ಕಂದಕೂರು: ನಾಗರಪಂಚಮಿಗೆ ಚೇಳು ಕುಟುಕುವುದಿಲ್ಲ ವಿಸ್ಮಯಲೋಕ, ಜೀವಂತ ಚೇಳಿನೊಂದಿಗೆ ಸಂಭ್ರಮ

Laxman Bariker
ಕಂದಕೂರು: ನಾಗರಪಂಚಮಿಗೆ ಚೇಳು ಕುಟುಕುವುದಿಲ್ಲ ವಿಸ್ಮಯಲೋಕ, ಜೀವಂತ ಚೇಳಿನೊಂದಿಗೆ ಸಂಭ್ರಮ
WhatsApp Group Join Now
Telegram Group Join Now

ಕಂದಕೂರು: ನಾಗರಪಂಚಮಿಗೆ ಚೇಳು ಕುಟುಕುವುದಿಲ್ಲ ವಿಸ್ಮಯಲೋಕ, ಜೀವಂತ ಚೇಳಿನೊಂದಿಗೆ ಸಂಭ್ರಮ

Oplus_131072

*ಚೇಳನ್ನು ಹಿಡಿದು ಸಂಭ್ರಮಿಸುವ ಜಾತ್ರೆ, ಕೌತುಕ ನೋಡಲು ಆಗಮಿಸುವ ಜನ

*ಜೀವಂತ ಚೇಳುಗಳಿಗೆ ಹಾಲೆರೆಯುವ ವಿಶೇಷ ಹಬ್ಬ,ಕೊಂಡೆಮ್ಮದೇವಿ ಮಹಿಮೆ

ಕಲ್ಯಾಣ ಕರ್ನಾಟಕ ವಾರ್ತೆ

ಕಂದಕೂರು/ಲಿಂಗಸಗೂರು: ಚೇಳು ಎಂದರೆ ಕುಟುಕುವುದೆ ಅದರ ಸ್ವಭಾವ, ಆದರೇ ಇಲ್ಲಿ ಚೇಳುಗಳನ್ನೆ ಹಿಡಿದು ಜನತೆ ಸಂಭ್ರಮಿಸುತ್ತಾರೆAದರೆ ಇದನ್ನು ಪವಾಡವೆನಬೇಕೊ ಅಥವ ಅಲ್ಲಿನ ಮಣ್ಣಿನಗುಣದ ಮಹಿಮೆಯೊ ತಿಳಿಯದಾಗಿದ್ದು ನೋಡುಗರಿಗೆ ಇದೊಂದು ವಿಸ್ಮಯ ವಿಷಯವಾಗಿದ್ದು ಜನತೆ ರಾಜ್ಯ ಹೊರರಾಜ್ಯ ವಿದೇಶದಿಂದಲೂ ಇಲ್ಲಿಗೆ ಆಗಮಿಸಿ ಚೇಳು ಹಿಡಿದು ಸಂಭ್ರಮಿಸುತ್ತಾರೆ


