ಲ್ಯಾಂಡಬ್ಯಾಂಕ್ ಅರಣ್ಯ ಜಮೀನಿನಲ್ಲಿ ಖಾಸಗಿಯವರಿಗೆ ೩ಎಕರೆ ಭೂಮಿ ಮರುಹಂಚಿಕೆ ಚರ್ಚೆ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:
ಲಿಂಗಸುಗೂರ ಹೊಬಳಿ ಮಸ್ಕಿ ತಾಲೂಕಿನ ಬಸ್ಸಾಪೂರ ಗ್ರಾಮದ ಸರ್ವೆ ನಂ ೮೫//೧/* ಕಾಯಿದಿಟ್ಟ ಅರಣ್ಯ ಜಮೀನಿನಲ್ಲಿ ಪಾರಂಪೋಕ ಅರಣ್ಯ ಇಲಾಖೆ ಲ್ಯಾಂಡ ಬ್ಯಾಂಕ೧೫೪ ಮೂಲ ಭೂಮಿಯಲ್ಲಿ ಗ್ರಾಮದ ಹನುಮಂತ ಎಂಬುವ ಖಾಸಗಿ ರೈತರಿಗೆ ಮಸ್ಕಿ ಹಿಂದಿನ ತಹಸೀಲ್ದಾರ ಸುದಾ ಅರಮನೆ ದಿ೨೯-೧-೨೦೨೪ ರಂದು ಮರು ಮಂಜೂರ ಮಾಡಿದ್ದು ಪಹಣೀ ದಾಖಲೆಗಳಲ್ಲಿ ನಮೂದಾಗಿದೆ
ಹಿಂದಿನ ತಹಸೀಲ್ದಾರ ಸುಧಾವರು ಬಗ್ಗಲಗುಡ್ಡ ಗಾಮದ ಅರಣ್ಯ ಜಮೀನಿನಲ್ಲಿ ೧೬ ಎಕರೆ ರಕ್ಷಿತಾ ಅರಣ್ಯ ಜಮೀನು ಖಾಸಗಿಯವರಿಗೆ ಪಟ್ಟಾ ಅರಣ್ಯ ಕಾಯಿದೆ ಉಲ್ಲಂಘಿಸಿ ಮಾಡಿದ್ದನ್ನು ಸಹಾಯಕ ಆಯುಕ್ತರು ರದ್ದುಪಡಿಸಿದ ಹಿನ್ನಲೆಯ ಸರಕಾರ ತಹಸೀಲ್ದಾರವರನ್ನು ಹಿಂಬಡ್ತಿ ನೀಡಿ ಸೇವೆಯಿಂದ ಅಮಾನತಗೊಳಿಸಲಾಗಿತ್ತು ತಹಸೀಲ್ದಾರ ಸುಧಾ ದಿನಾಂಕ ೨೯-೧-೨೦೨೪ರಂದು ಮರುಹಂಚಿಕೆ ಆದೇಶವನ್ನು ಪಾಲಿಸಿದ ಕಂದಾಯ ನಿರೀಕ್ಷಕರು ಪಹಣಿಯಲ್ಲಿ ರೈತ ಹನುಮಂತಪ್ಪ ಹುಲಗಪ್ಪ ಎಂಬುವರ ಹೆಸರು ಸೇರಿಸಲಾಗಿದೆ. ಬಗ್ಗಲಗುಡ್ಡ ಪ್ರಕರಣ ದಿನದಂದೆ ತಹಸೀಲ್ದಾರ ಸುಧಾವರರು ಬಸ್ಸಾಪೂರ ಗ್ರಾಮದ ರೈತನಿಗೆ ಮರುಮಂಜೂರ ಮಾಡಿದ್ದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.
“ಬಸ್ಸಾಪೂರ ಕಾಯಿದಿಟ್ಟ ಅರಣ್ಯ ಜಮೀನು ಬಗ್ಗೆ ಸರಿಯಾದ ಮಾಹಿತಿ ಇಲ್ಲಾ ಸಂಬಂದಿಸಿದ ದಾಖಲೆಗಳನ್ನು ಸಂಗ್ರಹಿಸಿ ತಪ್ಪು ಜರುಗಿದ್ದರೆ ಸೂಕ್ತ ಕಾನೂನು ಕ್ರಮ ಜರಿಗಿಸುವದಾಗಿ ವಿದ್ಯಾ ಶ್ರೀ ಅರಣ್ಯ ಅಧಿಕಾರಿ ಲಿಂಗಸುಗೂರ ತಿಳಿಸಿರುವರು”