ಶೀಲಹಳ್ಳಿ ಶಾಲೆಯಲ್ಲಿ ಸಂಭ್ರಮದ ಶನಿವಾರ:
ಮಾದಕ ವಸ್ತುಗಳ ಬಳಕೆ ಸಾಧನೆಗೆ ಅಡ್ಡಿಯಾಗುತ್ತದೆ-ಭಾಗೀರಥಿ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ಮಾದಕ ವಸ್ತುಗಳು ಮೆದಳು ಹಾಗೂ ದೇಹದ ಮೇಲೆ ಪರಿಣಾಮ ಬೀರುವ ಮೂಲಕ ಅದು ಸಾಧನೆಗೆ ಅಡ್ಡಿಯಾಗುತ್ತದೆ ಎಂದು ಭಾಗೀರಥಿ ಶಿಕ್ಷಕಿ ಹೇಳಿದರು
ಅವರು ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೋ ಬ್ಯಾಗ್ ಡೇ ನಿಮಿತ್ಯವಾಗಿ ಹಮ್ಮಿಕೊಂಡಿದ್ದ ಸಂಭ್ರಮ ಶನಿವಾರದ ಕಾರ್ಯಕ್ರಮದಲಿ ಭಾಗಿಯಾಗಿ ಮಾದಕ ವಸ್ತುಗಳ ಬಳಕೆ ಹಾಗೂ ಅವುಗಳ ದುಷ್ಪರಿಣಾಮಗಳ ಬಗೆಗೆ ಮಾತನಾಡುತ್ತಾ ವಿಶ್ವಸಂಸ್ಥೆ ಪ್ರತಿವರ್ಷ ಜೂನ್ ೨೬ರಂದು ಅಂತರಾಷ್ಟ್ರೀಯ ಯ ಮಾದಕ ವ್ಯಸನಿ ವಿರೋಧಿ ದಿವಸ ಎಂದು ಆಚರಿಸಲು ಕರೆ ನೀಡಿದೆ ಮಾದಕ ವಸ್ತುಗಳೆಂದರೆ ಸಾರಾಯಿ, ಸಿಗರೇಟು, ಬೀಡಿ ತಂಬಾಕು ಗುಟ್ಕಾ ಅಫೀಮು ಕೊಕೇನ್ ಇತ್ಯಾದಿ ಈ ವಸ್ತುಗಳ ಅಪಾಯಕಾರಿ ಮೆದುಳು ಶ್ವಾಸಕೋಶ ಯಕೃತ ಹಾಗೂ ಹೃದಯಗಳ ಮೇಲೆ ಗಂಭಿರ ಪರಿಣಾಮ ಬೀರುತ್ತದೆ ಬದುಕು ಹಾಳಾಗುತ್ತದೆ ಅಲ್ಲದೆ ಸಾಧನೆಗೆ ಅಡ್ಡಿಯಾಗುತ್ತದೆ ಅದಕ್ಕಾಗಿ ಅಂತಹುಗಳಿAದ ದೂರವಿರಬೇಕು ಎಂದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಭಾರಿ ಮುಖ್ಯಗುರುಗಳಾದ ಗಿರೀಶ ಸೊಲ್ಲಾಪುರವಹಿಸಿದ್ದರು ಈರಣ್ಣ ತೇರದಾಳ ಪ್ರಾಸ್ತಾವಿಕವಾಗಿ ಮಾತನಾಡಿ ನಂತರ ರಸಪ್ರಶ್ನೆಯನ್ನು ನಡೆಸಿಕೊಟ್ಟರು ಎ,ಬಿ ತಂಡಗಳು ಭಾಗವಹಿಸಿದ್ದವು ಬಿ ತಂಡ ವಿಜೇತವಾಯಿತು
ಈ ಸಂದರ್ಭದಲ್ಲಿ ಶಾಲಾಮಂತ್ರಿ ಮಂಡಲದ ಮುಖ್ಯಮಂತ್ರಿ ಪುಷ್ಪಲತಾ, ಉಪಮುಖ್ಯಮಂತ್ರಿ ಪ್ರಸನ್ ಕುಮಾರ ಸೇರಿದಂತೆ ಇದ್ದರುಅಜಯಗುರಿಕಾರ ನಿರೂಪಿಸಿದರು ಹನಮಪ್ಪ ಹೊನ್ನಪ್ಪ ಸ್ವಾಗತಿಸಿದರು ಹುಲಗಮ್ಮ ಸಂಗಡಿಗರು ಪ್ರಾರ್ಥಿಸಿದರು ಕು ಗೀತಾ ದುರಗಪ್ಪ ವಂದಿಸಿದರು