ಹಿರೇಉಪ್ಪೇರಿ:ಮೊಹರಂ ದಲಿ ಮನ ರಂಜಿಸಿದ ಮೋಡಿಕಾರರ ಆಟ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ಮೊಹರಂ ಹಬ್ಬದ ನಿಮಿತ್ಯವಾಗಿ ತಾಲೂಕಿನ ಹಿರೇಉಪ್ಪೇರಿಯಲ್ಲಿ ಯುವಕರು ಮೋಡಿಕಾರರ ಆಟ ಆಡವುದರ ಮೂಲಕ ಮನರಂಜನೆಯನ್ನು ನೀಡಿದ ದೃಶ್ಯಕಂಡುಬಂತು
ಮೊಹರಂ ಹಬ್ಬವೆಂದರೆ ಭಾವೈಕ್ಯತೆಯ ಹಬ್ಬವೆಂದೆ ಹೆಸರುವಾಸಿ ಅಂತೆಯೆ ಈ ಹಬ್ಬದಲಿ ಆಲಾಯಿ ಹಾಡುಗಳು, ಹುಲಿವೇಷಗಳು,ಅಳ್ಳಳ್ಳಿಬುವ್ವ ಸೇರಿದಂತೆ ನಾನಾ ರೀತಿಯ ಜನಪದ ಕಲೆಗಳು ಅನಾವರಣಗೊಳ್ಳುವ ವೇದಿಕೆಯಾಗಿದೆ ಅದರಂತೆ ತಾಲೂಕಿನ ಉಪ್ಪೇರಿಯಲ್ಲಿ ಯುವಕರ ತಂಡ ಮೋಡಿಕಾರರ ಆಟ ಆಡುವುದರ ಮೂಲಕ ಜನಮನವನ್ನು ರಂಜಿಸಿದ ದೃಶ್ಯಕಂಡು ಬಂತು
ಮAಡಲವನ್ನು ಕೊರೆದು ಅದರಲ್ಲಿ ಕಾಯಿ ಇಟ್ಟು ಅದನ್ನು ಎದುರಾಳಿ ತಂಡ ತರುವುದು ನೆಟ್ಟಿರುವ ಕಂಬದ ಹತ್ತಿರ ಹೋಗುವುದು ಲಿಂಬೆಹಣ್ಣ ತರುವುದು ಬೆಂಕಿ ಉರಿಯುವದು ಚೇಳು ಕಾಣಿಸುವುದು ಸೇರಿದಂತೆ ನಾನಾ ರೀತಿಯ ಆಟಗಳನ್ನು ಮನರಂಜನೆಗಾಗಿ ಇದರಲ್ಲಿ ಆಡಲಾಗುತ್ತದೆ ನಿಯಮದ ಪ್ರಕಾರ ಆಟ ಆಡಲು ಅವಕಾಶವಿಲ್ಲ ಆದರೆ ಮನರಂಜನೆಗಾಗಿ ಅಪಾಯವಿಲ್ಲದ ಕೆಲ ಆಟಗಳನ್ನುಮಾತ್ರ ಪ್ರದರ್ಶನ ಮಾಡುವುದರ ಮೂಲಕ ಹಬ್ಬಕ್ಕೆ ಆಗಮಿಸಿದ ಜನರಿಗೆ ಮನರಂಜನೆ ನೀಡುವ ಕೆಲಸವನ್ನು ಹಿರೇಉಪ್ಪೇರಿ ಗ್ರಾಮದ ಯುವಕರು ಪ್ರತಿವರ್ಷ ಮಾಡುತ್ತಾ ಬರುತಿದ್ದು ಅದರಂತೆ ಈ ವರ್ಷವು ಸಹಿತ ಮೋಡಿಕಾರರ ಆಟ ಆಡುವುದರ ಮೂಲಕ ಎಲ್ಲರನ್ನು ರಂಜಿಸಿದರು
ಈ ಭಾಗದಲ್ಲಿ ಈಚನಾಳ ಗ್ರಾಮದ ಸಹದೇವಪ್ಪ ಚಿಗರಿ ಇವರ ಹನಮಮ್ಮರಿಂದ ಬೆಳೆದುಬಂದ ಈ ಕಲೆಯನ್ನು ಈಗ ಸಹದೇವಪ್ಪನ ಮಾರ್ಗದರ್ಶನದಲ್ಲಿ ಹಿರೇಉಪ್ಪೇರಿ ಯುವಕರು ಆಡುತ್ತಿದ್ದಾರೆ ಜನಪದ ಕಲೆಯನ್ನು ಉಳಿಸಿ ಬೆಳೆಸುತ್ತಿರುವ ಯುವಕರ ಉತ್ಸಾಹವನ್ನು ಮೆಚ್ಚಲೆಬೇಕು ಅಲ್ಲವೇ?