ನೆರೆಹಾವಳಿ ನಡುಗಡ್ಡೆ ಪ್ರದೇಶಕ್ಕೆ ಜಿಲ್ಲಾಧಿಕಾರಿ ಭೇಟಿ:
ನಡುಗಡ್ಡೆ ಜನರ ಓಡಾಟಕ್ಕೆ ಪೂಟ್ ಬ್ರೀಜ್ ವ್ಯವಸ್ಥೆಗೆ ಯತ್ನ-ಡಿಸಿ ನಿತೀಶ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ಬಸವಸಾಗರ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದದರಿಂದ ಜಲಾಶಯದಿಂದ ನದಿಗೆ ೩ಲಕ್ಷ ಕ್ಯೂಸೆಕ್ ನೀರು ಬಿಡಲಾಗುತ್ತಿದ್ದು ನಡುಗಡ್ಡೆಯ ಜನತೆಗೆ ತೊಂದರೆಯನ್ನು ಗಮನಿಸಲು ಜಿಲ್ಲಾಧಿಕಾರಿ ಕೆ ನಿತೀಶ ಭೇಟಿ ನೀಡಿ ನಡುಗಡ್ಡೆಯ ಜನತೆಗೆ ಪೂಟ್ ಬ್ರೀಜ್ ಮಾಡಲು ಯತ್ನಿಸಲಾಗುವುದೆಂದು ಹೇಳಿದ ಬಗೆಗೆ ತಿಳಿದುಬಂದಿದೆ
ಕೃಷ್ಣಾನದಿಗೆ ನೀರು ಬರುತ್ತಲೆ ತಾಲೂಕಿನ ಯರಗೋಡೆ ,ಯಳಗುಂದಿ,ಕಡದರಗಡ್ಡಿ ಹಂಚಿನಾಳ ಹಾಗೂ ಜಲದುರ್ಗ ಸಂಪರ್ಕಕ್ಕೆ ತೊಂದರೆಯಾಗಲಿದೆ ಅಲ್ಲದೆ ಕರಕಲಗಡ್ಡಿ ಮ್ಯಾದರಗಡ್ಡಿ ಸಂಪೂರ್ಣವಾಗಿ ನಡುಗಡೆಯಲಿ ಸಿಲುಕಿಕೊಳುವುದರಿಂದ ಅವರಿಗೆ ಹೊರಬರಲು ತೊಂದರೆಯಾಗುತ್ತದೆ ಅಲ್ಲಿಯೆ ಸಾಕಷ್ಟು ಫಲವತ್ತಾದ ಭೂಮಿ ಇದ್ದು ಬೆಳೆ ಹಾಗೂ ಜಾನುವಾರುಗಳ ರಕ್ಷಣೆ ಮಾಡಿಕೊಂಡು ಅಲ್ಲಿಯೆ ವಾಸ ಮಾಡುತ್ತಾರೆ ಆದರೆ ಅವರು ಹೊರಜಗತ್ತಿನ ಸಂಪರ್ಕ ಕಳೆದುಕೊಳುವುದರಿಂದ ರೋಗ ರುಜಿನಾದಿಗಳು ಬಂದಾಗ ಮಕ್ಕಳಿಗೆ ಶಾಲಾ ಕಾಲೇಜಿನ ತೊಂದರೆ ಉಂಟಾಗುತ್ತದೆ ಅಲ್ಲದೆ ಕೆಲವೊಮ್ಮೆ ಆಹಾರದ ತೊಂದರೆಯು ಆಗಲಿದೆ ಅಲ್ಲದೆ ಕಡದರಗಡ್ಡಿ ಯರಗೊಡಿ,ಯಳಗುಂದಿಗೂ ಸಂಪರ್ಕ ಸುತ್ತುವರೆದು ಬರಬೇಕಾಗುತ್ತದೆ ರೋಗಿಗಳು ಬಾಣಂತಿಯರಿಗೆ ಹಾಗೂ ತುರ್ತು ಆರೋಗ್ಯದ ಸಮಸ್ಯೆಗೆ ಸಾಕಷ್ಟು ತೊಂದರೆಯಾಗಲಿದೆ ಈ ಎಲ್ಲಾ ತೊಂದರೆಗಳನ್ನು ಗಮನಿಸಲು ಜಿಲ್ಲಾಧಿಕಾರಿ ಕೆ ನಿತೀಶ ಹಾಗೂ ಎಸ್ಪಿ ಪುಟ್ಟಮಾದಯ್ಯ ಶನಿವಾರ ಆಗಮಿಸಿ ವೀಕ್ಷಣೆ ಮಾಡಿದರು
