,ಜಲಧಾರೆ ನೋಡಲು ಭಾರಿಜನಸ್ತೋಮ,ಬಸವಸಾಗರ ಜಲಾಶಯದಿಂದ ನದಿಗೆ ನೀರು

Laxman Bariker
,ಜಲಧಾರೆ ನೋಡಲು  ಭಾರಿಜನಸ್ತೋಮ,ಬಸವಸಾಗರ ಜಲಾಶಯದಿಂದ ನದಿಗೆ ನೀರು
WhatsApp Group Join Now
Telegram Group Join Now

ಬಸವಸಾಗರ ಜಲಾಶಯದಿಂದ ನದಿಗೆ ನೀರು,ಜಲಧಾರೆ ನೋಡಲು ಆಗಮಿಸಿದ ಭಾರಿಜನಸ್ತೋಮ

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು:ತಾಲೂಕಿನ ಗಡಿಭಾಗದಲ್ಲಿರುವ ಬಸವಸಾಗರ ಜಲಾಶಯದಿಂದ ೩ಲಕ್ಷ ಕ್ಯೂಸೆಕ್ ನೀರು ಕೃಷ್ಣಾನದಿಗೆ ಬಿಡುತ್ತಿದ್ದು ಭೋರ್ಗರೆಯುತ್ತಿರುವ ಜಲಾಧಾರೆಯನ್ನು ಕಣ್ತುಂಬಿಕೊಳ್ಳಲು ಬಸವಸಾಗರ ಜಲಾಶಯಕ್ಕೆ ಭಾರಿಜನಸ್ತೋಮ ಆಗಮಿಸುತ್ತಿದೆ
ತಾಲೂಕಿನ ರೋಡಲಬಂಡ(ಯುಕೆಪಿ) ಹತ್ತಿರವಿರುವ ಬಸವಸಾಗರ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಒಳಹರಿವು ಇರುವುದರಿಂದ ಸದರಿ ಜಲಾಶಯದಿಂದ ಕೃಷ್ಣಾನದಿಗೆ ೩ಲಕ್ಷ ಕ್ಯೂಸೆಕ್ ನೀರು ಬಿಡಲಾಗುತ್ತಿದ್ದು ನೀರು ಆಣೆಕಟ್ಟೆಯಿಂದ ಧುಮ್ಮಿಕ್ಕುವ ಮನೋಹರವಾದ ಜಲಾಧಾರೆ ದೃಶ್ವನ್ನು ಕಣ್ತುಂಬಿಕೊಳ್ಳಲು ದೂರದೂರದಿಂದ ಸಾಕಷ್ಟು ಪ್ರಮಾಣದಲ್ಲಿ ಪ್ರಮಾಣದಲ್ಲಿ ಜನತೆ ಬರುತ್ತಿದ್ದಾರೆ
ಬಸವಸಾಗರ ಜಲಾಶಯದ ಮೂವತ್ತು ಗೇಟುಗಳನ್ನು ತೆಗೆದಿದ್ದು ನದಿಗೆ ೩ಲಕ್ಷ ಕ್ಯೂಸೆಕ್ ಬಿಟ್ಟಿರುವುದರಿಂದ ಆಣೆಕಟ್ಟೆಯಿಂದ ನೀರು ಹೊರಚಿಮ್ಮುವ ರುದ್ರನರ್ತನವನ್ನು ನೋಡುವುದೆ ಕಣ್ಣಿಗೆ ಹಬ್ಬ ಅಂತಹ ಸೌಂದರ್ಯವನ್ನು ಕಣ್ಣಾರೆಕಂಡು ಆನಂದಿಸಲು ಹಲವಾರು ಆಸಕ್ತ ಜನರು ಬೈಕು,ಕಾರು,ಬಸ್ ಸೇರಿದಂತೆ ಹಲವಾರು ವಾಹನಗಳ ಮೂಲಕ ಜಲಾಶಯಕ್ಕೆ ಆಗಮಿಸುತ್ತಿದ್ದಾರೆ
