ಕರಡಕಲ್ ಹತ್ತಿರ ಬಸ್ ಹಾಗೂ ಕಾರ್ ಡಿಕ್ಕಿ ಒಂದು ಸಾವು ಮತ್ತೊಬ್ಬರಿಗೆ ಗಂಭೀರಗಾಯ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು: ಪಟ್ಟಣದ ಪುರಸಭೆ ವ್ಯಾಪ್ತಿಯ ಕರಡಕಲ್ ಹತ್ತಿರ ಬಸ್ ಹಾಗೂ ಕಾರ್ ನಡುವೆ ಡಿಕ್ಕಿ ಯಾಗಿ ಒಬ್ಬ ಸ್ಥಳದಲ್ಲೇ ಅಸು ನೀಗಿದ್ದು ಮತ್ತೊಬ್ಬರಿಗೆ ಗಂಭೀರ ಗಾಯವಾಗಿದೆ
ಇಂದು ಸಂಜೆ ಎಂಟುಗಂಟೆ ಸಮಯದಲಿ ಅಡವಿಬಾವಿ ಕಡೆಯಿಂದ ಬರುತಿದ್ದ ಬಸ್ ಗೆ ಲಿಂಗಸಗೂರು ಕಡೆಯಿಂದ ಹೊರಟಿದ್ದ ಕಾರ್ ಬಸ್ಸಿಗೆ ಡಿಕ್ಕಿ ಯಾಗಿ ಕಾರಿನಲಿದ್ದ ಯುವಕರಿಬ್ಬರಲಿ ಒಬ್ಬ ಸ್ಥಳದಲಿಯೆ ಮೃತಪಟ್ಟರೆ ಮತ್ತೊಬ್ಬ ಯುವಕನಿಗೆ ಗಂಭೀರ ಗಾಯವಾಗಿದ್ದು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದು ಬಂದಿದ್ದು ಇಬ್ಬರು ಯುವಕರು ಕರಡಕಲ್ಲಿನವರು ಎಂದು ಹೇಳಲಾಗುತಿದೆ ಬಸ್ ಲಿಂಗಸಗೂರು ಡಿಪೋ ಗೆ ಸೇರಿದ್ದು ಆಗಿದ್ದು ಕಾರು ಸಹಿತ ಸ್ಥಳಿಯದೆ ಎಂದು ಹೇಳಲಾಗುತ್ತಿದೆ