ಕೃಷ್ಣಾ ನದಿಗೆ ನೀರು,ನಡುಗಡ್ಡೆ ಪ್ರದೇಶಗಳಿಗೆ ತಹಸೀಲ್ದಾರ ಭೇಟಿ,ಪರಿಶೀಲನೆ

Laxman Bariker
ಕೃಷ್ಣಾ ನದಿಗೆ ನೀರು,ನಡುಗಡ್ಡೆ ಪ್ರದೇಶಗಳಿಗೆ ತಹಸೀಲ್ದಾರ ಭೇಟಿ,ಪರಿಶೀಲನೆ
WhatsApp Group Join Now
Telegram Group Join Now

ಕೃಷ್ಣಾ ನದಿಗೆ ನೀರು,ನಡುಗಡ್ಡೆ ಪ್ರದೇಶಗಳಿಗೆ ತಹಸೀಲ್ದಾರ ಭೇಟಿ,ಪರಿಶೀಲನೆ

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು:ಮಹಾರಾಷ್ಟçದಲ್ಲಿ ಮಳೆಯಾಗುತ್ತಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ನೀರುಹರಿದು ಬರುತ್ತಿದ್ದು ಬಸವಸಾಗರ ಜಲಾಶಯದಿಂದ ನೀರುಬಿಡಲಾಗುತ್ತಿದ್ದು ನಡುಗಡ್ಡೆ ಪ್ರದೇಶಗಳಿಗೆ ತಹಸೀಲ್ದಾರ ಶಂಶಾಲಂ ಭೇಟಿ ನೀಡಿ ಪರಿಶೀಲನೆ ನಡೆಸಿದರು


ಬಸವಸಾಗರ ಜಲಾಶಯದಿಂದ ಕೃಷ್ಣಾನದಿಗೆ ನೀರು ಬಿಡುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನ ನದಿತೀರದ ಗ್ರಾಮಗಳಿಗೆ ಸಂಪರ್ಕ ಇತ್ಯಾದಿ ಅನಾನುಕೂಲವಾಗುವ ಕಾರಣದಿಂದ ಹಾಗೂ ಕರಕಲಗಡ್ಡಿಯಲ್ಲಿ ವಾಸಿಸುವ ಕುಟುಂಬಗಳಿಗೆ ತೊಂದರೆಯಾಗುವ ಕಾರಣ ಸೇರಿದಂತೆ ನಡುಗಡ್ಡೆ ಗ್ರಾಮಗಳಾದ

