**ಮಹಿಳೆ ಮತ್ತು ಮಕ್ಕಳ ಶೋಷಣೆ ತಡೆಯುವಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಅಗಾಧ- ಉಂಡಿ ಮಂಜುಳಾ
ಶೋಷಿತ ಮಹಿಳೆರಿಗಾಗಿ ಹಾಗೂ ಮಾನವ ಕಳ್ಳಸಾಗಾಣಿಕೆ ವಿರೋಧಿ ದಿನಾಚರಣೆ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮ*
ಕಲ್ಯಾಣ ಕರ್ನಾಟಕ ವಾರ್ತೆ*
ಲಿಂಗಸುಗೂರು ಜುಲೈ-18 : ಇಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗ ಬೆಂಗಳೂರು, ತಾಲೂಕು ಕಾನೂನು ಸೇವಾ ಸಮಿತಿ ಲಿಂಗಸುಗೂರು, ತಾಲೂಕು ವಕೀಲರ ಸಂಘ, ತಾಲೂಕು ಆಡಳಿತ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಲಿಂಗಸುಗೂರು. ಗೌರಮ್ಮ ಅಭಿವೃದ್ದಿ ಸಂಸ್ಥೆ ಬೀದರ ಇವರುಗಳ ಸಂಯುಕ್ತಾಶ್ರಯದಲ್ಲಿ *ಶೋಷಿತ ಮಹಿಳೆರಿಗಾಗಿ ಹಾಗೂ ಮಾನವ ಕಳ್ಳಸಾಗಾಣಿಕೆ ವಿರೋಧಿ ದಿನಾಚರಣೆ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮ* ವನ್ನು ತಾಲೂಕು ಪಂಚಾಯತ್ ಸಭಾಂಗಣ ಲಿಂಗಸುಗೂರುನಲ್ಲಿ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ
ಉದ್ಘಾಟಕರಾಗಿ:- ಶ್ರೀಮತಿ ಗೌರವಾನ್ವಿತ ಉಂಡಿ ಮಂಜುಳಾ ಶಿವಪ್ಪ ಹಿರಿಯ ಶ್ರೇಣಿ ಸಿವೀಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ.ಹಾಗೂ ಅಧ್ಯಕ್ಷರು ತಾ.ಕಾ.ಸೇ.ಸ, ಲಿಂಗಸುಗೂರು.
ಇವರು ಮಹಿಳೆಯರು & ಮಕ್ಕಳ ವಿರುದ್ದ ಶೋಷಣೆ ನಡೆಯದಂತೆ ತಡೆಯುವಲ್ಲಿ ಅಂಗನವಾಡಿ ಕಾರ್ಯಕರ್ತರ ಪಾತ್ರ ಬಹುಮುಖ್ಯ ಎಂದು ಇವರು ಉದ್ಘಾಟಕರ ನುಡಿದರು.
ಅಧ್ಯಕ್ಷತೆ:- ಅಮರೇಶ ಯಾದವ ಕಾರ್ಯನಿರ್ವಾಹಕ ಅಧಿಕಾರಿಗಳು ತಾ.ಪಂ.ಲಿಂಗಸುಗೂರು.
ಇವರು ಮಾತನಾಡಿ ಇಂದು ಮಹಿಳೆಯರಿಗಾಗಿ ಸರಕಾರದಿಂದ ಸೌಲಭ್ಯಗಳು ಸರಿಯಾದ ರೀತಿಯಲ್ಲಿ ಸದುಪಯೋಗ ಪಡೆಸಿಕೊಳ್ಳಿ ಎಂದರು
ಮುಖ್ಯ ಅಥಿತಿಗಳು
ಗೌರವಾನ್ವಿತ ಅಂಬಣ್ಣ ಕೆ. ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ.ಹಾಗೂ ಸದಸ್ಯಕಾರ್ಯದರ್ಶಿಗಳು ತಾ.ಕಾ.ಸೇ.ಸ,ಲಿಂಗಸುಗೂರು.
ಇವರು ಮಾತನಾಡಿ ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ತಡೆಯಲು, ಹಾಗೂ ಮಾನವ ಕಳ್ಳಸಾಗಾಣಿಕೆ ಯನ್ನು ಸಂಪೂರ್ಣ ತಡೆಯುವಲ್ಲಿ ನಮ್ಮ ನೀಮ್ಮ ಪಾತ್ರ ಬಹುಮುಖ್ಯಎಂದು ಹೇಳಿದರು.
ಭೂಪನಗೌಡ. ವಿ. ಪಾಟೀಲ್ ಅಧ್ಯಕ್ಷರು ತಾಲೂಕು ನ್ಯಾಯವಾದಿಗಳು ಸಂಘ, ಲಿಂಗಸುಗೂರು.
ಬಸವರಾಜ ಜಳಿಕಿಮಠ ಗ್ರೇಡ್-2 ತಹಶೀಲ್ದಾರರು, ಲಿಂಗಸುಗೂರು.
ರತ್ನಮ್ಮ ಪಿ.ಎಸ್.ಐ, ಲಿಂಗಸುಗೂರು.
ಇವರು ಮಾತನಾಡಿ ತಮ್ಮ ಮಕ್ಕಳನ್ನು ಜಾಗೃತೆಯಿಂದ ನೋಡಿಕೊಳ್ಳುವದರಲ್ಲಿ ಪೋಷಕರ ಪಾತ್ರ ತುಂಬಮುಖ್ಯ ಹಾಗೂ ಇಂದಿನ ಯುವಕರು ಹಾಗೂ ಯುವತಿಯರು ತಮ್ಮ ಶಿಕ್ಷಣದಕಡೆಗೆ ಒತ್ತುಕೊಡಬೇಕು ಹಾಗೂ ಸಮಾಜದಲ್ಲಿ ಗಣ್ಯವ್ಯಕ್ತಿಯಾಗಿ ಬಾಳಿ ಬದುಕಬೇಕು ಎಂದು ಹೇಳಿದರು.
ಹುಂಬಣ್ಣ ರಾಠೋಡ ಕ್ಷೇತ್ರಶಿಕ್ಷಣಾಧಿಕಾರಿಗಳು, ಲಿಂಗಸುಗೂರು.
ಗೋಕುಲ್ ಹುಸೇನ್ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು, ಲಿಂಗಸಗೂರು.
ಪರಮೇಶ್ವರ ಡಿ. ಬೆಳವಣಗಿ ಸದಸ್ಯರು, ಗೌರಮ್ಮ ಅಭಿವೃದ್ಧಿ ಸಂಸ್ಥೆ, ಬೀದರ.
ಹಾಗೂ ಅಂಗನವಾಡಿ ಕಾರ್ಯಕರ್ತರು, ಸಿಬ್ಬಂದಿಗಳು ಸೇರಿದಂತೆ ಹಾಜರಿದ್ದರು.