ನಿರ್ಣಾಯಕರು ಭೇದಭಾವವಿಲ್ಲದೆ ಎಲ್ಲರೂ ತಮ್ಮ ಶಾಲೆಯ ಮಕ್ಕಳೆಂದು ನಿರ್ಣಯ ನೀಡಿ -ಮೇಟಿ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು. ಆ.5.-ನಿರ್ಣಾಯಕರು ಯಾವುದೇ ರೀತಿಯಲ್ಲಿ ಬೇದ ಭಾವ ಮಾಡದೆ ನಿರ್ಣಯ ನೀಡಿ. ಕ್ರೀಡಾಪಟುಗಳು ನಿರ್ಭಯದಿಂದ ಆಟವಾಡಲು ಅವರಿಗೆ ಅವಕಾಶ ಮಾಡಿಕೊಡುವುದು ನಿರ್ಣಾಯಕರ ಕೈಯಲ್ಲಿದೆ. ಪ್ರತಿಯೊಬ್ಬ ಕ್ರೀಡಾಪಟುಗಳಲ್ಲಿ ಸೋಲು ಗೆಲವು ಸಾಮಾನ್ಯ ವಾಗಿದ್ದು ನಿರ್ಣಾಯಕರು ಈ ದಿಶೆಯಲ್ಲಿ ಯಾವುದೇ ರೀತಿಯ ಭೇದ ಭಾವ ಮಾಡದೆ ಎಲ್ಲಾ ಶಾಲೆ ಮಕ್ಕಳು ತಮ್ಮ ಶಾಲೆಯ ಮಕ್ಕಳು ಎಂದು ಗುರುತಿಸಿ ಒಳ್ಳೆಯ ತೀರ್ಪು ನೀಡಿದರೆ ಆ ಮಕ್ಕಳು ಮುಂದಿನ ದಿನಮಾನಗಳಲ್ಲಿ ತಾಲೂಕ ಮಟ್ಟ ಹಾಗೂ ಜಿಲ್ಲಾ ಮಟ್ಟ ಮತ್ತು ರಾಜ್ಯಮಟ್ಟಕ್ಕೆ ತಲುಪಬಹುದು ಈ ದಿಶೆಯಲ್ಲಿ ನಿರ್ಣಾಯಕರ ಪಾತ್ರ ಅತಿ ಮುಖ್ಯವಾಗಿದೆ ಎಂದು ದೈಹಿಕ ಶಿಕ್ಷಣಾಧಿಕಾರಿ ಚನ್ನಬಸವ ಮೇಟಿ ಹೇಳಿದರು.
ಅವರು ಈಚನಾಳ ಹಾಗೂ ರೋಡಲ್ ಬಂಡ (ಯುಕೆಪಿ)ವಲಯ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡುತ್ತಾ ಈಚನಾಳ ತಾಂಡಾದಲ್ಲಿ ಸಿ ಆರ್ ಸಿ ಮಟ್ಟದ ಕ್ರೀಡಾಕೂಟವನ್ನು ಏರ್ಪಡಿಸಿದ್ದು ಹಾಗೂ ಈ ಗ್ರಾಮದ ಜನತೆಯ ಸಹಕಾರ ನೋಡಿದರೆ ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ. ಶಿಕ್ಷಣ ಇಲಾಖೆಯ ಪರವಾಗಿ ಈ ತಾಂಡಗಳ ಜನತೆಗೆ ಮತ್ತು ಈಚನಾಳ ಗ್ರಾಮದ ಜನತೆಗೆ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಅವರು ತಿಳಿಸಿದರು.
ಬಿಜೆಪಿ ಪಕ್ಷದ ಮುಖಂಡರಾದ ಜೀವಲೆಪ್ಪನಾಯಕ್ ಅವರು ಮಾತನಾಡಿ ವಿಶೇಷವಾಗಿ ನಮ್ಮ ತಾಂಡಾದಲ್ಲಿ ಇಂತಹ ಒಂದು ವಲಯ ಮಟ್ಟದ ಕ್ರೀಡಾಕೂಟವನ್ನು ಹಮ್ಮಿಕೊಂಡಿದ್ದು ತುಂಬಾ ಸಂತೋಷದ ವಿಷಯವಾಗಿದೆ ಮುಂದಿನ ದಿನಮಾನಗಳಲ್ಲಿ ಈ ಕ್ರೀಡಾಪಟುಗಳನ್ನು ಬೆಳೆಸುವ ಜವಾಬ್ದಾರಿ ನಿರ್ಣಾಯಕರ ಕೈಯಲ್ಲಿದೆ.
ಇಂದು ನಿರ್ಣಾಯಕರು ತಪ್ಪು ನಿರ್ಣಯ ನೀಡಿದರೆ ಮುಂದಿನ ದಿನಮಾನಗಳಲ್ಲಿ ತಾಲೂಕ ಮಟ್ಟ ಜಿಲ್ಲಾ ಮಟ್ಟ ಹಾಗೂ ರಾಜ್ಯಮಟ್ಟದಲ್ಲಿ ನಮ್ಮ ಮಕ್ಕಳು ಗೆಲ್ಲುವುದು ಕಷ್ಟವಾಗುತ್ತಿದೆ .ಆ ದಿಶೆಯಲ್ಲಿ ಎಚ್ಚರಿಕೆಯಿಂದ ನಿರ್ಣಾಯಕರು ತಪ್ಪು ಹೆಜ್ಜೆ ಇಡದೆ ಸರಿಯಾದ ನಿರ್ಣಯವನ್ನು ಕೈಗೊಳ್ಳಬೇಕೆಂದು ಅವರು ನಿರ್ಣಾಯಕರಲ್ಲಿ ಮನವಿ ಮಾಡಿಕೊಂಡರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಗಂಗಮ್ಮ ಉಮೇಶ್ ವಹಿಸಿದ್ದರು.
ಶಾಲಾ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ಭೀಮಣ್ಣ ಟೈಲರ,ಈ ಸಂದರ್ಭದಲ್ಲಿ ತಾಂಡಾದ ಮುಖಂಡರಾದ ನಾರಾಯಣಪ್ಪ ರಾಥೋಡ್, ಜೆಸ್ಕಾಂ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ನಾಗರೆಡ್ಡಿ ರಾಥೋಡ್, ಉಮೇಶ್ ಕೆ ತಾಂಡ,ಶಾಲೆಯ ಮುಖ್ಯ ಗುರುಗಳಾದ ಶ್ರೀಮತಿ ಕಲ್ಪನಾ,ಗುರು ಸಂಗಯ್ಯ,ದೇವಪ್ಪ, ನಾರಾಯಣಪ್ಪ, ಲಾಲ್ ಸಿಂಗ್, ಗಿರಿಯಪ್ಪ, ವೆಂಕಟೇಶ್ ಎನ್, ಲಚ್ಚಪ್ಪ, ಬಾಲಪ್ಪ ವಾಲೆಪ್ಪ, ಭೀಮಪ್ಪ, ಭದ್ರಪ್ಪ, ಸೇರಿದಂತೆ ಹಲವಾರು ಮುಖಂಡರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಶರಣಬಸವ ಕೆ ಗುಡದಿನ್ನಿ ಕಾರ್ಯಕ್ರಮ ನಿರೂಪಿಸಿದರು.