ವೀರಾಪೂರು: ಮೌಲಾಲಿ ದೇವರ ಕತ್ತಲ್ ರಾತ್ರಿಯ ಸಂಭ್ರಮ ಹಿಂದೂ ಮುಸ್ಲಿಂ ಸೌಹಾರ್ದತೆಯಿಂದ ಹಬ್ಬ ಆಚರಣೆ

Laxman Bariker
ವೀರಾಪೂರು: ಮೌಲಾಲಿ ದೇವರ ಕತ್ತಲ್ ರಾತ್ರಿಯ ಸಂಭ್ರಮ ಹಿಂದೂ ಮುಸ್ಲಿಂ ಸೌಹಾರ್ದತೆಯಿಂದ ಹಬ್ಬ ಆಚರಣೆ
WhatsApp Group Join Now
Telegram Group Join Now

ವೀರಾಪೂರು: ಮೌಲಾಲಿ ದೇವರ ಕತ್ತಲ್ ರಾತ್ರಿಯ ಸಂಭ್ರಮ
ಹಿಂದೂ ಮುಸ್ಲಿಂ ಸೌಹಾರ್ದತೆಯಿಂದ ಹಬ್ಬ ಆಚರಣೆ

ಕಲ್ಯಾಣ ಕರ್ನಾಟಕ ವಾರ್ತೆ

ಹಟ್ಟಿ: ಪಟ್ಟಣಕ್ಕೆ ಸಮೀಪದ ವೀರಾಪೂರು ಗ್ರಾಮದಲ್ಲಿ ಹಿಂದೂ ಮುಸ್ಲಿಂ ಭಾವೈಕ್ಯತೆಯ ಹಬ್ಬ ಮೊಹರಂನ ಮೌಲಾಲಿ, ಖಾಸಿಂಪೀರ, ಹುಸೇನ್ ಪಾಷಾ, ಹಸೇನ್ ಹುಸೇನ್ ದೇವರ ಕತ್ತಲ್ ರಾತ್ರಿ ಬುಧವಾರದಂದು ಜರುಗಿತು.

ಗ್ರಾಮದಲ್ಲಿ ಹಿಂದೂಗಳೇ ಬಹು ಸಂಖ್ಯಾತರಿರುವ ಈ ಗ್ರಾಮದಲ್ಲಿ ಹಿಂದೂ ಮುಸ್ಲಿಂ ಸೇರಿ ಹಬ್ಬವನ್ನು ಸೌಹಾರ್ದತೆಯಿಂದ ಆಚರಿಸುವುದು ವಿಶೇಷವಾಗಿದೆ. ಭಕ್ತರು ಆಗಮಿಸಿ, ದೇವರ ದರ್ಶನ ಪಡೆದರು. ಅಲಾಯಿ ದೇವರಿಗೆ ಸಕ್ಕರೆ ನೈವೇದ್ಯ ಹರಕೆ ತೀರಿಸಿದರು.

ಬೆಳಗ್ಗೆ ದೇವರು ಹೊತ್ತವರು(ಕುದುರೆ) ಅಗ್ನಿಕುಂಡ ತುಳಿದು, ಗ್ರಾಮದ ನಾನಾ ಓಣಿಗಳಲ್ಲಿ ಹರಕೆ ಹೊತ್ತವರ ಮನೆಗಳಿಗೆ ಸವಾರಿ ಮಾಡಿದರು. ಗ್ರಾಮದ ಯುವಕರು ಎಡಗಾಳು ಹೆಜ್ಜೆ, ಬಲಗಾಲು ಹೆಜ್ಜೆ, ಕರಡಿ ಹೆಜ್ಜೆ, ಸೇರಿದಂತೆ ವಿವಿಧ ಹೆಜ್ಜೆಗಳ ಕುಣಿತ ಗಮನ ಸೆಳೆದವು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ದೌಲಸಾಬ್, ರಂಗಣ್ಣಗೌಡ, ಮಲ್ಲಪ್ಪ, ಗ್ರಾಮ ಪಂಚಾಯ್ತಿ ಸದಸ್ಯರಾದ ರಮೇಶ, ಸಂಜೀವಪ್ಪ, ಗ್ರಾಮಸ್ಥರಾದ ಭಾಷಾ ಸಾಬ್, ಹುಸೇನ್ ಬುಡ್ಡ, ಹುಲಗಯ್ಯ, ಮೌಲಾಸಾಬ್, ಅಡಿವೆಣ್ಣ, ಹನುಮಂತ ರೆಡ್ಡಿ, ಅಶೋಕ್ ದೇಸಾಯಿ, ಮೌನೇಶ್ ತಳವಾರ್, ನಿಂಗಪ್ಪ ಎಂ., ಅಮರಪ್ಪ ಈಚನಾಳ, ಮಹಾದೇವಪ್ಪಗೌಡ, ನಿಂಗಯ್ಯಸ್ವಾಮಿ, ಶಿವಪುತ್ರ ಗಣೇಚಾರಿ, ಮಹ್ಮದ್, ಬೆಟ್ಟಪ್ಪ ಸೇರಿದಂತೆ ಗ್ರಾಮಸ್ಥರು ಇದ್ದರು.

WhatsApp Group Join Now
Telegram Group Join Now
Share This Article