ಯಾದಗಿರಿ ಜಿಲ್ಲೆಯ ಗುರಮಿಠಕಲ್ ತಾಲೂಕಿನ ಸಣ್ಣ ಗ್ರಾಮ ಕಂದಕೂರ ಈ ಗ್ರಾಮದಲ್ಲಿ ಇಂತಹದ್ದೊAದು ವಿಸ್ಮಯ ನಡೆಯುತ್ತಿದ್ದು ಇಂದು ದೇಶ ವಿದೇಶದ ಗಮನ ಸೆಳೆಯುತ್ತಿರುವುದ ವಿಶೇಷವಾಗಿದೆ
ಕಂದಕೂರ ಗ್ರಾಮದ ಉತ್ತರಭಾಗಕ್ಕೆ ಬೆಟ್ಟವಿದ್ದು ಆ ಬೆಟ್ಟದಲ್ಲಿ ಕೊಂಡೆಮ್ಮ ಎಂಬ ದೇವತೆಯ ದೇವಸ್ಥಾನವಿದೆ ಕೊಂಡೆಮ್ಮದೇವಿ ಕಂದಕೂರ ಗ್ರಾಮದ ಗ್ರಾಮದೇವತೆಯಾಗಿದ್ದು ಈ ಭಾಗದ ಜನತೆ ಭಕ್ತಿ ಭಾವದಿಂದ ನಡೆದುಕೊಳ್ಳುತ್ತಾರೆ ಕೊಂಡೆಮ್ಮ ಎಂದರೆ ಚೇಳಿನ ಪರ್ಯಾಯ ಪದವೇ ಆಗಿದ್ದು ಇದನ್ನು ಚೇಳು ಇಲ್ಲಿ ಪೂಜೆಗೊಳ್ಳುತ್ತದೆ ಎಂದರೆ ತಪ್ಪಾಗಲಾರದು ಆದರೆ ದೇವತೆಮಾತ್ರ ಚೇಳಿನ ರೂಪದಲ್ಲಿ ಇಲ್ಲ ಕಪ್ಪುಶಿಲೆಯಲ್ಲಿ ದೇವತೆಯನ್ನು ನಿರ್ಮಾಣ ಮಾಡಲಾಗಿದೆ

Oplus_131072

ಪ್ರತಿವರ್ಷ ಶ್ರಾವಣ ಮಾಸದ ನಾಗರಪಂಚಮಿಯAದು ಕೊಂಡೆಮ್ಮ ದೇವಿಯ ಜಾತ್ರೆ ನಡೆಯುತಿದ್ದು ಅಂದು ಜನತೆ ನಗನಜೊತೆಗೆ ಇಲ್ಲಿ ಚೇಳಿಗೂ ಹಾಲೆರೆಯುತ್ತಾರೆ ಎನ್ನಲಾಗುತ್ತಿದೆ ಈಗಾಗಲೇ ಹೇಳಿದಂತೆ ಕೊಂಡೆಮ್ಮ ಎಂದರೆ ಚೇಳಿನ ಪರ್ಯಾಯರೂಪವಾಗಿದ್ದು ಆ ಹಿನ್ನೆಯಲ್ಲಿ ಇಲ್ಲಿ ಚೇಳಿನಜಾತ್ರೆಯೆ ನಡೆಯುತ್ತಿರುವದು ವಿಶೇಷವಾಗಿದೆ
ನಾಗರಪಂಚಮಿಯAದು ಮಾತ್ರ ಈ ದೇವಸ್ಥಾನದ ಸುತ್ತಮುತ್ತ ಕಲ್ಲುಸಂದಿ ಕಲ್ಲಿನ ಕೆಳಗೆ ಹೀಗೆ ನಾನಾಭಾಗದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಚೇಳುಗಳು ಕಂಡುಬರುತ್ತವೆ ಇಲ್ಲಿಗೆ ಭೇಟಿಕೊಟ್ಟ ಜನರು ಅಂತಹ ಚೇಳುಗಳನ್ನು ದೇವಸ್ಥಾನದ ಅಕ್ಕಪಕ್ಕದಲ್ಲಿ ಹುಡುಕಿ ಅವುಗಳನ್ನು ಕೈಯಲ್ಲಿ ಹಿಡಿದು ತೋಳಿನಮೇಲೆ ಹಾಕಿಕೊಂಡು ಮೈಮೇಲೆ ತಲೆಯಮೇಲೆ ನಾಲಿಗೆ ಮೇಲೆ ಹೀಗೆ ಎಲ್ಲೆಂದರಲ್ಲಿ ಹಾಕಿಕೊಂಡು ಸಂಭ್ರಮಪಡುತ್ತಾರೆ ಇಲ್ಲಿಗೆ ಬಂದವರು ದೇವತೆಯ ದರ್ಶನದೊಮದಿಗೆ ಚೇಳಿನ ದರ್ಶನವನ್ನು ಪಡೆಯುತ್ತಾರೆ
ಚೇಳನ್ನು ನಿವು ಎಲ್ಲೆ ಹಾಕಿಕೊಂಡರು ಅದುಮಾತ್ರ ನಿಮಗೆ ಯಾವುದೆ ರೀತಿಯಲ್ಲಿ ಕುಟುಕುವುದಿಲ್ಲ ಅಪ್ಪಿತಪ್ಪಿ ಕುಟುಕಿದರೆ ದೇವಸ್ಥಾನದ ಅರ್ಚಕರಿಗೆ ಹೇಳಿದರೆ ಅವರು ದೇವಿಯ ಬಂಡಾರವನ್ನು ಹಚ್ಚುತ್ತಾರೆ ಅಲ್ಲಿಗೆ ಚೇಳಿನ ಕಡಿತ ಏನು ತೊಂದರೆಯನ್ನು ಮಾಡುವುದಿಲ್ಲ