ಜಲಾಶಯದ ಮುಂಭಾಗದಲ್ಲಿ ಅಂಗಡಿ ಮುಂಗಟ್ಟುಗಳು: ಜಲಾಶಯವನ್ನು ನೋಡಲು ಬರುತ್ತಿರುವ ಜನರಿಗೆ ಬೇಕಾಗುವ ಹಲವಾರು ತಿನಿಸಿನ ಅಂಗಡಿ ಮುಂಗಟ್ಟುಗಳು ಇಲ್ಲಿಗೆ ಬಂದಿದ್ದು ಇದೊಂದು ಜಾತ್ರೆಯಂತೆ ಕಂಡು ಬರುತ್ತಿದೆ ಮೆಕ್ಕೆತೆನೆ ಮಾರಾಟ, ಬಜಿ ಜಿಲೇಬಿ ಅಂಗಡಿಗಳು, ಸೋಡಾ, ಐಸ್ ಕ್ರೀಮ್ ಅಂಗಡಿಗಳು ಸೇರಿದಂತೆ ವಿವಿಧ ಬಗೆಯ ಅಂಗಡಿಗಳನ್ನು ಹಾಕಿದ್ದು ಆಣೆಕಟ್ಟೆಗೆ ಬರುವ ಜನರಿಗೆ ಸವಿಯಲು ಸಿಗುತ್ತವೆ
ಜು೨೮ರಂದು ರವಿವಾರ ಆಗಿರುವುದರಿಂದ ಹುಣಸಗಿ,ಕೊಡೇಕಲ್ ನಾಲತವಾಡ ಮುದೇಬಿಹಾಳ, ಲಿಂಗಸಗೂರು,ಹಟ್ಟಿ ಮುದಗಲ್ ನಾರಾಯಣಪುರ ಹೀಗೆ ನಾನಾಕಡೆಯಿಂದ ಸಾಕಷ್ಟು ಪ್ರಮಾಣದಲ್ಲಿ ಜನರು ಬಂದಿರುವುದರಿAದ ಕ್ಷಣಕಾಲ ಟ್ರಾಫಿಕ್ ಜಾಮ್ ಆಗಿತ್ತು
ಜಲಾಶಯಕ್ಕೆ ನೀರುಬಿಟ್ಟಾಗ ನೋಡಲು ಆಗಮಿಸುವ ಪ್ರವಾಸಿಗರು ಇನ್ನಿತರ ದಿನಗಳಲ್ಲಿ ಅಲ್ಲಿಗೆ ಭೇಟಿ ನೀಡುವುದಿಲ್ಲ ಡ್ಯಾಂ ನ ಮುಂದಿರುವ ಪ್ರದೇಶದಲ್ಲಿ ಉದ್ಯಾನವನ ನಿರ್ಮಿಸಿದರೆ ಆಣೆಕಟ್ಟೆಗೆ ಇನ್ನಷ್ಟು ಮೆರಗುಬರುತ್ತಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರಲು ಅನುಕೂಲವಾಗುತ್ತದೆ ಸರಕಾರ ಅಥವ ಆಣೆಕಟ್ಟೆ ವಿಭಾಗ ಈ ನಿಟ್ಟಿನಲ್ಲಿ ಆಸಕ್ತಿವಹಿಸಿ ಮತ್ತಷ್ಟು ಅಂದಗೊಳಿಸುವುದು ನೀರಿನ ನರ್ತನ,ಬಣ್ಣದ ಬೆಳಕು ಸೇರಿದಂತೆ ಉತ್ತಮಗೊಳಿಸಿದರೆ ಮತ್ತಷ್ಟು ಪ್ರವಾಸಿಗರನ್ನು ಸೆಳೆಯಲು ಅನುಕೂಲವಾಗುತ್ತದೆ ಆ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಲಿ ಎನ್ನುವುದು ಪತ್ರಿಕೆಯ ಆಶಯವಾಗಿದೆ

WhatsApp Group Join Now
Telegram Group Join Now
Share This Article