ಯರಗೋಡಿ,ಯಳಗುಂದಿ,ಹಂಚಿನಾಳ, ಜಲದುರ್ಗ, ಕಡದರಗಡ್ಡಿ ಗ್ರಾಮಗಳು ಪ್ರವಾಹದ ತೊಂದರೆಗೆ ಒಳಗಾಗಲಿವೆ ಶೀಲಹಳ್ಳಿ ಸೇತುವೆ ಮುಳುಗಡೆಯಾದರೆ ಸದರಿ ಗ್ರಾಮಗಳು ಜಲದುರ್ಗದ ಮಾರ್ಗವಾಗಿ ಹೊರಬರಬೇಕಾಗುತ್ತದೆ ಸುತ್ತುವರೆದು ಬರಬೇಕಾಗುತ್ತದೆ ಅಂತಹ ಸಂದರ್ಭದಲ್ಲಿ ಜನರಿಗೆ ಜಾನುವಾರುಗಳಿಗೆ ಹಾಗೂ ರೈತರಿಗೆ ತೊಂದರೆಯಾಗಬಾರದು ಎನ್ನುವ ಕಾರಣದಿಂದ ಸದರಿ ಭಾಗದಲ್ಲಿ ಪ್ರವಾಹದ ಹಾನಿಯನ್ನು ತಡೆದು ಜನರಿಗೆ ಯಾವರೀತಿ ಅನುಕೂಲಗಳನ್ನು ಮಾಡಿಕೊಡಬಹುದು ಎನ್ನುವ ಚಿಂತನೆಯೊಂದಿಗೆ ತಹಸೀಲ್ದಾರ ಶಂಶಾಲಂ ಹಾಗೂ ಅಧಿಕಾರಿ ವರ್ಗ ನಡುಗಡ್ಡೆ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿಯ ಚಿತ್ರಣದ ಪರಿಶೀಲನೆಯನ್ನು ನಡೆಸಿತು
ಈಗಾಗಲೇ ತಾಲೂಕಾಡಳಿತದಿಂದ ಒಂದೊಂದು ಗ್ರಾಮಗಳಿಗೂ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು ತಮಗೆ ವಹಿಸಿದ ಗ್ರಾಮದ ಜನರ ಸುರಕ್ಷಾ ದೃಷ್ಟಿಯಿಂದ ಅಧಿಕಾರಿಗಳು ಕೆಲಸ ಮಾಡುತಿದ್ದಾರೆ
ಮಹಾರಾಷ್ಟçದಲ್ಲಿ ಮಳೆಯಾಗುತ್ತಿದ್ದು ಕೃಷ್ಣಾನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತಿದ್ದು ಆಲಮಟ್ಟಿಯಿಂದ ಹೆಚ್ಚಿನ ನೀರನ್ನು ಬಸವಸಾಗರ ಜಲಾಶಯಕ್ಕೆ ಬರುತ್ತಿದ್ದು ಅಲ್ಲಿಂದ ನದಿಗೆ ನೀರು ಬಿಡಲಾಗುತ್ತಿದೆ ಕ್ಷಣಕ್ಷಣಕೂ ನೀರಿನ ಹರಿವು ಹೆಚ್ಚಾಗುತ್ತಿರುವುದರಿಂದ ನಡುಗಡ್ಡೆ ಗ್ರಾಮದ ಜನರು ನದಿಗೆ ಇಳಿಯಬಾರದು ಜಾನುವಾರಗಳನ್ನು ಬಿಡಬಾರದು ನದಿಯನ್ನು ದಾಟುವ ಯತ್ನ ಮಾಡಬಾರದು ಸುರಕ್ಷಿತ ಸ್ಥಳದಲ್ಲಿ ಇರಬೇಕು ರೈತರು ಮೋಟಾರು ಪಂಪಸೆಟ್ ಗಳನ್ನು ಸುರಕ್ಷಿತ ಸ್ಥಳದಲ್ಲಿರಿಸಬೇಕು ಸೇರಿದಂತೆ ಹಲವಾರು ಮುನ್ನೆಚ್ಚರಿಕೆಗಳನ್ನು ಜನತೆಗೆ ನೀಡುತ್ತಿದ್ದಾರೆ ಅಲ್ಲದೆ ಗ್ರಾಮಗಳಲ್ಲಿ ಡಂಗೂರಗಳನ್ನು ಹಾಕಿಸುವುದರ ಮೂಲಕ ಎಚ್ಚರಿಕೆಯನ್ನು ಮಾಡಲಾಗುತ್ತಿದೆ
ತಹಸೀಲ್ದಾರ ಶಂಶಾಲಂರವರು ಶೀಲಹಳ್ಳಿ ಬ್ರೀಜ್, ಯಳಗುಂದಿ ಬ್ರಿಜ್ ಹಾಗೂ ಜಲದುರ್ಗಕ್ಕೇ ಭೇಟಿ ನೀಡಿ ಪರಿಶೀಲನೆ ನಡೆಸಿದರು
ಹೇಳಿಕೆ:ಕೃಷ್ಣಾನದಿಗೆ ಪ್ರವಾಹ ಬಂದರೆ ನಡುಗಡ್ಡೆ ಜನತೆ ಸುರಕ್ಷಿತ ಸ್ಥಳದಲ್ಲಿರಬೇಕು ಮತ್ತು ಅವರ ರಕ್ಷಣೆಗೆ ತೆಗೆದುಕೊಳ್ಳಬೇಕಾದ ಸಿದ್ದತೆಗಳ ಬಗೆಗೆ ಪರಿಶೀಲನೆ ನಡೆಸಲಾಗಿದೆ ಮತ್ತು ಈಗಾಗಲೆ ಎಲ್ಲಾ ಗ್ರಾಮಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದ್ದು ಅವರು ಜನರ ಸುರಕ್ಷತೆಯ ಬಗೆಗೆ ಸೂಚನೆಗಳನ್ನು ನೀಡುತ್ತಿದ್ದಾರೆ- ಶಂಶಾಲಂ ತಹಸೀಲ್ದಾರರು ಲಿಂಗಸಗೂರು

WhatsApp Group Join Now
Telegram Group Join Now
Share This Article