Oplus_131072

ಚೇಳು ಎಂದರೆ ಎಂತಹವರಿಗೂ ಭಯವಾಗುತ್ತದೆ ಆದರೆ ನಾಗರಪಂಚಮಿಯAದು ಸಣ್ಣಮಕ್ಕಳಿಂದ ಹಿಡಿದು ಮುದುಕರವರೆಗೂ ಜೀವಂತ ಚೇಳುಗಳನ್ನು ತಮ್ಮ ದೇಹದ ವಿವಿಧ ಭಾಗಗಳಲ್ಲಿ ಹಾಕಿಕೊಂಡು ಸಂಭ್ರಮಪಡುತ್ತಾರೆ ಕಂದಕೂರ ಗ್ರಾಮದ ಜನರು ಜೀವಂತ ಚೇಳುಗಳಿಗೆ ಹಾಲೆರೆಯುವ ಮೂಲಕ ಪಂಚಮಿಯನ್ನು ಆಚರಣೆ ಮಾಡುತ್ತಾರೆ ಮೊದಲಿಗೆ ಕೊಂಡೆಮ್ಮದೇವಿಗೆ ದೀಪಹಾಕಿದ ನಂತರ ಚೇಳುಗಳಿಗೆ ಹಾಲೆರೆಯುತ್ತಾರೆ ಊರಪಕ್ಕದಲ್ಲಿ ಬೆಟ್ಟದ ಮೇಲೆ ನೆಲೆಸಿರುವ ಕೊಂಡೆಮ್ಮದೇವಿಗೆ ಪ್ರತಿವರ್ಷ ನಾಗರಪಮಚಮಿಯಂದು ಜಾತ್ರೆಯನ್ನು ಮಾಡುತ್ತಾರೆ
ಗ್ರಾಮದ ದಕ್ಷಿಣ ಭಾಗಕ್ಕೆ ಕೆಂಪುಬೆಟ್ಟದಲ್ಲಿ ದೇವಾಲಯವಿದ್ದು ಅದರ ಸುತ್ತಮುತ್ತ ಇರುವ ಕಲ್ಲಿನ ಕೆಳಗೆ ಪೊಟರೆಯಲ್ಲಿ ಎಲ್ಲೆಂದರಲ್ಲಿ ಗುಂಪು ಗುಂಪು ಚೇಳುಗಳು ದೊರೆಯುತ್ತವೆ ಇಲ್ಲಿ ಕೆಂಪು ಚೇಳುಗಳು ಮಾತ್ರ ಕಂಡುಬರುತ್ತಿದ್ದು ಕರಿಚೇಳು ಅಂದರೆ ಕಬ್ಬಿಣಚೇಳು ಅಪರೂಪವಾಗಿ ಕಂಡುಬರುತ್ತವೆ ಹಾಗೆ ಗುಂಪು ಗುಂಪಾಗಿ ಸಿಗುವ ಚೇಳುಗಳನ್ನು ಜನರು ತಮ್ಮ ದೇಹದ ವಿವಿಧ ಭಾಗಗಳಲ್ಲಿ ಹಾಕಿಕೊಂಡು ಸಂಭ್ರಮಿಸುವದು ಒಂದೆಡೆಯಾದರೆ ಚೇಳಿನ ಕೊಂಡಿಗಳಿಗೆ ದಾರಕಟ್ಟಿ ಹಾರಮಾಡಿ ಹಾಕಿಕೊಳ್ಳುವುದು ಇಲ್ಲಿ ನಡೆಯುತ್ತದೆ ಕೆಲವರು ತಮ್ಮ ನಾಲಿಗೆಯಮೇಲೆ ಚೇಳುಹಾಕಿಕೊಂಡು ಸಂಭ್ರಮಿಸುತ್ತಾರೆ ಇಂತಹ ಚೇಳಿನ ಹಬ್ಬ ಇಲ್ಲಿ ಮಾತ್ರ ಕಂಡು ಬರುತ್ತಿದ್ದು ಇಂತಹ ಅಪರೂಪದ ಜಾತ್ರೆ ಬೇರೆಕಡೆ ಕಂಡು ಬರುವುದಿಲ್ಲ
ಎತ್ತರವಾದ ಬೆಟ್ಟವಿದ್ದು ಎಲ್ಲೆಡೆ ಹಸಿರಿನಿಂದ ಕಂಗೊಳಿಸಿ ಬಯಲುಸೀಮೆಯಲ್ಲಿ ಮಲೆನಾಡಿನಂತೆ ಕಂಡುಬAದು ಪ್ರಕೃತಿ ಸೌಂದರ್ಯವನ್ನು ನೀಡುತ್ತದೆ ಬೆಟ್ಟದ ಮೇಲೆ ನಿಂತು ನೋಡುವುದೆ ಒಂದು ಸೊಬಗು
ವಿಸ್ಮಯ ನೋಡಲು ಹೊರರಾಜ್ಯದಿಂದ ಬರುತ್ತಾರೆ: ಚೇಳಿನ ಜಾತ್ರೆಯ ವಿಶೇಷತೆಯನ್ನು ನೋಡಲು ರಾಜ್ಯ ಹಾಗೂ ಆಂದ್ರ, ತಮಿಳುನಾಡು ಸೇರಿದಂತೆ ವಿವಿದೆಡೆಯಿಂದ ಜನ ಆಗಮಿಸುತ್ತಾರೆ ಈ ಸಲ ಕೋರಿಯಾದೇಶದಿಂದ ಯುವಕನೊಬ್ಬ ಸದರಿ ಜಾತ್ರೆಯಲ್ಲಿ ಭಾಗಿಯಾಗಿ ಚೇಳಿನ ವಿಶೆಷತೆಯನ್ನು ಕಂಡು ಸಂಭ್ರಮಿಸಿದರು
ಚೇಳುಗಳ ಜಾತ್ರೆಯನ್ನು ನೋಡಬೇಕು ಅದರ ವಿಶೇಷತೆಯನ್ನು ಸರಿಯಬೇಕು ಎನ್ನುವ ಕುತುಹಲಿಗಳಿಗೆ ಪ್ರತಿವರ್ಷ ನಾಗರಪಂಚಮಿಯAದು ಇಲ್ಲಿಗೆ ಬರಬೇಕು ವರ್ಷದಲ್ಲಿ ಒಂದೇದಿನ ನಡೆಯುವ ಈ ಚಮತ್ಕಾರ ನೋಡಲು ನಿಮಗೂ ಉತ್ಸಾಹವೇ ಮುಂದಿನ ಪಂಚಮಿ ಹಬ್ಬಕ್ಕೆ ನೀವು ಬನ್ನಿ ಸಂಭ್ರಮದಲ್ಲಿ ಭಾಗಿಯಾಗಿ ಏನಂತೀರಾ,,?

WhatsApp Group Join Now
Telegram Group Join Now
Share This Article