ಲಿಂಗಸಗೂರು:ನಕಲಿ ನೋಟುಗಳ ಚಲಾವಣೆ ಹೆಚ್ಚುತ್ತಿದೆಯಾ? ಕಡಿವಾಣ ಯಾವಾಗ?
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ಪಟ್ಟಣದಲಿ ನಡೆಯುವ ಹಲವಾರು ವ್ಯಾಪಾರ ವಹಿವಾಟಿನಲಿ ನಕಲಿ ನೋಟುಗಳ ಚಲಾವಣೆಯ ಹಾವಳಿ ಹೆಚ್ಚುತ್ತಿದೆ ಎನ್ನಲಾಗುತ್ತಿದ್ದು ಕಡಿವಾಣ ಯಾವಾಗ ಎನ್ನುವ ಪ್ರಶ್ನೆ ನಾಗರೀಕರಲ್ಲಿ ಮೂಡಿಬರುತ್ತಿದೆ
ಆಗಾಗ್ಗೆ ಪಟ್ಟಣದಲ್ಲಿ ನಕಲಿ ನೋಟುಗಳ ಹಾವಳಿ ಕೇಳಿ ಬರುತ್ತಿದೆ ಕೆಲದಿನಗಳ ಹಿಂದೆ ಗ್ರಾಹಕರೊಬ್ಬರ ವಹಿವಾಟಿನಲಿ ನಕಲಿ ನೋಟು ಕಾಣಿಸಿಕೊಂಡು ಸುದ್ದಿಯಾಗಿತ್ತು ಅದು ಮಾಸುವ ಮುನ್ನವೇ ಮತ್ತೊಂದು ಅಂತಹುದೆ ಘಟನೆ ನಡೆದಿದೆ
ಪಟ್ಟಣದ ಬಾರ್ ಒಂದರಲ್ಲಿ ಗ್ರಾಹಕರು ಮದ್ಯ ಖರೀದಿ ಮಾಡುವಾಗ ಎರಡುನೂರರ ನೋಟು ಚಲಾವಣೆಯಾಗಿದೆ ಅವರು ಅದನ್ನು ಪೆಟ್ರೋಲ್ ಬಂಕ್ ವೊಂದರಲ್ಲಿ ಚಲಾವಣೆ ಮಾಡಲು ಹೋದಾಗ ಅದು ನಕಲಿ ಎಂದು ಹಿಂದಿರುಗಿಸಿದ್ದಾರೆ ಸದರಿ ಗ್ರಾಹಕರು ಪುನಃ ಅದೆ ಬಾರ್ ಗೆ ಬಂದು ನೋಟಿನ ಬಗೆಗೆ ವಿವರಿಸಿದಾಗ ನೋಟು ಬದಲಾವಣೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ
ಬರ್ ನವರು ಹೇಳುವುದೇನು: ನಮ್ಮ ಬಾರ್ ಗೆ ಬೇರೆಕಡೆಯಿಂದ ಬಂದಿರುವ ಗ್ರಾಹಕರಿಂದ ಇಂತಹ ನಕಲಿ ನೋಟು ಬಂದಿರಬಹುದು ಒಂದೊ ಎರಡು ನೋಟ್ ಗಳು ಇದ್ದಾಗ ನಾವು ನೋಟು ಎಣಿಸುವ ಯಂತ್ರದಲ್ಲಿ ಹಾಕುವುದಿಲ್ಲ ಇದರಿಂದಾಗಿ ನಮಗೆ ನಕಲಿನೋಟು ಗುರುತಿಸಲು ತೊಂದರೆಯಾಗುತ್ತಿದೆ ನಮ್ಮಲ್ಲಿ ನಕಲಿನೋಟು ಗ್ರಾಹಕರಿಂದ ಚಲಾವಣೆಯಾಗಿರುವುದು ನಿಜವಿದ್ದು ಸದರಿ ಗ್ರಾಹಕರು ನಮಗೆ ಯಾರೆಂದು ಗೊತ್ತಿಲ್ಲ ಹೊರಜಿಲ್ಲೆಯಿಂದ ಬಂದು ನಮ್ಮಲ್ಲಿ ಚಲಾಯಿಸಿರಬಹುದೆಂದು ಹೇಳುತ್ತಾರೆ
ಚುನಾವಣೆ ಸಂದರ್ಭದಲ್ಲಿ ಚಲಾವಣೆಯಾಯ್ತಾ ನಕಲಿನೋಟು: ಒಂದು ಮಾಹಿತಿ ಪ್ರಕಾರ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮತದಾರರಿಗೆ ನೀಡಲು ಕೆಲರಾಜಕೀಯ ಪಕ್ಷದವರು ನಕಲಿನೋಟು ಚಲಾವಣೆಯಾಗಿರುವ ಬಗೆಗೆ ಕೇಳಿಬಂದಿದೆ
ಹಾಗಾದರೆ ತಾಲೂಕಿನಲ್ಲಿ ನಿರಂತರವಾಗಿ ನಕಲಿ ನೋಟು ಚಲಾವಣೆಯಾಗುತ್ತಲೆ ಇದೆಯಾ ಎನ್ನುವ ಪ್ರಶ್ನೆಗಳು ಗ್ರಾಹಕರಿಗೆ ಕಾಡುತ್ತವೆ
ಇದೆಲ್ಲವನ್ನು ಗಮನಿಸಿದರೆ ಪಟ್ಟಣದಲ್ಲಿ ನಿರಂತರವಾಗಿ ನಕಲಿನೋಟುಗಳ ಹಾವಳಿ ನಡೆಯುತ್ತಲೆ ಬರುತ್ತಿದೆ ಶನಿವಾರದ ಸಂತೆ,ರೈತರ ವ್ಯಾಪಾರ ವಹಿವಾಟಿನಲಿ, ಇತರೆ ವಹಿವಾಟುಗಳಲ್ಲಿ ನಕಲಿನೋಟು ಚಲಾವಣೆ ಇದೆಯಾ ಎನ್ನುವ ಪ್ರಶ್ನೆಗಳು ನಿರಂತರವಾಗಿ ಕಾಡುತ್ತಿದ್ದು ಅವುಗಳ ಮೂಲವನ್ನು ಹುಡುಕಿ ನಕಲಿನೋಟುಗಳಿಗೆ ಕಡಿವಾಣ ಯಾವಾಗ ಎನ್ನುವ ಪ್ರಶ್ನೆಗಳು ಗ್ರಾಹಕರನ್ನು ಕಾಡುತ್ತಲೆ ಇವೆ ಆದಷ್ಟು ಬೇಗನೆ ನಕಲಿ ನೋಟುಗಳಿಗೆ ಕಡಿವಾಣ ಬೀಳಬಹುದೆ? ಕಾದುನೋಡೋಣ..!!