ಕರಕಲಗಡ್ಡಿಗೆ ಪೂಟ್ ಬ್ರೀಜ್, ಶೀಲಹಳ್ಳಿ ಸೇತುವೆಗೆ ಗ್ರೀಲ್ ಗೆ ಯತ್ನ:
ನೆರೆಹಾವಳಿಯ ನಡುಗಡ್ಡೆ ಪ್ರದೇಶದ ಶೀಲಹಳ್ಳಿ ಸೇತುವೆ ಮುಳುಗಿರುವುದನ್ನು ವೀಕ್ಷಣೆ ಮಾಡಿದರು ನಂತರ ಯಳಗುಂದಿಯ ವಿದ್ಯುತ್ ಉತ್ಪಾದನಾ ಸ್ಥಳದ ವೀಕ್ಷಣಾ ಸ್ಥಳದಿಂದ ಕರಕಲಗಡ್ಡಿಯ ಜನವಸತಿಯ ಪ್ರದೇಶವನ್ನು ವೀಕ್ಷಣೆ ಮಾಡಿ ನಂತರ ಮಾತನಾಡುತ್ತಾ ನದಿಯಾಚೆ ನಡುಗಡ್ಡೆಯಲಿರುವ ಕರಕಲಗಡ್ಡಿಯ ಜನರಿಗೆ ನದಿಗೆ ಪ್ರವಾಹ ಬಂದಾಗ ಮಾತ್ರ ತೊಂದರೆಯಾಗಲಿದ್ದು ಅದರಿ ಸಮಯದಲ್ಲಿ ಅವರಿಗೆ ಓಡಾಡಲು ವ್ಯವಸ್ಥೆಯಾಗುವಂತೆ ಪೂಟ್ ಬ್ರೀಜ್(ಕಾಲುಸೇತುವೆ) ನಿರ್ಮಾಣ ಮಾಡಲು ಸರಕಾರಕ್ಕೆ ಬರೆಯಲಾಗುವುದು ಮತ್ತು ಬ್ರಿಜ್ ತರಲು ಯತ್ನಿಸಲಾಗುವುದು ಎಂದು ಹೇಳಿದರು ಹಾಗೆಯೆ ಶೀಲಹಳ್ಳಿ ಸೇತುವೆ ಮುಳುಗಡೆಯಾಗಿದ್ದು ಕಡಿಮೆ ನೀರು ಇರುವಾಗಲು ಜನರು ಓಡಾಡಲು ಅನುಕೂಲವಾಗುವಂತೆ ಸೇತುವೆ ಅಕ್ಕಪಕ್ಕ ಗ್ರಿಲ್ ಅಳವಡಿಕೆಗೆ ಪ್ರಯತ್ನಿಸಲಾಗುವುದು ಎಂದು ಹೇಳಿದರು ಸಹಾಯಕ ಆಯುಕ್ತರಾದ ಅವಿನಾಶ ಸಿಂಧೆ ಸಂಜೀವನ್ ರವರು ಸದರಿ ನಡುಗಡ್ಡೆಯ ಸಮಸ್ಯೆಯ ಬಗೆಗೆ ಜಿಲ್ಲಾಧಿಕಾರಿಗಳಿಗೆ ವಿವರಿಸಿದರು
ಈ ಸಂದರ್ಭದಲ್ಲಿ ಎಸ್ಪಿ ಎಂ ಪುಟ್ಟಮಾದಯ್ಯ, ತಹಸಿಲ್ದಾರ ಶಂಶಾಲಂ, ಡಿವೈಎಸ್ಪಿ ದತ್ತಾತ್ರೆಯ ಕಾರ್ನಾಡ, ಪಿಐ ಪುಂಡಲೀಕ್ ಪಟತ್ತರ ಸೇರಿದಂತೆ ಇದ್ದರು