ಹಾಲಬಾವಿ ತಾಂಡ:ವಾಂತಿಭೇದಿ ೧೩ ಜನ ಆಸ್ಪತ್ರೆಗೆ ದಾಖಲು,ಇಓ ಭೇಟಿ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ತಾಲೂಕಿನ ಹಾಲಬಾವಿ ತಾಂಡಾದಲ್ಲಿ ವಾಂತಿಭೇದಿ ಕಾಣಿಸಿಕೊಂಡಿದ್ದು ೧೩ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಆರೋಗ್ಯ ಇಲಾಖೆ ಗ್ರಾಮದಲ್ಲಿ ತಾತ್ಕಾಲಿಕ ಚಿಕಿತ್ಸೆಗೆ ವ್ಯವಸ್ಥೆ ಮಾಡಲಗಿದೆ ಎಂದು ತಿಳಿದುಬಂದಿದೆ
ತಾಲೂಕಿನ ಗೊರೇಬಾಳ ಗ್ರಾಮಪಂಚಾಯ್ತಿ ವ್ಯಾಪ್ತಿಯ ಹಾಲಬಾವಿ ತಾಂಡಾದಲ್ಲಿ ಎರಡು ಮೂರು ದಿನಗಳಿಂದ ವಾಂತಿಭೇದಿ ಸುರುವಾಗಿದ್ದು ಹಲವಾರು ಜನರು ಸಾರ್ವಜನಿಕ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವುದ ಬಗೆಗೆ ತಿಳಿದುಬಂದಿದ್ದು ೧೩ ಜನರನ್ನು ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿದ್ದು ತಾಂಡಾದಲ್ಲಿ ಆರೋಗ್ಯ ಇಲಾಖೆ ತಾತ್ಕಾಲಿಕ ಚಿಕಿತ್ಸಾ ಕೇಂದ್ರವನ್ನು ತೆಗೆದಿದ್ದು ಚಿಕಿತ್ಸೆಯನ್ನು ನೀಡಲಾಗುತ್ತಿದೆ ಸದ್ಯಕ್ಕೆ ನಿಯಂತ್ರಣವೆಂದು ಕಂಡುಬAದಿದ್ದರು ಯಾವುದೆ ಕ್ಷಣದಲ್ಲಿ ಹೆಚ್ಚುಕಡಿಮೆಯಾಗಬಹುದೆಂದು ಮುಂಜಾಗೃತಕ್ರಮವಾಗಿ ಚಿಕಿತ್ಸಾಕೇಂದ್ರ ತೆಗೆಯಲಾಗಿದೆ ಎಂದು ತಿಳಿದುಬಂದಿದೆ
ತಾAಡಾದಲ್ಲಿ ಬೋರವೆಲ್ ಮುಖಾಂತರ ಸರಬರಾಜು ಆಗುತ್ತಿರುವ ನೀರನ್ನು ಬಂದ್ ಮಾಡಲಾಗಿದ್ದು ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಸ್ವಚ್ಚತೆಯ ಬಗೆಗೆ ಮಾಹಿತಿಯನ್ನು ನೀಡಲಾಗುತ್ತಿದೆ ಹಾಗೂ ಪರಸ್ಥಿತಿಯನ್ನು ನಿಯಂತ್ರಿಸಲು ಆರೋಗ್ಯ ಇಲಾಖೆ ತಾಂಡಾದಲ್ಲಿಯೆ ಬೀಡುಬಿಟ್ಟಿರುವುದಾಗಿ ತಿಳಿಸಿದೆ
ಇಓಭೇಟಿ ಪರಿಶೀಲನೆ:ಹಾಲಬಾವಿ ತಆಂಡದಲ್ಲಿ ವಾಂತಿಭೇದಿ ಬಗೆಗೆ ಮಾಹಿತಿ ಬರುತ್ತಿರುವಂತೆ ತಾಲೂಕಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅಮರೇಶರವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಗ್ರಾಮದಲ್ಲಿ ಸಭೆಯನ್ನು ಮಾಡಿ ವಾಂತಿಭೇದಿ ನಿಯಂತ್ರಣಕ್ಕೆ ಕ್ರಮವಹಿಸುತ್ತಿರುವುದಾಗಿ ಹೇಳಲಾಗಿದೆ
“ತಾಂಡಾದಲ್ಲಿ ವಾಂತಿಭೇದಿ ಕಾಣಿಸಿಕೊಂಡಿದ್ದು ನೀರಿನ ದೋಷವೊ ಆಹಾದ ದೋಷವೊ ಯಾವುದು ತಿಳಿದುಬಂದಿಲ್ಲ ಟ್ಯಾಂಕರಮೂಲಕ ನೀರು ಸರಬಾರಾಜು ಮಾಡಲಾಗುತ್ತಿದೆ ತಾತ್ಕಲಿಕ ಚಿಕಿತ್ಸಾಕೇಂದ್ರವನ್ನು ತೆಗೆಯಲಾಗಿz”ೆ-ಡಾ ಅಮರೇಶ ಪಾಟೀಲ್ ತಾಲೂಕಾ ಆರೋಗ್ಯ ಅಧಿಕಾರಿ ಲಿಂಗಸಗೂರು