ಲಯನ್ಸ್ ಕ್ಲಬ್ ವತಿಯಿಂದ ೫೦೦ ಸಸಿನೆಡುವ ಕಾರ್ಯಕ್ರಮಕ್ಕೆ ಚಾಲನೆ

Laxman Bariker
ಲಯನ್ಸ್ ಕ್ಲಬ್ ವತಿಯಿಂದ ೫೦೦ ಸಸಿನೆಡುವ ಕಾರ್ಯಕ್ರಮಕ್ಕೆ ಚಾಲನೆ
WhatsApp Group Join Now
Telegram Group Join Now

ಲಯನ್ಸ್ ಕ್ಲಬ್ ವತಿಯಿಂದ ೫೦೦ ಸಸಿನೆಡುವ ಕಾರ್ಯಕ್ರಮಕ್ಕೆ ಚಾಲನೆ

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು:ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಲಯನ್ಸ್ ಕ್ಲಬ್ ವತಿಯಿಂದ ೫೦೦ ಸಸಿಗಳನ್ನು ನೆಡುವ ಮೂಲಕ ಹಸಿರೀಕರಣ ಕಾರ್ಯಕ್ಕೆ ಕ್ಲಬ್ ನ ಸದಸ್ಯರು ಚಾಲನೆ ನೀಡಿದರು
ಪಟ್ಟಣದಲ್ಲಿ ನೂತನ ಕಟ್ಟಡಗಳ ನಿರ್ಮಾಣ ರಸ್ತೆಗಳ ಅಗಲೀಕರಣ ಇತ್ಯಾದಿಗಳಿಂದ ಗಿಡ ಮರಗಳನ್ನು ತೆರವುಗೊಳಿಸಲಾಗಿದ್ದು ಪುನಃ ಪಟ್ಟಣವನ್ನು ಹಸಿರುಕರಣ ಮಾಡಬೇಕು ಎನ್ನುವ ಗುರಿಯೊಂದಿಗೆ ಲಯನ್ಸ್ ಕ್ಲಬ್ ಪಟ್ಟಣದಲ್ಲಿ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಸಸಿ ನೆಡಲು ಮುಂದಾಗಿದೆ
ಅದರAತೆ ಲಯನ್ಸ್ ಕ್ಲಬ್ ನ ಶರಣಬಸವ ಮೇಟಿಯವರು ಅಧ್ಯಕ್ಷತೆಯಲ್ಲಿ ಸಸಿ ನೆಡುವ ಕಾರ್ಯಕ್ಕೆ ಇಂದು ಚಾಲನೆ ನಿಡಲಾಗಿದ್ದು ಪಟ್ಟಣದಲ್ಲಿ ಸದ್ಯಕ್ಕೆ ೫೦೦ ಸಸಿಗಳನ್ನು ನೆಡಲಾಗುವುದೆಂದು ತಿಳಿದುಬಂದಿದ್ದು ಅದರಂತೆ ಇಂದು ಪಟ್ಟಣದ ಆರ್ ಎಂ ಎಸ್ ಕಲ್ಯಾಣಮಂಟಪದ ಪಕ್ಕದಲಿರುವ ಉದ್ಯಾನವನದಲ್ಲಿ ಸಸಿಗಳನ್ನು ನೆಡಲಾಯಿತು
ಈ ಸಂದರ್ಭದಲ್ಲಿ ಕ್ಲಬ್ ನ ಉಪಾಧ್ಯಕ್ಷರಾದ ನಾಗರಾಜ ಗಸ್ತಿ, ಕಾರ್ಯದರ್ಶಿ ವಿನಯಕುಮಾರ ಗಣಾಚಾರಿ, ಖಜಾಂಚಿ ಅರುಣಕುಮಾರ ಖಂಡೇಲವಾಲ್, ಸದಸ್ಯರಾದ ಬಸವರಾಜ, ಲಕ್ಷಿö್ಮÃಪತಿ ವಕೀಲರು, ಡಾ ಚಂದ್ರಶೇಕರ ನಾಗಲೀಕರ್, ಗುರುರಾಜ ಜನಾದ್ರಿ, ಶರಣಬಸವರಾಜಸ್ವಾಮಿ, ಡಾ ಸುಭಾಸ್ ಪಲ್ಲೇದ್ ಮುರುಳೀಧರ, ಸೇರಿದಂತೆ ಇದ್ದರು

WhatsApp Group Join Now
Telegram Group Join Now
Share This Article