯುತ್ತಿದ್ದು ಬಳ್ಳಾರಿ, ವಿಜಯನಗರ ಕೊಪ್ಪಳ ರಾಯಚೂರು ಜಿಲ್ಲೆಗಳು ಸಏರಿದಂತೆ ಲಕ್ಷಾಂತರ ಹೆಕ್ಟರ್ ಅಚ್ಚುಕಟ್ಟು ಪ್ರದೇಶದ ಅನ್ನದಾತರಲ್ಲಿ ಆತಂಕ ಮನೆಮಾಡಿದೆ
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಭುಪನಗೌಡ ಪಾಟೀಲ್, ಪಾಮಯ್ಯ ಮುರಾರಿ ಬಸವರಾಜಗೌಡ ಗಣೇಕಲ್ ಸೇರಿದಂತೆ ಇದ್ದರು