ಕರಡಕಲ್:ಐತಿಹಾಸಿಕ ಮೂರ್ತಿಯನ್ನು ಕದ್ದುಹೊಯ್ದ ನಿಧಿಗಳ್ಳರು
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ಪುರಸಭೆ ವ್ಯಾಪ್ತಿಯ ಕರಡಕಲ್ ಗ್ರಾಮದಲ್ಲಿರುವ ಪಾಲಕಮ್ಮ ಎಂದು ಹೇಳಲಾಗುತ್ತಿರುವ ಐತಿಹಾಸಿಕ ಮೂರ್ತಿಯನ್ನು ಕದ್ದುಕೊಂಡು ಹೊಯ್ದದಲ್ಲದೆ ಮತ್ತೊಂದು ದೇವಸ್ಥಾನದಲ್ಲಿ ಮೂರ್ತಿಯನ್ನು ನಿಧಿಗಳ್ಳರು ಭಗ್ನಗೊಳಿಸಿರುವುದಾಗಿ ತಿಳಿದುಬಂದಿದೆ
ಕರಡಕಲ್ ಐತಿಹಾಸಿಕ ತಾಣವಾಗಿದ್ದು ಇಲ್ಲಿ ಹಲವಾರು ಐತಿಹಾಸಿಕ ಕುರುಹುಗಳು ದೇವಸ್ಥಾನಗಳು ದಾಳಿಗೆ ಒಳಗಾದ ದೇವಸ್ಥಾನಗಳು ಇಲ್ಲಿವೆ ಅಂತಹ ಕೇಂದ್ರವಾದ ಕರಡಕಲ್ಲಿನಲಿ ಸುಂದರವಾದ ಮೂರ್ತಿಯೊಂದು ಆಂಜನೇಯನ ದೇವಸ್ಥಾನದಲ್ಲಿತ್ತು ಅದನ್ನು ಗ್ರಾಮದವರು ಪಾಲಕಮ್ಮ ಎಂದು ಕರೆಯುತ್ತಿರುವುದಲ್ಲದೆ ಮಕ್ಕಳಿಗೆ ತಟ್ಟುಹೊಟ್ಟು ಕಾಣಿಸಿಕೊಂಡಾಗ ಈ ಮೂರ್ತಿಗೆ ನೈವೇದ್ಯವನ್ನು ನೀಡುತ್ತಿದ್ದರು ಗ್ರಾಮಸ್ಥರು ಪೂಜೆಮಾಡುತ್ತಿದ್ದರು
ಅದೊಂದು ತುಂಬಾ ಸುಂದರವಾದ ಕೆತ್ತನೆಯ ಶಿಲ್ಪವಾಗಿತ್ತು ಅದನ್ನು ನೋಡಿದರೆ ನಾಟ್ಯರಾಣಿಯ ಚಿತ್ರದಂತೆ ತೋರುತಿತ್ತು ಅಂತಹ ಕಲಾಕೃತಿಯನ್ನು ನಿಧಿಗಳ್ಳರು ಮಂಗಳವಾರ ರಾತ್ರಿ ಇಡೀ ಮೂರ್ತಿಯನ್ನು ವಾಹನದಲ್ಲಿ ಎತ್ತಿಹಾಕಿಕೊಂಡು ಹೋಗಿದ್ದಾರೆಂದು ಗ್ರಾಮಸ್ಥರು ಹೇಳುತ್ತಾರೆ ಅಲ್ಲದೆ ಸದರಿ ಸ್ಥಳದಲ್ಲಿ ಹಗ್ಗ ಇತ್ಯಾದಿ ವಸ್ತುಗಳು ಬಿದ್ದಿವೆ
ಅಲ್ಲದೆ ಮತ್ತೊಂದು ದೇವಸ್ಥಾನದಲ್ಲಿ ನಂದಿಯಮೂರ್ತಿಯನ್ನು ಭಗ್ನಗೊಳಿಸಿದ್ದಾರೆ ಎನ್ನಲಾಗುತ್ತಿದೆ ಒಟ್ಟಾರೆಯಾಗಿ ನಿಧಿಗಳ್ಳರು ಕರಾಮತ್ತಿನಿಂದಾಗಿ ಕರಡಕಲ್ಲಿನ ಐತಿಹಾಸಿಕ ಕುರುಹು ಪಾಲಕಮ್ಮನಮೂರ್ತಿ ಎತ್ತಿಕೊಂಡುಹೋಗಿರುವುದು ದುರಂತವೇ ಸರಿ
ಗ್ರಾಮದ ಜನರೆಲ್ಲ ಪೂಜೆ ಮಾಡುತ್ತಿದ್ದ ಸದರಿ ಮೂರ್ತಿಯನ್ನು ಕದ್ದುಕೊಂಡುಹೋಗಿರುವುದರಿAದ ಜನತೆ ಅಂತಹ ನಿಧಿಗರ್ಳಳರಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸುತ್ತಿದ್ದಾರೆ
ಈ ಸಂದರ್ಭದಲ್ಲಿ ಗ್ರಾಮದ ಎಂ,ಕೆ ಪಾಟೀಲ್ ಹಾಗೂ ನೂರಾರು ಮಹಿಳೆಯರು ಸೇರಿದಂತೆ ಇದ್ದರು